Raghavendra Divgi: ಪ್ರಾಮಾಣಿಕತೆ ಎಂಬ ಪದ ತುಂಬಾ ದೊಡ್ಡದು. ಜೀವನದ ಪ್ರತೀ ಹೆಜ್ಜೆಯಲ್ಲೂ ಪ್ರಾಮಾಣಿಕರಾಗಿಯೇ ಉಳಿಯುವುದು ಸುಲಭವಲ್ಲ.. ಎಷ್ಟೇ ಪ್ರಾಮಾಣಿಕರಾಗಿದ್ದರೂ ಸಮಯ, ಸಂದರ್ಭದ ಅನಿವಾರ್ಯತೆಯ ಕಾರಣಕ್ಕೆ ಆ ಪ್ರಾಮಾಣಿಕತೆಗೆ ಸಾಸಿವೆ ಕಾಳಿನಷ್ಟಾದರೂ ಧಕ್ಕೆ ಬಂದೇ ಬರುತ್ತದೆ. ಆದರೆ ರಾಘವೇಂದ್ರ ಇದಕ್ಕೆ ಅಪವಾದ.
Rohit Sharma: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲಿನ ಬಳಿಕ ರೋಹಿತ್ ಶರ್ಮ ನಿವೃತ್ತರಾಗಲಿದ್ದಾರೆ ಅಂತಾ ಹೇಳಲಾಗಿತ್ತು. ಗೌತಮ್ ಗಂಭೀರ್ ಕೋಚ್ ಆಗುವುದಕ್ಕೂ ಮುನ್ನ ಟಿ-20 ಮಾದರಿಗೆ ನಿವೃತ್ತಿ ಘೋಷಿಸಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ನಂತರ ಏಕದಿನ ಹಾಗೂ ಟೆಸ್ಟ್ ಮಾದರಿಗೂ ನಿವೃತ್ತಿ ಘೋಷಿಸಲಿದ್ದಾರೆ ಅಂತಾ ಸುದ್ದಿಯಾಗಿತ್ತು.
Champions Trophy: ಬಹುತೇಕರು ಭಾರತ ತಂಡವೇ ಚಾಂಪಿಯನ್ ಟ್ರೋಫಿ ಗೆಲ್ಲಲಿ ಎಂದು ಆಶಿಸಿದ್ದಾರೆ. ಆದರೆ ಭಾರತವು ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅನಪೇಕ್ಷಿತ ದಾಖಲೆಯನ್ನ ಹೊಂದಿದೆ. ಇಂದಿನ ಪಂದ್ಯ ಗೆದ್ದರೆ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಲಿದೆ. ಒಂದು ವೇಳೆ ಇಂದಿನ ಫೈನಲ್ ಫೈಟ್ನಲ್ಲಿ ರೋಹಿತ್ ಪಡೆ ಗೆದ್ದರೆ 37 ವರ್ಷಗಳ ಹಳೆಯ ಶಾಪದಿಂದ ವಿವೋಚನೆ ದೊರೆಯಲಿದೆ.
IND vs NZ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡವು ಮಾರ್ಚ್ 9ರಂದು ದುಬೈ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಐಸಿಸಿ ಟೂರ್ನಮೆಂಟ್ಗಳ ನಾಕೌಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾದ ದಾಖಲೆಯನ್ನು ನೋಡಿದರೆ, ಅದು ತುಂಬಾ ಕಳಪೆಯಾಗಿದೆ.
ICC Champions Trophy 2025: ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಟೀಂ ಇಂಡಿಯಾ ಈಗ ವಿಶ್ರಾಂತಿ ಪಡೆಯಲಿದೆ. ನಂತರ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಬಳಿಕ ಭಾರತ ತಂಡವು ತನ್ನ ಸೆಮಿಫೈನಲ್ ಪಂದ್ಯವನ್ನು ದುಬೈನಲ್ಲಿ ಆಡಲಿದೆ.
PAK vs IND: ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮತ್ವದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ICC Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ ವಿಕೆಟ್ಗಳ ಸಂಖ್ಯೆ ಈಗ 200 ತಲುಪಿದೆ.
Pakistan vs India: ತಂಡದ ಮೊತ್ತ 41 ರನ್ ಆಗಿದ್ದಾಗ ಪಾಕ್ ತಂಡದ ಆರಂಭಿಕ ಆಟಗಾರ ಬಾಬರ್ ಆಜಮ್ (23) ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ಮತ್ತೊಬ್ಬ ಆಟಗಾರ ಇಮಾಮ್-ಉಲ್-ಹಕ್ (10) ಅಕ್ಸರ್ ಪಟೇಲ್ರಿಂದ ರನ್ಔಟ್ಗೆ ಬಲಿಯಾದರು.
ICC Champions Trophy 2025: ಪ್ರಸಕ್ತ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಗ್ರೂಪ್ ʼAʼನ ಎರಡು ಬಲಿಷ್ಠ ತಂಡಗಳು ಸೆಣಸಾಡಲು ಸಜ್ಜಾಗಿವೆ. ಈ ಜಿದ್ದಾಜಿದ್ದಿನ ಹಣಾಹಣಿ ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ಕಾದು ಕುಳಿತಿದೆ. ಈ ಮಹತ್ವದ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.
2025 ರ ಚಾಂಪಿಯನ್ಸ್ ಟ್ರೋಫಿಯ ಬಹುಮಾನದ ಹಣವನ್ನು ಐಸಿಸಿ ಘೋಷಿಸಿದೆ. ಪಂದ್ಯಾವಳಿಯನ್ನು ಗೆಲ್ಲುವ ತಂಡಕ್ಕೆ 2.24 ಮಿಲಿಯನ್ ಯುಎಸ್ ಡಾಲರ್ ಬಹುಮಾನವಾಗಿ ನೀಡಲಾಗುವುದು, ಇದು ಭಾರತೀಯ ರೂಪಾಯಿ ಮೌಲ್ಯದಲ್ಲಿ 19.45 ಕೋಟಿ ರೂ.ಗಳಾಗಿವೆ. ಅದಾಗ್ಯೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೆಲವು ಭಾರತೀಯ ಆಟಗಾರರು 2025 ರ ಚಾಂಪಿಯನ್ಸ್ ಟ್ರೋಫಿಯ ಬಹುಮಾನದ ಮೊತ್ತಕ್ಕೆ ಹೋಲಿಸಿದರೆ 2025 ರ ಋತುವಿನಲ್ಲಿ ಹೆಚ್ಚಿನ ಸಂಬಳವನ್ನು ಹೊಂದಿದ್ದಾರೆ.ಈಗ ಆ ಭಾರತೀಯ ಆಟಗಾರರು ಯಾರು ಎನ್ನುವುದನ್ನು ತಿಳಿಯೋಣ ಬನ್ನಿ.
Shubman Gill Century: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರವಾಸಿ ಇಂಗ್ಲೆಂಡ್ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭಮನ್ ಗಿಲ್ ಸ್ಫೋಟಕ ಶತಕ ಸಿಡಿಸಿದ್ದಾರೆ.
Rohit Sharma: ದೀರ್ಘ ಕಾಲದಿಂದ ಕಳಪೆ ಫಾರ್ಮ್ನಲ್ಲಿದ್ದ ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಹಿಟ್ಮ್ಯಾನ್ ಒಟ್ಟು 76 ಎಸೆತಗಳಲ್ಲಿ ರೋಹಿತ್ ಶರ್ಮಾ 7 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಶತಕ ಸಾಧನೆ ಮಾಡಿದರು.
IND vs BAN: ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾ ತಂಡದಲ್ಲಿ ಬಿಸಿಸಿಐ ಕೆಲವು ಹೊಸ ಮುಖಗಳನ್ನು ನೀಡಿದೆ. ಇದರ ಲಾಭ ಪಡೆಯುವಲ್ಲಿ ನಿತೀಶ್ ರೆಡ್ಡಿ ಮತ್ತು ಮಯಾಂಕ್ ಯಾದವ್ ಕೂಡ ಯಶಸ್ವಿಯಾದರು.
IND vs BAN: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ 2ನೇ ಮತ್ತು ಕೊನೆಯ ಪಂದ್ಯ ಸೆಪ್ಟೆಂಬರ್ 27ರಿಂದ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕಾನ್ಪುರದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿದ್ದ 7 ಆಟಗಾರರು ಟೀಂ ಇಂಡಿಯಾದ ಭಾಗವಾಗಿಲ್ಲ.
Shreyas Iyer Rohit sharma: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿಯೂ ಹಲವಾರು ಆಟಗಾರರು ರೋಹಿತ್ ಅವರ ಅಭಿಮಾನಿಗಳೆಂದೇ ಹೇಳಬಹುದು. ಇದಕ್ಕೆ ಉದಾಹರನೆಯಂತೆ ಚಾಂಪಿಯನ್ ನಾಯಕನಿಗೆ ಆಟಗಾರರಲ್ಲಿ ಎಷ್ಟು ಗೌರವವಿದೆ ಎಂಬುದು ಬುಧವಾರ(ಆಗಸ್ಟ್ 21)ದಂದು ನಡೆದ ಪ್ರಶಸ್ತಿ ಸಮಾರಂಭದಲ್ಲಿ ಕಂಡುಬಂದಿದೆ.
CEAT Cricket Awards: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಪ್ರತಿಮ ಆಟಗಾರರಿಗಾಗಿ ಚಾಡ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಕ್ರಿಕೆಟ್ನ ಹಲವು ಟಾಪ್ ಸ್ಟಾರ್ಗಳು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು. ಹಿಂದಿನ ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.
Jasprit Bumrah: ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ನಿಂದ ದೂರ ಉಳಿಯಲಿದ್ದಾರೆ. ತವರಿನಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದ ಬೂಮ್ರಾ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.