IPL 2021: ಭಾರತೀಯ ಕ್ಯಾಂಪ್ ನಲ್ಲಿ ಕೊರೊನಾ ಕಾರಣ IPL 2021 ಮೇಲೆ ಕರಿ ನೆರಳು, Team India ಆಟಗಾರರ ಮೇಲೆ ಕಣ್ಣು
IPL 2021 - ಟೀಂ ಇಂಡಿಯಾದ ಸಹಾಯಕ ಫಿಸಿಯೋ ಯೋಗೀಶ್ ಪರ್ಮಾರ್ ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದ ನಂತರ ಅನೇಕ ಆಟಗಾರರು ಸೋಂಕಿನ ಅಪಾಯದಲ್ಲಿದ್ದಾರೆ. ಈ ಆಟಗಾರರು ಐಪಿಎಲ್ 2021 ರಲ್ಲಿ ಭಾಗವಹಿಸಬೇಕಿದೆ.
ನವದೆಹಲಿ: IPL 2021 - ಭಾರತ ಮತ್ತು ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ (Manchester Test) ರದ್ದಾದ ನಂತರ (IND vs ENG), ಕ್ರಿಕೆಟ್ ಅಭಿಮಾನಿಗಳು ಐಪಿಎಲ್ 2021 (IPL 2021) ರ ಎರಡನೇ ಹಂತಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ, ಆದರೆ ಈ ಮೆಗಾ ಟಿ 20 ಲೀಗ್ ಇದೀಗ ಅಪಾಯದಲ್ಲಿ ಸಿಲುಕಿದೆ.
ತಲೆನೋವಾಗಿ ಪರಿಣಮಿಸಿದ ಕೊರೊನಾ
ಟೀಂ ಇಂಡಿಯಾದ ಸಹಾಯಕ ಫಿಸಿಯೋ ಯೋಗೀಶ್ ಪರ್ಮಾರ್ (Yogesh Parmar) ಅವರು ಸೆಪ್ಟೆಂಬರ್ 9 ರಂದು ನಡೆದ ಕರೋನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡು ಬಂದಿದ್ದರು. ಈ ಕಾರಣದಿಂದಾಗಿ 5 ನೇ ಟೆಸ್ಟ್ ರದ್ದಾಗಿದೆ. ಆದರೆ ಸಮಸ್ಯೆಯೆಂದರೆ ಅನೇಕ ಭಾರತೀಯ ಆಟಗಾರರು ಯೋಗೀಶ್ ಅವರ ಸಂಪರ್ಕಕ್ಕೆ ಬಂದಿದ್ದರು, ಹಾಗಾಗಿ ಅವರು ಸೋಂಕಿನ ಅಪಾಯದಲ್ಲಿದ್ದಾರೆ.
ಈ ಆಟಗಾರರಿಗೆ ಅಪಾಯ
ರೋಹಿತ್ ಶರ್ಮಾ (Rohit Sharma), ಮೊಹಮ್ಮದ್ ಶಮಿ (Mohammed Shami), ಇಶಾಂತ್ ಶರ್ಮಾ (Ishant Sharma), ಚೇತೇಶ್ವರ್ ಪೂಜಾರ (Cheteshwar Pujara), ರವೀಂದ್ರ ಜಡೇಜಾ (Ravindra Jadeja) ಮತ್ತು ಮೊಹಮ್ಮದ್ ಸಿರಾಜ್ (Mohammed Siraj)ಈ ಆಟಗಾರರು ಯೋಗೇಶ್ ಪರ್ಮಾರ್ ಅವರ ಸಂಪರ್ಕಕ್ಕೆ ಬಂದಿರುವ ಕುರಿತು ವರದಿಯಾಗಿದೆ.
ಇದನ್ನೂ ಓದಿ-ಪೋಷಕರು ಜೊತೆ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿ ನೀರಜ್ ಚೋಪ್ರಾ ಹೇಳಿದ್ದೇನು?
BCCI ಕಣ್ಣು ಈ ಆಟಗಾರರ ಮೇಲೆ
ಇನ್ಸೈಡ್ ಸ್ಪೋರ್ಟ್ಸ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಿಸಿಸಿಐ ಮತ್ತು ಎಲ್ಲಾ ಫ್ರಾಂಚೈಸಿಗಳು ಈ ಆಟಗಾರರ ಮೇಲೆ ತಮ್ಮ ಗಮನ ಕೇಂದ್ರೀಕರಿಸಿವೆ ಎನ್ನಲಾಗಿದೆ. ಏಕೆಂದರೆ ಅವರಲ್ಲಿ ಯಾರಿಗಾದರೂ ಕರೋನಾ ಬಂದರೆ ಅಥವಾ ಅವರ ಮೂಲಕ ವೈರಸ್ ಹರಡಿದರೆ, ನಿಗತಿದ ಸಮಯಕ್ಕೆ ಐಪಿಎಲ್ ನಡೆಸಲು ವಿಳಂಬವಾಗುವ ಸಾಧ್ಯತೆ ಇದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ರೋಹಿತ್ ಶರ್ಮಾ 19 ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೈದಾನಕ್ಕೆ ಇಳಿಯಬೇಕಾಗಿದೆ.
ಇದನ್ನೂ ಓದಿ-ಸರ್ಜರಿ ನಂತರ ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ಪೀಲೆ ಆರೋಗ್ಯದಲ್ಲಿ ಚೇತರಿಕೆ
ತಂಡ ಅಪಾಯ ಎದುರಿಸಲು ಸಿದ್ಧವಿಲ್ಲ
ಐಪಿಎಲ್ 2021 ರ ಮೊದಲ ಹಂತದ ಮುಂದೂಡುವಿಕೆಯ ನೋವು ಎಲ್ಲಾ ಫ್ರಾಂಚೈಸಿಗಳ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಆದ್ದರಿಂದ ಯಾವುದೇ ತಂಡವು ಕರೋನಾದ ಅಪಾಯವನ್ನು ತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಯುಎಇಗೆ ಬಂದ ನಂತರ ಎಲ್ಲಾ ಆಟಗಾರರು 6 ದಿನಗಳ ಕ್ವಾರಂಟೈನ್ ಅವಧಿಯನ್ನು ಎದುರಿಸಬೇಕಾಗಲಿದೆ.
ಇದನ್ನೂ ಓದಿ-India-England 5th Test: ಐದನೇ ಟೆಸ್ಟ್ ಪಂದ್ಯ ನಡೆಸಲು ಮರು ವೇಳಾಪಟ್ಟಿ ಸಿದ್ದಪಡಿಸಲಾಗುವುದು ಎಂದ ಬಿಸಿಸಿಐ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ