'ಸೂಪರ್' ಓವರ್ ಗೆ ಕನ್ನಡಿಗ ಕೆ.ಎಲ್ ರಾಹುಲ್ ಕೊಹ್ಲಿಗೆ ನೀಡಿದ್ದರು ಈ 'ಗೋಲ್ಡನ್' ಸಲಹೆ..!

ಭಾರತದ ನಾಯಕ ವಿರಾಟ್ ಕೊಹ್ಲಿ ಕೆ.ಎಲ್ ರಾಹುಲ್ ಜೊತೆಗೆ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಈಗ ಈ ನಿರ್ಧಾರದ ಹಿನ್ನಲೆಯನ್ನು ಸ್ವತಃ ನಾಯಕ ಕೊಹ್ಲಿ ಬಹಿರಂಗ ಪಡಿಸಿದ್ದಾರೆ.

Last Updated : Jan 31, 2020, 08:32 PM IST
 'ಸೂಪರ್' ಓವರ್ ಗೆ ಕನ್ನಡಿಗ ಕೆ.ಎಲ್ ರಾಹುಲ್ ಕೊಹ್ಲಿಗೆ ನೀಡಿದ್ದರು ಈ 'ಗೋಲ್ಡನ್' ಸಲಹೆ..! title=
Photo courtesy: Twitter

ನವದೆಹಲಿ: ಭಾರತದ ನಾಯಕ ವಿರಾಟ್ ಕೊಹ್ಲಿ ಕೆ.ಎಲ್ ರಾಹುಲ್ ಜೊತೆಗೆ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಈಗ ಈ ನಿರ್ಧಾರದ ಹಿನ್ನಲೆಯನ್ನು ಸ್ವತಃ ನಾಯಕ ಕೊಹ್ಲಿ ಬಹಿರಂಗ ಪಡಿಸಿದ್ದಾರೆ.

ರೋಹಿತ್ ಶರ್ಮಾ ಬದಲಿಗೆ ಸ್ಥಾನ ಪಡೆದ ಸಂಜು ಸ್ಯಾಮ್ಸನ್ ಅವರು ಸೂಪರ್ ಓವರ್ ನಲ್ಲಿ ಕೆ.ಎಲ್.ರಾಹುಲ್ ಅವರ ಜೊತೆಗೆ ಇನಿಂಗ್ಸ್ ಆರಂಭಿಸಬೇಕಾಗಿತ್ತು ಆದರೆ ಕೊನೆಯ ಕ್ಷಣದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ನೀಡಿದ ಸಲಹೆಯಿಂದಾಗಿ ಕೊಹ್ಲಿ ನಿರ್ಧಾರವನ್ನು ಬದಲಿಸಿದರು ಎನ್ನುವ ವಿಷಯವನ್ನು ಈಗ ಅವರೇ ಬಹಿರಂಗಪಡಿಸಿದ್ದಾರೆ. "ಆರಂಭದಲ್ಲಿ ಸಂಜು ಮತ್ತು ಕೆ.ಎಲ್.ರಾಹುಲ್ ಅವರು ಚೆನ್ನಾಗಿ ಆಡಬಲ್ಲರು ಎಂದು ಭಾವಿಸಿದ್ದೆ, ಆದರೆ ಕೆ.ಎಲ್.ರಾಹುಲ್ ನಾನು ಹೆಚ್ಚು ಅನುಭವಿ ಒತ್ತಡದ ಪರಿಸ್ಥಿತಿಯಲ್ಲಿ ವಿಷಯಗಳನ್ನು ನಿಭಾಯಿಸುಬಹುದು ಎಂದು ನನಗೆ ಸೂಚಿಸಿದ್ದರಿಂದಾಗಿ ನಾನು ಹೋದೆ' ಎಂದು ಕೊಹ್ಲಿ ಹೇಳಿದ್ದಾರೆ.

ಕೆ.ಎಲ್.ರಾಹುಲ್ ನೀಡಿದ ಸಲಹೆ ನಿಜಕ್ಕೂ ವರ್ಕೌಟ್ ಆಗಿದೆ ಎಂದು ಹೇಳಬಹುದು. ಸೂಪರ್ ಓವರ್ ನಲ್ಲಿ ನ್ಯೂಜಿಲೆಂಡ್ ನೀಡಿದ 14 ರನ್ ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ರಾಹುಲ್ ಅವರ ಆರಂಭಿಕ ಸಿಕ್ಸರ್ ಹಾಗೂ ಬೌಂಡರಿ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಕೊನೆಗೆ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ಭಾರತ ತಂಡವನ್ನು ಗೆಲುವಿನ ತಡಕ್ಕೆ ಸೇರಿಸಿದರು.

 

 

Trending News