ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೋಲಿಸಿ ದೆಹಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ (IPL) ಋತುವಿನ ಮೊದಲ ಜಯವನ್ನು ದಾಖಲಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಸೂಪರ್ ಓವರ್ ತಲುಪಿದ ನಂತರ ಅವರ ತಂಡವು ಅಂತಹ ಸಂದರ್ಭಗಳಲ್ಲಿ ಒತ್ತಡಕ್ಕೆ ಬರುವುದಿಲ್ಲ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್ (Shreyas Iyer) 'ಪಂದ್ಯದಲ್ಲಿ ಇಂತಹ ಏರಿಳಿತಗಳನ್ನು ನೋಡುವುದು ಕಷ್ಟವಾಗಿತ್ತು. ಆದರೆ ನಮ್ಮ ತಂಡವು ಅದನ್ನು ಬಳಸಿಕೊಳ್ಳುತ್ತದೆ. ಕಳೆದ ಋತುವಿನಲ್ಲಿ ಸಹ ನಾವು ಅಂತಹ ಸಂದರ್ಭಗಳನ್ನು ಎದುರಿಸಿದ್ದೇವೆ ಎಂದರು.


IPL 2020: ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಸೂಪರ್ ಓವರ್ ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್


ಸೂಪರ್ ಓವರ್‌ನಲ್ಲಿ ಕೇವಲ ಎರಡು ರನ್‌ಗಳಿಗೆ ರಬಾಡಾ ಎರಡು ವಿಕೆಟ್ ಪಡೆದರು. ಅಯ್ಯರ್, "ರಬಾಡಾ ಪಂದ್ಯ ವಿಜೇತ ಆಟಗಾರ ಮತ್ತು ಸ್ಟೋನಿಸ್ ಬ್ಯಾಟಿಂಗ್ ಮಾಡಿದ ರೀತಿ, ಪಂದ್ಯದ ದಾಳ ಬದಲಾಯಿತು. ಕಣ್ಣುಗಳ ಮೇಲೆ ಬೆಳಕು ಬೀಳುವುದರಿಂದ ಕ್ಯಾಚ್ ತೆಗೆದುಕೊಳ್ಳುವುದು ಕಷ್ಟಕರವಾಗಿತ್ತು, ಆದರೆ ಇದು ಒಂದು ಕಾರಣವಲ್ಲ. ನಾವು ಈ ವಿಭಾಗದಲ್ಲಿ ಇನ್ನೂ ಸುಧಾರಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಅದೇ ಸಮಯದಲ್ಲಿ ಸ್ಟಾರ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಎರಡು ವಿಕೆಟ್ ಪಡೆದ ಪಂದ್ಯದಲ್ಲಿ ಕೇವಲ ಒಂದು ಓವರ್ ಮಾಡಲು ಸಾಧ್ಯವಾಯಿತು. ಅದರ ನಂತರ ಅವರು ಗಾಯಗೊಂಡ ನಂತರ ಮೈದಾನವನ್ನು ತೊರೆದರು. ಆದರೆ ಅವರು ಮುಂದಿನ ಪಂದ್ಯದಲ್ಲಿ ಆಡಬಹುದೆಂದು ಅಯ್ಯರ್ ಸುಳಿವು ನೀಡಿದರು.


IPL 2020: ಯುಎಇ ಬಿಸಿಲಿನ ಬೇಗೆ ಮಧ್ಯೆ ಈಜುಕೊಳದಲ್ಲಿ ಆಟಗಾರರ ಮೋಜು ಮಸ್ತಿ


'ಅಶ್ವಿನ್ ಅವರು ಮುಂದಿನ ಪಂದ್ಯದವರೆಗೆ ಫಿಟ್ ಆಗಿರುತ್ತಾರೆ ಎಂದು ವಿಶ್ವಾದ ವ್ಯಕ್ತಪಡಿಸಿದ ಅಯ್ಯರ್ ಆದರೆ ಕೊನೆಯಲ್ಲಿ ಫಿಸಿಯೊ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಗಾಯದ ಬಳಿಕ ಪಂದ್ಯಕ್ಕೆ ಮರಳಿದ ಆಕ್ಸರ್ ಪಟೇಲ್ ಮಧ್ಯಮ ಓವರ್‌ಗಳಲ್ಲಿ ಅದ್ಭುತ ಬೌಲಿಂಗ್ ಮಾಡಿದರು ಎಂದರು.


ಇದಲ್ಲದೆ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಎಲ್.ರಾಹುಲ್ (KL Rahul) ಮಾಯಾಂಕ್ ಅಗರ್ವಾಲ್ ಅವರನ್ನು ತೀವ್ರವಾಗಿ ಹೊಗಳಿದರು ಮತ್ತು ಅವರ ತಂಡದ ತಪ್ಪುಗಳ ಬಗ್ಗೆಯೂ ಮಾತನಾಡಿದರು.


ಇದು ನಮ್ಮ ಮೊದಲ ಪಂದ್ಯ ಮತ್ತು ಅದರಿಂದ ನಾವು ಬಹಳಷ್ಟು ಕಲಿತಿದ್ದೇವೆ' ಎಂದು ರಾಹುಲ್ ಹೇಳಿದರು. ಮಾಯಾಂಕ್ ನಂಬಲಾಗದ ಇನ್ನಿಂಗ್ಸ್ ಆಡಿದರು ಮತ್ತು ಪಂದ್ಯವನ್ನು ತುಂಬಾ ಹತ್ತಿರಕ್ಕೆ ತೆಗೆದುಕೊಂಡರು. ಅವರು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಪಂದ್ಯವನ್ನು ಇಷ್ಟು ಹತ್ತಿರಕ್ಕೆ ತರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.


ಫಲಿತಾಂಶ ಏನೇ ಇರಲಿ, ಕ್ಯಾಪ್ಟನ್ ಆಗಿ, ನಾನು ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ನಾವು ನಮ್ಮ ತಂತ್ರಕ್ಕೆ ಅಂಟಿಕೊಳ್ಳುತ್ತೇವೆ. ಆದರೆ ನಾವು ಕೆಲವು ತಪ್ಪುಗಳನ್ನು ಸಹ ಮಾಡಿದ್ದೇವೆ. ಐದು ವಿಕೆಟ್‌ಗಳಿಗೆ ಸ್ಕೋರ್ 55 ಆಗಿದ್ದಾಗಲೂ ನಾವು ಸಕಾರಾತ್ಮಕವಾಗಿ ಉಳಿದಿದ್ದೇವೆ ಎಂದವರು ತಮ್ಮ ತಂಡದ ಬಗ್ಗೆ ಹೇಳಿದರು.