ನವದೆಹಲಿ: IPL 2021 ಕ್ಕೆ ಕೊರೊನಾ ಎಂಟ್ರಿ ಹೊಡೆದಿದೆ (Covid Entry In IPL 2021). ಇದಾದ ಬಳಿಕ ಇಡೀ ಟೂರ್ನಿಯೇ ರದ್ದಾಗುವ ಅಪಾಯ ಎದುರಾಗಿದೆ. ಸೋಮವಾರ ಕೊಲ್ಕತಾ ನೈಟ್ ರೈಡರ್ಸ್ ಕ್ರಿಕೆಟಿಗ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಅವರ ಕೊವಿಡ್ ವರದಿ ಪಾಸಿಟಿವ್ ಹೊರಬಂದಿದೆ. ಇದೆ ಕಾರಣದಿಂದ ಸೋಮವಾರ ಸಂಜೆ ನಿಗದಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತಾ ನೈಟ್ ರೈಡರ್ಸ್ (KKR VS RCB) ನಡುವಿನ ಪಂದ್ಯವನ್ನು  ತಕ್ಷಣ ರದ್ದುಗೊಳಿಸಲಾಗಿದೆ. 


COMMERCIAL BREAK
SCROLL TO CONTINUE READING

ಬಯೋ ಬಬಲ್ ನಲ್ಲಿ ನಡೆದ ಅಜಾಗರೂಕತೆ 
ಪ್ರಸ್ತುತ ಲೆಗ್ ಸ್ಪಿನ್ನರ್ ಆಗಿರುವ ಚಕ್ರವರ್ತಿ ಹಾಗೂ ವೇಗಿ ವಾರಿಯರ್ ಇಬ್ಬರನ್ನು ಕ್ವಾರಂಟೀನ್ ನಲ್ಲಿಡಲಾಗಿದೆ. ಈ ಇಬ್ಬರು 30 ವರ್ಷದ ಯುವ ಆಟಗಾರರಾಗಿದ್ದಾರೆ. ಈ ಇಬ್ಬರಲ್ಲಿ ವಾರಿಯರ್ ಗೆ ಪ್ರಸ್ತುತ ಐಪಿಎಲ್ ಸೀಸನ್ ನಲ್ಲಿ ಕೆಕೆಆರ್ ಆಡಿರುವ ಒಟ್ಟು ಏಳು ಪಂದ್ಯಗಳಲ್ಲಿ ಒಂದು ಪಂದ್ಯ ಆಡುವ ಅವಕಾಶ ಕೂಡ ಸಿಕ್ಕಿಲ್ಲ. ಕೆಕೆಆರ್ ತನ್ನ ಹಿಂದಿನ ಪಂದ್ಯ ಅಹ್ಮದಾಬಾದ್ ನಲಿ ಏಪ್ರಿಲ್ 29 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದೆ. ಈ ಹಿನ್ನೆಲೆ ಈ ಇಬ್ಬರ ವರದಿ ಪಾಸಿಟಿವ್ ಬಂದ ಕಾರಣ ಇಡೀ ಟೂರ್ನಿಯಲ್ಲಿಯೇ ಭಯದ ಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ- KKR vs RCB: ಇಬ್ಬರಿಗೆ ಕರೋನಾ ದೃಢ, ಕೆಕೆಆರ್, ಆರ್ಸಿಬಿ ನಡುವಿನ ಪಂದ್ಯ ಮರುನಿಗದಿ


ದೊಡ್ಡ ತಪ್ಪು ಎಸಗಿದ ಚಕ್ರವರ್ತಿ 
ಗುರುವಾರ ನಡೆದ ಪಂದ್ಯದ ಬಳಿಕ ಚಕ್ರವರ್ತಿ ತಮ್ಮ ಹೆಗಲಿನ ಸ್ಕ್ಯಾನ್ ಮಾಡಲು ಆಸ್ಪತ್ರೆಗೆ ಭೇಟಿ ನೀಡಿದ್ದರು ಹಾಗೂ ವೈರಸ್ ಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಟೂರ್ನಿ ನಡೆಯುತ್ತಿರುವ ಮಧ್ಯೆಯೇ ಯಾವುದೇ ಓರ್ವ ಕ್ರಿಕೆಟ್ ಆಟಗಾರ ಕೊರೊನಾ ಪಾಸಿಟಿವ್ ಕಂಡುಬಂದಿರುವುದು ಇದೆ ಮೊದಲ ಪ್ರಕರಣ. ಭಾರತದಲ್ಲಿ ನಿತ್ಯ ಕೊವಿಡ್-19 (Covid-19)  ಸೋಂಕಿನ ಮೂರು ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಿತ್ಯ ಮೂರು ಸಾವಿರಕ್ಕೂ ಅಧಿಕ ಜನರು ಈ ಮಾರಕ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆ ಆಟಗಾರರಿಂದ ನಡೆದ ಒಂದು ಸಣ್ಣ ತಪ್ಪಿನ ಕಾರಣ ಇಡೀ ಟೂರ್ನಿಯೇ ರದ್ದಾಗುವ ಅಪಾಯದಲ್ಲಿದೆ


ಇದನ್ನೂ ಓದಿ- IPL 2021: ಪಾಯಿಂಟ್ ಟೇಬಲ್‌ನಲ್ಲಿ ನಂಬರ್ -1 ಸ್ಥಾನ ತಲುಪಿದ ನಂತರ ರಿಷಭ್ ಪಂತ್ ಮಹತ್ವದ ಹೇಳಿಕೆ


ದೆಹಲಿ ಆಟಗಾರರ ಕೊರೊನಾ ಟೆಸ್ಟ್ 
ಈ ಕುರಿತು ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಇದೀಗ ದೆಹಲಿ ಕ್ಯಾಪಿಟಲ್ಸ್ ಆಟಗಾರರ ಕೊರೊನಾ ಟೆಸ್ಟ್ ಕೂಡ ನಡೆಯಲಿದೆ ಹಾಗೂ ಚಕ್ರವರ್ತಿ - ವಾರಿಯರ್ ಸಂಪರ್ಕಕ್ಕೆ ಬಂದ ಪ್ರತಿಯೊಂದು ಆಟಗಾರರನ್ನು ಆಪ್ ಮೂಲಕ ಪತ್ತೆ ಹಚ್ಚಲಾಗುವುದು. ಇಲ್ಲಿ ಸಮಾಧಾನಕರ ವಿಷಯವೆಂದರೆ, ಕೆ.ಕೆ.ಆರ್ ತಂಡದ ಇತರೆ ಸದಸ್ಯರ (KKR Team Players) ಕೊರೊನಾ ವರದಿ ನಕಾರಾತ್ಮಕ ಬಂದಿದೆ. ಆದರೆ ಈ ಇಬ್ಬರು ಆಟಗಾರರ ಎರಡನೇ RT-PCR ವರದಿಯ ಫಲಿತಾಂಶ ಈ ಸಂಜೆಗೂ ಮುನ್ನ ಬರುವ ಸಾಧ್ಯತೆ ಇಲ್ಲ. ಹೀಗಾಗಿ ಇಂದು ಸಂಜೆ ನಡೆಯಬೇಕಿದ್ದ ಪಂದ್ಯ ಆಯೋಜೆನ ಬಹುತೇಕ ನಡೆಯುವುದಿಲ್ಲ ಎನ್ನಲಾಗಿದೆ.


ಇದನ್ನೂ ಓದಿ- Punjab vs Delhi: ವ್ಯರ್ಥವಾದ ಮಾಯಾಂಕ್ ಪ್ರಯತ್ನ, ದೆಹಲಿ ಕ್ಯಾಪಿಟಲ್ಸ್ ಗೆ 7 ವಿಕೆಟ್ ಗಳ ಗೆಲುವು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.