ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 43ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ತಂಡವು ಹೈದರಾಬಾದ್ ವಿರುದ್ಧ 12 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.


ಯುನಿವರ್ಸ್ ಬಾಸ್ ರನ್ನು ಔಟ್ ಮಾಡುವ ಮೊದಲು ಅವರ ಕಾಲುಗಳನ್ನು ಕಟ್ಟಿ ಹಾಕಬೇಕು- ಆರ್.ಅಶ್ವಿನ್


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿದ ಹೈದರಾಬಾದ್ ತಂಡವು ಮಾರಕ ಬೌಲಿಂಗ್ ದಾಳಿ ಮೂಲಕ ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಕಿಂಗ್ಸ್ ಇಲೆವನ್ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 126 ರನ್ ಗಳನ್ನು ಗಳಿಸಿತು. ಪಂಜಾಬ್ ತಂಡದ ಪರವಾಗಿ ಪೂರಣ್ ಅಜೇಯ  32 ಗಳಿಸಿದ್ದೆ ಅತ್ಯಧಿಕ ಮೊತ್ತವಾಗಿತ್ತು. ಇನ್ನೊಂದೆಡೆಗೆ ಹೈದರಾದ್ ಪರವಾಗಿ ರಶಿದ್ ಖಾನ್ ನಾಲ್ಕು ಓವರ್ ಗಳಲ್ಲಿ ಕೇವಲ 14 ರನ್ ಗಳನ್ನು ನೀಡುವುದರ ಮೂಲಕ ಎರಡು ವಿಕೆಟ್ ಕಬಳಿಸಿದರು.



ಪಂಜಾಬ್ ತಂಡವು ನೀಡಿದ 127 ರನ್ ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡವು ಉತ್ತಮ ಆರಂಭವನ್ನೇ ಖಂಡಿತು. ನಾಯಕ ಡೇವಿಡ್ ವಾರ್ನರ್ 35 ಹಾಗೂ ಬೇರ್ ಸ್ಟೋ 19 ರನ್ ಗಳಿಸಿದ್ದರಿಂದಾಗಿ ಸುಲಭವಾಗಿ ಪಂದ್ಯವನ್ನು ಗೆಲ್ಲುತ್ತಾರೆ ಎಂದು ಭಾವಿಸಲಾಗಿತ್ತು.ಆದರೆ ಯಾವಾಗ ಈ ಆರಂಭಿಕ ಎರಡು ವಿಕೆಟ್ ಗಳು ಉರುಳಿದವು ಆಗಿನಿಂದ ಹೈದರಾಬಾದ್ ಪತನದ ಯಾನ ಆರಂಭವಾಯಿತು.



ಪಂದ್ಯದ ಮಧ್ಯದಲ್ಲಿ ಬೀಗುವಿನ ದಾಳಿ ನಡೆಸಿದ ಪಂಜಾಬ್ ತಂಡವು ಪಂದ್ಯವನ್ನು ತನ್ನ ಕಡೆ ವಾಲುವಂತೆ ಮಾಡಿತು.ಅದರಲ್ಲೂ ಡೆತ್ ಓವರ್ ಗಳಲ್ಲಿ ಆರ್ಶದೀಪ್ ಹಾಗೂ ಕ್ರಿಸ್ ಜೋರ್ಡನ್ ಓವರ್ ವೊಂದರಲ್ಲಿ ತಲಾ ಎರಡು ವಿಕೆಟ್ ಕಬಳಿಸುವ ಮೂಲಕ ಪಂದ್ಯವನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಇನ್ನೊಂದೆಡೆ ಕ್ಷೇತ್ರ ರಕ್ಷಣೆ ವಿಭಾಗದಲ್ಲಿ ಹಿಡಿದ ಕೆಲವು ಅದ್ಬುತ ಕ್ಯಾಚ್ ಗಳಿಂದಾಗಿ ಪಂದ್ಯ ಪಂಜಾಬ್ ಕಡೆ ವಾಲಿತು.ಕೊನೆಗೆ ಹೈದರಾಬಾದ್ ತಂಡವು 19.5 ಓವರ್ ಗಳಲ್ಲಿ 114 ರನ್ ಗಳಿಗೆ ಸರ್ವಪತನ ಖಂಡಿತು