ಪೋಷಕರು ಜೊತೆ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿ ನೀರಜ್ ಚೋಪ್ರಾ ಹೇಳಿದ್ದೇನು?

ಅಥ್ಲೆಟಿಕ್ಸ್‌ನಲ್ಲಿ ಭಾರತದ ಏಕೈಕ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ತಮ್ಮ ಹೆತ್ತವರನ್ನು ಕರೆದುಕೊಂಡು ವಿಮಾನದಲ್ಲಿ ಹೋಗುವ ಮೂಲಕ ಅವರ ಒಂದು ಸಣ್ಣ ಕನಸನ್ನು ಪೂರೈಸಿದರು.

Written by - Zee Kannada News Desk | Last Updated : Sep 11, 2021, 04:23 PM IST
  • ಅಥ್ಲೆಟಿಕ್ಸ್‌ನಲ್ಲಿ ಭಾರತದ ಏಕೈಕ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ತಮ್ಮ ಹೆತ್ತವರನ್ನು ಕರೆದುಕೊಂಡು ವಿಮಾನದಲ್ಲಿ ಹೋಗುವ ಮೂಲಕ ಅವರ ಒಂದು ಸಣ್ಣ ಕನಸನ್ನು ಪೂರೈಸಿದರು.
  • 23 ವರ್ಷದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಟ್ವಿಟ್ಟರ್ ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಆತ ತನ್ನ ಪೋಷಕರೊಂದಿಗೆ ವಿಮಾನ ಹತ್ತುವುದನ್ನು ಕಾಣಬಹುದು.
  • 'ನನ್ನ ಮೊದಲ ಕನಸು ನನಸಾಯಿತು, ಏಕೆಂದರೆ ನನ್ನ ಹೆತ್ತವರನ್ನು ಅವರ ಮೊದಲ ವಿಮಾನದಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಯಿತು" ಎಂದು ನೀರಜ್ ಟ್ವಿಟರ್‌ನಲ್ಲಿ ಚಿತ್ರಗಳಿಗೆ ಶೀರ್ಷಿಕೆ ನೀಡಿದ್ದಾರೆ.
ಪೋಷಕರು ಜೊತೆ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿ ನೀರಜ್ ಚೋಪ್ರಾ ಹೇಳಿದ್ದೇನು? title=
Photo Courtesy: Twitter

ನವದೆಹಲಿ: ಅಥ್ಲೆಟಿಕ್ಸ್‌ನಲ್ಲಿ ಭಾರತದ ಏಕೈಕ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ತಮ್ಮ ಹೆತ್ತವರನ್ನು ಕರೆದುಕೊಂಡು ವಿಮಾನದಲ್ಲಿ ಹೋಗುವ ಮೂಲಕ ಅವರ ಒಂದು ಸಣ್ಣ ಕನಸನ್ನು ಪೂರೈಸಿದರು.

23 ವರ್ಷದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಟ್ವಿಟ್ಟರ್ ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಆತ ತನ್ನ ಪೋಷಕರೊಂದಿಗೆ ವಿಮಾನ ಹತ್ತುವುದನ್ನು ಕಾಣಬಹುದು.'ನನ್ನ ಮೊದಲ ಕನಸು ನನಸಾಯಿತು, ಏಕೆಂದರೆ ನನ್ನ ಹೆತ್ತವರನ್ನು ಅವರ ಮೊದಲ ವಿಮಾನದಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಯಿತು" ಎಂದು ನೀರಜ್ ಟ್ವಿಟರ್‌ನಲ್ಲಿ ಚಿತ್ರಗಳಿಗೆ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ : ಈ ಪುಟ್ಬಾಲ್ ಆಟಗಾರ ಹಲವು ಬಾರಿ ತನ್ನ ಹೆಂಡತಿಗೆ ಮೋಸ ಮಾಡಿದ್ದನಂತೆ...!

ನೀರಜ್ ಚೋಪ್ರಾ ಚಿತ್ರಗಳನ್ನು ಪೋಸ್ಟ್ ಮಾಡಿದಂತೆ, ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಸ್ಟಾರ್ ಭಾರತೀಯ ಕ್ರೀಡಾಪಟುವಿಗೆ ಹೃದಯಸ್ಪರ್ಶಿ ಸಂದೇಶಗಳು ಹರಿದುಬಂದಿವೆ."ಈ ಚಿತ್ರಗಳನ್ನು ಉಳಿಸಿ ಜನರೇ, ನೀವು ಖಿನ್ನತೆ, ನಿರಾಶೆ ಅನುಭವಿಸಿದಾಗಲೆಲ್ಲಾ ಈ ಚಿತ್ರವನ್ನು ನೋಡಿ ಮತ್ತು ನಿಮ್ಮ ಕನಸುಗಳನ್ನು ಈಡೇರಿಸುವ ಆನಂದ ಮತ್ತು ಪ್ರೇರಣೆಯನ್ನು ಮರಳಿ ಪಡೆಯಿರಿ" ಎಂದು ಅಭಿಮಾನಿಯೊಬ್ಬರು ಹೇಳಿದರು."ಅದು ತುಂಬಾ ಸುಂದರವಾಗಿದೆ! ನೀವು ಇನ್ನೂ ಎತ್ತರಕ್ಕೆ ಏರಿ ಮತ್ತು ನಿಮ್ಮ ಎಲ್ಲಾ ಕನಸುಗಳನ್ನು ಈಡೇರಲಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Delhi Rain : ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ : ಹಲವು ಪ್ರದೇಶಗಳು ಜಲಾವೃತ

ಟೋಕಿಯೊದಲ್ಲಿ ನಡೆದ ಪುರುಷರ ಜಾವೆಲಿನ್ ಫೈನಲ್‌ನಲ್ಲಿ ನೀರಜ್ 87.58 ಮೀಟರ್ ಎಸೆದು ಚಿನ್ನ ಗೆದ್ದರು. ಆದಾಗ್ಯೂ, ನೀರಜ್ ಭಾರತಕ್ಕೆ ಹಿಂದಿರುಗಿದ ನಂತರ ತರಬೇತಿಯ ಕೊರತೆ ಮತ್ತು ಅನಾರೋಗ್ಯದ ಕಾರಣದಿಂದಾಗಿ ನೀರಜ್ ತನ್ನ 2021 ರ ಅಭಿಯಾನವನ್ನು ಕೊನೆಗೊಳಿಸಬೇಕಾಯಿತು.ವಿಶ್ವ ಚಾಂಪಿಯನ್‌ಶಿಪ್‌ಗಳು, ಏಷ್ಯನ್ ಗೇಮ್‌ಗಳು ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಂತಹ ದೊಡ್ಡ ಈವೆಂಟ್‌ಗಳನ್ನು ಒಳಗೊಂಡ ಮುಂದಿನ ಋತುವಿನಲ್ಲಿ ಪ್ರಬಲವಾಗಿ ಮರಳಲು ಅವರು ಪ್ರತಿಜ್ಞೆ ಮಾಡಿದರು.

ಇದನ್ನೂ ಓದಿ : Yamaha Festive Offers: ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ಘೋಷಿಸಿದ ಯಮಹಾ ಮೋಟಾರ್ ಇಂಡಿಯಾ

"ಬಿಡುವಿಲ್ಲದ ಪ್ರಯಾಣದ ವೇಳಾಪಟ್ಟಿ ಮತ್ತು ಅನಾರೋಗ್ಯದ ಕಾರಣ ಟೋಕಿಯೊದಿಂದ ನಾನು ತರಬೇತಿಯನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ, ನನ್ನ ತಂಡದೊಂದಿಗೆ, 2021 ರ ಸ್ಪರ್ಧಾ ಋತುವಿನಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಲು,ನಿರ್ಧರಿಸಿದೆ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳು, ಏಷ್ಯನ್ ಗೇಮ್‌ಗಳು ಮತ್ತು ಕಾಮನ್‌ವೆಲ್ತ್ ಗೇಮ್‌ಗಳನ್ನು ಒಳಗೊಂಡಿರುವ 2022 ರ ಕ್ಯಾಲೆಂಡರ್‌ಗಾಗಿ ಹೊಸದಾಗಿ ಹಿಂತಿರುಗುವೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ : Delhi Rain : ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ : ಹಲವು ಪ್ರದೇಶಗಳು ಜಲಾವೃತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News