ಹನುಮಾನ್ ಹುಟ್ಟಿದ್ದು ಕರ್ನಾಟಕದಲ್ಲೋ? ಮಹಾರಾಷ್ಟ್ರದಲ್ಲೋ..? ಮೇ 31 ಕ್ಕೆ ಸಿಗಲಿದೆ ಉತ್ತರ...!

ಹನುಮಾನ್ ಜನ್ಮಸ್ಥಳದ ಬಗ್ಗೆ ಈಗ ಚರ್ಚೆ ಶುರುವಾಗಿರುವ ಬೆನ್ನಲ್ಲೇ ಇದರ ಬಗ್ಗೆ ನಿರ್ಧರಿಸಲು ಮೇ 31 ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಧರ್ಮ ಸಂಸದ್ (ಧರ್ಮ ಸಂಸತ್ತು) ಆಯೋಜಿಸಲಾಗಿದೆ.

Written by - Zee Kannada News Desk | Last Updated : May 29, 2022, 11:41 PM IST
  • ಹನುಮಂತನು ಹುಟ್ಟಿದ್ದು ಕರ್ನಾಟಕದ ಕಿಷ್ಕಿಂಧೆಯಲ್ಲಿ ಹೊರತು ನಾಸಿಕ್‌ನ ಆಂಜನೇರಿಯಲ್ಲಿ ಅಲ್ಲ ಎಂದು ಕರ್ನಾಟಕದ ದಾರ್ಶನಿಕ ಮಹಂತ್ ಗೋವಿಂದ್ ದಾಸ್ ಹೇಳಿದ್ದಾರೆ.
  • ರಾಮಾಯಣವನ್ನು ಉಲ್ಲೇಖಿಸಿ, ಮಹಂತ್ ಗೋವಿಂದ್ ದಾಸ್ ಅವರು ಹನುಮಾನ್ ನು ಕಿಷ್ಕಿಂಧಾದಲ್ಲಿ ಜನಿಸಿದನು ಎಂದು ಹೇಳಿದ್ದಾರೆ.
  ಹನುಮಾನ್ ಹುಟ್ಟಿದ್ದು ಕರ್ನಾಟಕದಲ್ಲೋ? ಮಹಾರಾಷ್ಟ್ರದಲ್ಲೋ..? ಮೇ 31 ಕ್ಕೆ ಸಿಗಲಿದೆ ಉತ್ತರ...!  title=
file photo

ನವದೆಹಲಿ: ಹನುಮಾನ್ ಜನ್ಮಸ್ಥಳದ ಬಗ್ಗೆ ಈಗ ಚರ್ಚೆ ಶುರುವಾಗಿರುವ ಬೆನ್ನಲ್ಲೇ ಇದರ ಬಗ್ಗೆ ನಿರ್ಧರಿಸಲು ಮೇ 31 ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಧರ್ಮ ಸಂಸದ್ (ಧರ್ಮ ಸಂಸತ್ತು) ಆಯೋಜಿಸಲಾಗಿದೆ.

ಮಹಂತ್ ಶ್ರೀ ಮಂಡಲಾಚಾರ್ಯ ಪೀಠಾಧೀಶ್ವರ ಸ್ವಾಮಿ ಅನಿಕೇತ್ ಶಾಸ್ತ್ರಿ ದೇಶಪಾಂಡೆ ಮಹಾರಾಜ್ ಅವರು ಹನುಮಾನ್ ಜನ್ಮಸ್ಥಳದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ದೇಶಾದ್ಯಂತದ ಹಿಂದೂ ಧರ್ಮೀಯರನ್ನು ಆಹ್ವಾನಿಸಿದ್ದಾರೆ.ಶ್ರೀಗಳ ಸಭೆ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Monkeypox outbreak: ಮಕ್ಕಳಿಗೆ ಅಪಾಯ ಹೆಚ್ಚು, ಈ 5 ರೋಗಲಕ್ಷಣಗಳನ್ನು ನಿರ್ಲಕ್ಷಿಸದಿರಿ- ICMR

ಹನುಮಂತನು ಹುಟ್ಟಿದ್ದು ಕರ್ನಾಟಕದ ಕಿಷ್ಕಿಂಧೆಯಲ್ಲಿ ಹೊರತು ನಾಸಿಕ್‌ನ ಆಂಜನೇರಿಯಲ್ಲಿ ಅಲ್ಲ ಎಂದು ಕರ್ನಾಟಕದ ದಾರ್ಶನಿಕರಾದ ಮಹಂತ್ ಗೋವಿಂದ್ ದಾಸ್  ಹೇಳಿದ್ದಾರೆ.ರಾಮಾಯಣವನ್ನು ಉಲ್ಲೇಖಿಸಿ, ಮಹಂತ್ ಗೋವಿಂದ್ ದಾಸ್ ಅವರು ಹನುಮಾನ್ ನು ಕಿಷ್ಕಿಂಧಾದಲ್ಲಿ ಜನಿಸಿದನು ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ನೆಹರೂ ಅವರ ಸೌಹಾರ್ದತೆಯ ಆಲೋಚನೆಯ ಮೂಲಕ ಈ ದೇಶದ ಬಹುತ್ವವನ್ನು ಉಳಿಸಬೇಕಿದೆ'

ಇನ್ನೂ ಮುಂದುವರೆದು ಮಾತನಾಡಿದ ಅವರು ಹನುಮಂತನು ಅಂಜನೇರಿಯಲ್ಲಿ ಜನಿಸಿದನು ಎಂದು ಎಲ್ಲಿಯೂ ಬರೆದಿಲ್ಲ ಎಂದು ಹೇಳಿದರು. ಅವರು ನಾಸಿಕ್‌ನ ತ್ರಯಂಬಕೇಶ್ವರ ತಲುಪಿದ್ದು, ಅಲ್ಲಿ ದಾರ್ಶನಿಕರೊಂದಿಗೆ ಸಂವಾದ ನಡೆಸಲಿದ್ದಾರೆ ಎನ್ನಲಾಗಿದೆ.

ಈಗ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ನಾಸಿಕ್ ಪೊಲೀಸರು ಸಂಘಟಕರನ್ನು ಕೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News