IPL 2021: MS Dhoni ಸಿಎಸ್‌ಕೆ ಬಗ್ಗೆ ಭವಿಷ್ಯ ನುಡಿದ ಗೌತಮ್ ಗಂಭೀರ್
IPL 2021: ಐಪಿಎಲ್ ಪ್ರಾರಂಭವಾಗುವ ಮುನ್ನ ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಬಗ್ಗೆ ಗೌತಮ್ ಗಂಭೀರ್ (Gautam Gambhir) ಭವಿಷ್ಯ.
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2021 (ಐಪಿಎಲ್ 2021)ರ ಉತ್ಸವ ನಾಳೆಯಿಂದ ಪ್ರಾರಂಭವಾಗುತ್ತಿದೆ, ಆದರೆ ಇದಕ್ಕೂ ಮುನ್ನ ಅನೇಕ ಅನುಭವಿಗಳು ಐಪಿಎಲ್ ತಂಡಗಳ ಬಗ್ಗೆ ತಮ್ಮ ಭವಿಷ್ಯ ನುಡಿದಿದ್ದಾರೆ. ಏತನ್ಮಧ್ಯೆ, ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ (Gautam Gambhir) ಕೂಡ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಐಎಸ್‌ಎಲ್ ಪ್ರಾರಂಭವಾಗುವ ಮುನ್ನ ಸಿಎಸ್‌ಕೆ ಬಗ್ಗೆ ಭವಿಷ್ಯ ನುಡಿದಿರುವ ಗೌತಮ್ ಗಂಭೀರ್ ಈ ವರ್ಷ ಸಿಎಸ್‌ಕೆ ತಂಡವು ಪ್ಲೇಆಫ್ ತಲುಪುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಎಸ್‌ಕೆ ಬಗ್ಗೆ ಗಂಭೀರ್ ಭವಿಷ್ಯ :
ಕಳೆದ ವರ್ಷದಂತೆ ಈ ವರ್ಷವೂ ಕೂಡ ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಐಪಿಎಲ್ ನಲ್ಲಿ ಪ್ಲೇಆಫ್ ತಲುಪುವುದೂ ಕೂಡ ಅನುಮಾನವೇ ಎಂದು ಗೌತಮ್ ಗಂಭೀರ್ (Gautam Gambhir) ಹೇಳಿದ್ದಾರೆ. ಇಎಸ್ಪಿಎನ್ ಕ್ರಿಕ್ಇನ್ಫೊ (ESPN Cricinfo) ಅವರೊಂದಿಗಿನ ಸಂಭಾಷಣೆಯಲ್ಲಿ, ಗೌತಮ್ ಗಂಭೀರ್ ಚೆನ್ನೈ ಸೂಪರ್ ಕಿಂಗ್ಸ್ ಈ ಋತುವಿನಲ್ಲಿ ಸಹ ಪ್ಲೇಆಫ್ ತಲುಪುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ - IPL ಮೇಲೆ ಕರೋನಾ ಕಾರ್ಮೋಡ, ಆರ್‌ಸಿಬಿಯ ಸ್ಟಾರ್ ಕ್ರಿಕೆಟಿಗನಿಗೆ ಕರೋನಾ ದೃಢ
ಕಳೆದ ಋತುವಿನಲ್ಲೂ ವಿಫಲವಾಗಿದ್ದ ಧೋನಿ ಪಡೆ:
ಎಂ.ಎಸ್. ಧೋನಿ (MS Dhoni) ತಂಡ ಸಿಎಸ್‌ಕೆ (CSK) ಕಳೆದ ಐಪಿಎಲ್ ಋತುವಿನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಸ್‌ಕೆ (CSK) ಐಪಿಎಲ್ ಪ್ಲೇಆಫ್ ಅನ್ನು ತಲುಪಲು ವಿಫಲವಾಯಿತು.
ಈ ಹಿಂದೆ 9 ಬಾರಿ ಫೈನಲ್ ಪಂದ್ಯಗಳನ್ನು ಆಡಿರುವ ಸಿಎಸ್‌ಕೆ :
ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಎಂದರೆ 9 ಬಾರಿ ಫೈನಲ್ ಪಂದ್ಯಗಳನ್ನು ಆಡಿರುವ ಸಿಎಸ್‌ಕೆ 3 ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಈ ತಂಡ ಕೊನೆಯ ಬಾರಿಗೆ 2018 ರಲ್ಲಿ ನಡೆದ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಇದನ್ನೂ ಓದಿ - IPL 2021 Digital Broadcasting Rights ಖರೀದಿಸಿದ YuppTV, ಸುಮಾರು 100 ದೇಶಗಳಲ್ಲಿ IPL 2021 ಪ್ರಸಾರ
ಐಪಿಎಲ್ 2021ಕ್ಕೆ ಸಿಎಸ್‌ಕೆ ತಂಡ :
ಮಹೇಂದ್ರ ಸಿಂಗ್ ಧೋನಿ (ಕ್ಯಾಪ್ಟನ್), ಫಾಫ್ ಡು ಪ್ಲೆಸಿ, ರಿತುರಾಜ್ ಗೈಕ್ವಾಡ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎನ್ ಜಗದೀಶನ್, ರಾಬಿನ್ ಉತ್ತಪ್ಪ, ರವೀಂದ್ರ ಜಡೇಜಾ, ಸ್ಯಾಮ್ ಕರಣ್, ಡ್ವೇನ್ ಬ್ರಾವೋ, ಕರ್ನ್ ಶರ್ಮಾ, ಆರ್ ಸಾಯಿ ಕಿಶೋರ್, ಮಿಚೆಲ್ ಚಹರ್ ಸಾಂಟ್ನರ್, ಇಮ್ರಾನ್ ತಹರ್ , ಶಾರ್ದುಲ್ ಠಾಕೂರ್, ಲುಂಗಿ ಎಂಜಿಡಿ, ಜೋಶ್ ಹ್ಯಾಜಲ್‌ವುಡ್, ಕೆ.ಎಂ.ಆಸಿಫ್, ಮೊಯಿನ್ ಅಲಿ, ಕೃಷ್ಣಪ್ಪ ಗೌತಮ್, ಚೇತೇಶ್ವರ ಪೂಜಾರ, ಹರಿಶಂಕರ್ ರೆಡ್ಡಿ, ಭಗತ್ ವರ್ಮಾ, ಹರಿ ನಿಶಾಂತ್.
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.