IPL 2022: ಮೊದಲ ಯತ್ನದಲ್ಲೇ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದ ಗುಜರಾತ್ ಟೈಟಾನ್ಸ್
ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿರುವ ಗುಜರಾತ್ ಟೈಟಾನ್ಸ್ ತಂಡವು ತನ್ನ ಮೊದಲ ಆವೃತ್ತಿಯಲ್ಲಿ ಟೂರ್ನಿಯುದ್ಧಕ್ಕೂ ನೀಡಿದ ಅದ್ಬುತ ಪ್ರದರ್ಶನದಿಂದಾಗಿ ಈಗ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಹೌದು, ಇದು ಹಲವು ತಂಡಗಳಿಗೂ ಸಾಧ್ಯವಾದ ಸಾಧನೆಯನ್ನು ಈಗ ಗುಜರಾತ್ ತಂಡವು ತನ್ನ ಮೊದಲ ಯತ್ನದಲ್ಲಿಯೇ ಮಾಡಿದೆ.
ಅಹ್ಮದಾಬಾದ್ : ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿರುವ ಗುಜರಾತ್ ಟೈಟಾನ್ಸ್ ತಂಡವು ತನ್ನ ಮೊದಲ ಆವೃತ್ತಿಯಲ್ಲಿ ಟೂರ್ನಿ ಯುದ್ಧಕ್ಕೂ ನೀಡಿದ ಅದ್ಬುತ ಪ್ರದರ್ಶನದಿಂದಾಗಿ ಈಗ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಹೌದು, ಇದು ಹಲವು ತಂಡಗಳಿಗೂ ಸಾಧ್ಯವಾದ ಸಾಧನೆಯನ್ನು ಈಗ ಗುಜರಾತ್ ತಂಡವು ತನ್ನ ಮೊದಲ ಯತ್ನದಲ್ಲಿಯೇ ಮಾಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022 ಟೂರ್ನಿಯ ಫೈನಲ್ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡವು ಜೈಸ್ವಾಲ್ (22) ಹಾಗೂ ಜೋಸ್ ಬಟ್ಲರ್(39) ಅವರ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭವನ್ನು ಕಂಡುಕೊಳ್ಳುತ್ತಿತ್ತು, ಆದರೆ ಈ ಸಂದರ್ಭದಲ್ಲಿ ಜೈಸ್ವಾಲ್, ಯಶ್ ದಯಾಳ್ ಅವರ ಎಸೆತದಲ್ಲಿ ಸಾಯಿ ಕಿಶೋರ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸುವ ಮೂಲಕ ರಾಜಸ್ತಾನ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು.ಈ ಹಂತದಲ್ಲಿ ಉತ್ತಮ ನೆಲೆಯನ್ನು ಕಂಡುಕೊಳ್ಳುತ್ತಿದ್ದ ಜೋಸ್ ಬಟ್ಲರ್ ಅವರ ವಿಕೆಟ್ ನ್ನು ಹಾರ್ದಿಕ್ ಪಾಂಡ್ಯ ಕಬಳಿಸಿದ್ದು ಪಂದ್ಯಕ್ಕೆ ಸಾಕಷ್ಟು ತಿರುವು ನೀಡಿತು ಎಂದು ಹೇಳಬಹುದು.
ಇದನ್ನೂ ಓದಿ: KL Rahul: 4 IPL ಸೀಸನ್‌ಗಳಲ್ಲಿ 600+ ರನ್ ಗಳಿಸಿದ ಮೊದಲ ಆಟಗಾರ ಕೆ.ಎಲ್.ರಾಹುಲ್!
ಗುಜರಾತ್ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ, ನಾಲ್ಕು ಓವರ್ ಗಳಲ್ಲಿ ಕೇವಲ 17 ರನ್ ಗಳನ್ನು ನೀಡುವುದರ ಮೂಲಕ ಮೂರು ಪ್ರಮುಖ ವಿಕೆಟ್ ಗಳನ್ನು ಕಬಳಿಸಿದರು, ಇನ್ನೂಂದೆಡೆಗೆ ಇವರಿಗೆ ಸಾಥ್ ನೀಡಿದ ಸಾಯಿ ಕಿಶೋರ್ ಕೂಡ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.
IPL: ಮುಂದಿನ ವರ್ಷ ಆರ್‌ಸಿಬಿಗೆ ʼಎಬಿಡಿʼ ಬಲ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.