IPL 2022: ತೀವ್ರ ಕುತೂಹಲ ಕೆರಳಿಸಿದ ಎಂ.ಎಸ್.ಧೋನಿ – ಗೌತಮ್ ಗಂಭಿರ್ ಭೇಟಿ!
ಗುರುವಾರ ನಡೆದ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿತು.
ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ(MS Dhoni)ವಿರುದ್ಧ ಗೌತಮ್ ಗಂಭೀರ್ ಹಲವಾರು ಬಾರಿ ನೇರವಾಗಿಯೇ ಟೀಕಾಪ್ರಹಾರ ನಡೆಸಿದ್ದರು. ಭಾರತ ತಂಡವು 2011ರ ವಿಶ್ವಕಪ್(2011 Cricket World Cup) ಗೆದ್ದ ಸಂಭ್ರಮದ ವಿಡಿಯೋವನ್ನು ಬಿಸಿಸಿಐ ಮತ್ತು ಐಸಿಸಿ ಹಂಚಿಕೊಂಡಾಗಲೂ ಗಂಭೀರ್ ಕಿಡಿಕಾರಿದ್ದರು. ಆ ವಿಡಿಯೋದಲ್ಲಿ ಧೋನಿ ಅವರು ವಿನ್ನಿಂಗ್ಸ್ ಸಿಕ್ಸರ್ ಬಾರಿಸಿದ್ದನ್ನು ತೋರಿಸಲಾಗಿತ್ತು. ಭಾರತ ವಿಶ್ವಕಪ್ ಗೆಲ್ಲಲು ಕೇವಲ ಧೋನಿಯವರ ಸಿಕ್ಸರ್ ಮಾತ್ರ ಕಾರಣವಲ್ಲ, ತಂಡದ ಎಲ್ಲಾ 11 ಆಟಗಾರರ ಶ್ರಮ ಕಾರಣವೆಂದು ಹೇಳಿದ್ದರು.
ಅನೇಕ ಬಾರಿ ಧೋನಿ ವಿರುದ್ಧ ಅಸಮಾಧಾನದ ಮಾತುಗಳನ್ನೇ ಆಡಿದ್ದ ಗಂಭೀರ್(Gautam Gambhir) ಇತ್ತೀಚೆಗಷ್ಟೇ ತಮ್ಮ ಮತ್ತು ಧೋನಿ ನಡುವೆ ಯಾವುದೇ ವೈಮನಸ್ಸಿಲ್ಲವೆಂದು ಸ್ಪಷ್ಟಪಡಿಸಿದ್ದರು. ತಮ್ಮ ಹಾಗೂ ಧೋನಿ ನಡುವೆ ಯಾವುದೇ ಮನಸ್ತಾಪವಿಲ್ಲ. ನಾವಿಬ್ಬರು ಚೆನ್ನಾಗಿಯೇ ಇದ್ದೇವೆ. ಧೋನಿಯವರು ಟೀಂ ಇಂಡಿಯಾಗೆ ಬಹುದೊಡ್ಡ ಕೊಡುಗೆ ಕೊಟ್ಟ ಅತ್ಯುತ್ತಮ ನಾಯಕನೆಂದು ಗಂಭೀರ್ ಹೇಳಿದ್ದರು.
ಇದನ್ನೂ ಓದಿ: Ravindra Jadeja : ಟೀಂ ಇಂಡಿಯಾದಲ್ಲಿ ಜಡೇಜಾ ಸ್ಥಾನ ಕಸಿದುಕೊಳ್ಳಲಿದ್ದಾನೆ ಈ ಸ್ಟಾರ್ ಆಲ್ ರೌಂಡರ್!
ಗಂಭೀರ್ ಸ್ಪಷ್ಟನೆ ನೀಡಿದರೂ ಕೂಡ ಕ್ರೀಡಾಪ್ರೇಮಿಗಳು ಮಾತ್ರ ಧೋನಿ ಕಂಡರೆ ಗಂಭೀರ್ ಗೆ ಆಗಲ್ಲವೆಂದು ಸೋಷಿಯಲ್ ಮೀಡಿಯಾ(Social Media)ದಲ್ಲಿ ಟ್ರೋಲ್ ಮಾಡುತ್ತಿದ್ದರು. ಇದೀಗ ಧೋನಿ ಜೊತೆಗಿರುವ ತಮ್ಮ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ಕೂಲ್ ಕ್ಯಾಪ್ಟನ್ ಜೊತೆಗೆ ಯಾವುದೇ ರೀತಿಯ ವೈಮನಸ್ಸಿಲ್ಲವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
Chennai Super Kings) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) 6 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿತು. ಪಂದ್ಯ ಮುಗಿದ ಬಳಿಕ ಗೌತಮ್ ಗಂಭೀರ್ ಅವರು ಎಂ.ಎಸ್.ಧೋನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಆಡಿದ 2 ಪಂದ್ಯಗಳಲ್ಲಿ ಸೋಲು ಕಂಡಿದೆ, ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಆಡಿದ 2 ಪಂದ್ಯಗಳಲ್ಲಿ 1 ಸೋಲು, 1 ಗೆಲುವು ದಾಖಲಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.