ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗುರುವಾರ 2000 ರನ್ ಗಳಿಸಿದ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 63 ಇನಿಂಗ್ಸ್‌ಗಳಲ್ಲಿ ಮೈಲಿಗಲ್ಲು ತಲುಪಿದ ಮುಂಬೈ ಇಂಡಿಯನ್ಸ್‌ನ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಎಂಟು ವರ್ಷದ ದಾಖಲೆಯನ್ನು ಕೆ.ಎಲ್ ರಾಹುಲ್ ಮುರಿದರು.


ನೂತನ ಟಿ20 ಕ್ರಿಕೆಟ್ ದಾಖಲೆ ಹಾದಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್


COMMERCIAL BREAK
SCROLL TO CONTINUE READING

2018 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ತೆರಳಿದಾಗಿನಿಂದ ಉತ್ತಮ ಫಾರ್ಮ್ ನಲ್ಲಿರುವ 28 ವರ್ಷದ ರಾಹುಲ್, ದುಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ 60 ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆಗೈದರು. ರಾಹುಲ್ ತಂಡದ ಸಹ ಆಟಗಾರ ಕ್ರಿಸ್ ಗೇಲ್ 2000 ರನ್ ಗಳಿಸಿದ ಅತಿ ವೇಗದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ತಮ್ಮ 48 ನೇ ಇನ್ನಿಂಗ್‌ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.


'ಸೂಪರ್' ಓವರ್ ಗೆ ಕನ್ನಡಿಗ ಕೆ.ಎಲ್ ರಾಹುಲ್ ಕೊಹ್ಲಿಗೆ ನೀಡಿದ್ದರು ಈ 'ಗೋಲ್ಡನ್' ಸಲಹೆ..!


ರಾಹುಲ್ ಕ್ಲಾಸ್ ಆಟ ನನಗೆ ಮೊದಲು ರೋಹಿತ್ ಶರ್ಮಾ ಮತ್ತು ಡೇಮಿಯನ್ ಮಾರ್ಟಿನ್ ಅವರನ್ನು ನೆನಪಿಸಿದೆ, ಗೋರ್ಡಾನ್ ಗ್ರೀನಿಡ್ಜ್‌ ವರಗೆ ಸಾಗಿದೆ ಎಂದು ಮಾಜಿ ಆರ್‌ಸಿಬಿ ಬ್ಯಾಟಿಂಗ್ ತರಬೇತುದಾರ ಟ್ರೆಂಟ್ ವುಡ್‌ಹಿಲ್ ತಿಳಿಸಿದ್ದರು. ಅವರು ಚೆಂಡನ್ನು ತುಂಬಾ ತಡವಾಗಿ ಹೊಡೆದರು ಮತ್ತು ಅವರ ಸ್ವಿಂಗ್ ತುಂಬಾ ಶುದ್ಧವಾಗಿದ್ದು, ತಡವಾದ ತೂಕ ವರ್ಗಾವಣೆಯ ಮೂಲಕ ಅಡೆತಡೆಯಿಲ್ಲದ ಬ್ಯಾಕ್ ಸ್ವಿಂಗ್ ಮೂಲಕ ಅವರು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತಾರೆ ಮತ್ತು ಅನುಸರಿಸುತ್ತಾರೆ.' ಎಂದು ಅವರು ಹೇಳಿದರು.


ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ 69 ಎಸೆತಗಳಲ್ಲಿ 132 ರನ್ ಗಳಿಸುವ ಮೂಲಕ ಐಪಿಎಲ್ ಪಂದ್ಯವೊಂದರಲ್ಲಿ  ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.