ನವದೆಹಲಿ: ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ ಟೂರ್ನಿಯ 29 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ: IPL 2021, SRH vs RR: ಡೇವಿಡ್ ವಾರ್ನರ್ ರನ್ನು ತಂಡದಿಂದ ಕೈ ಬಿಟ್ಟ SRH
ಟಾಸ್ ಗೆದ್ದು ದೆಹಲಿ ಕ್ಯಾಪಿಟಲ್ಸ್ ತಂಡವು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತು. ಇನ್ನೊಂದೆಡೆಗೆ ನಾಯಕ ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡ ಪ್ರಭಸಿಮ್ರಾನ್ ಜೊತೆ ಇನಿಂಗ್ಸ್ ಆರಂಭಿಸಿದರು. ಆದರೆ ತಂಡದ ಮೊತ್ತ 35 ಆಗುವಷ್ಟರಲ್ಲಿ ಎರಡು ಕ್ರಿಸ್ ಗೆಲ್ ಸೇರಿ ಎರಡು ವಿಕೆಟ್ ಗಳನ್ನು ಕಳೆದುಕೊಂಡ ಪಂಜಾಬ್ ತಂಡವು ತೀವ್ರ ಸಂಕಷ್ಟಕ್ಕೆ ಸಿಲುಕಿತು.
It's more than a 💯 for us ♥️#SaddaPunjab #IPL2021 #PunjabKings #PBKSvDC pic.twitter.com/OzA8UNdqFb
— Punjab Kings (@PunjabKingsIPL) May 2, 2021
ಈ ಹಂತದಲ್ಲಿ ಮಾಯಾಂಕ್ ಅಗರವಾಲ್ ಸ್ಪೋಟಕ ಬ್ಯಾಟಿಂಗ್ ಮಾಡಿದರು. ಇವರಿಗೆ ಸ್ವಲ್ಪ ಸಮಯ ಮಲನ್ ಸಾಥ್ ನೀಡಿದರೂ ಸಹಿತ ಅವರು 26 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.ಆದರೆ ಇದಕ್ಕೆ ವಿಚಲಿತರಾಗದ ಮಾಯಾಂಕ್ ಅಗರ್ ವಾಲ್ (Mayank Agarwal) ಮಾತ್ರ 58 ಎಸೆತಗಳಲ್ಲಿ ಎಂಟು ಭರ್ಜರಿ ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್ ನೆರವಿನಿಂದಾಗಿ 99 ರನ್ ಗಳಿಸಿ ಅಜೇಯರಾಗಿ ಉಳಿದರು. ಆ ಮೂಲಕ ಪಂಜಾಬ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 166 ರನ್ ಗಳನ್ನು ಗಳಿಸಿತು.
ಇದನ್ನೂ ಓದಿ: Mumbai vs Chennai:ಕಿರಣ್ ಪೋಲ್ಲಾರ್ಡ್ ಅಬ್ಬರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತತ್ತರ
All Over: @DelhiCapitals beat #PBKS by 7 wickets and with 14 balls to spare to register their 2nd consecutive win. Opener @SDhawan25 finishes unbeaten on 69. #DC have lost only 1 of their last 5 games. https://t.co/Rm0jfZKXXT #PBKSvDC #VIVOIPL #IPL2021 pic.twitter.com/apKB5wS3X7
— IndianPremierLeague (@IPL) May 2, 2021
ಇನ್ನೊಂದೆಡೆಗೆ 167 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ದೆಹಲಿ ತಂಡವು ಆರಂಭಿಕ ಆಟಗಾರರಾದ ಪೃಥ್ವಿ ಷಾ (39) ಹಾಗೂ ಶಿಖರ್ ಧವನ್ (69) ಭರ್ಜರಿ ಬ್ಯಾಟಿಂಗ್ ನಿಂದಾಗಿ ತಂಡವು ಕೇವಲ 17.4 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ದಡವನ್ನು ಸೇರಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.