ನವದೆಹಲಿ : ಐಪಿಎಲ್ 2022 ಗಾಗಿ 8 ತಂಡಗಳು ಯಾವ ಆಟಗಾರರನ್ನು ಉಳಿಸಿಕೊಂಡಿವೆ. ಸ್ವಲ್ಪ ಸಮಯದ ನಂತರ ಅದರ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಸಿಗಲಿದೆ. ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಕೆಎಲ್ ರಾಹುಲ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನ ರಶೀದ್ ಖಾನ್ ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಬಿಸಿಸಿಐ(BCCI) ತನಿಖೆ ನಡೆಸುತ್ತಿದೆ. ಇದು ಸರಿ ಎಂದು ಕಂಡುಬಂದರೆ ಇಬ್ಬರೂ ಆಟಗಾರರು ಟಿ20 ಲೀಗ್‌ನಲ್ಲಿ ಆಡದಂತೆ ನಿಷೇಧ ಹೇರಬಹುದು. ಈ ವಿವಾದದ ಬಗ್ಗೆ ನಿಮಗಾಗಿ ಇಲ್ಲಿದೆ .. 


COMMERCIAL BREAK
SCROLL TO CONTINUE READING

ದೊಡ್ಡ ವಿವಾದ ದಲ್ಲಿ ಈ ಇಬ್ಬರು ಆಟಗಾರರು


ಇನ್ಸೈಡ್ ಸ್ಪೋರ್ಟ್ಸ್ ಸುದ್ದಿ ಪ್ರಕಾರ, ಕೆಎಲ್ ರಾಹುಲ್ ಮತ್ತು ರಶೀದ್ ಖಾನ್(KL Rahul and Rashid Khan) ಹಳೆಯ ಫ್ರಾಂಚೈಸಿಯೊಂದಿಗೆ ನವೆಂಬರ್ 30 ರವರೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಇಬ್ಬರೂ ಆಟಗಾರರು ಇತರ ಫ್ರಾಂಚೈಸಿ ತಂಡಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇದು ನಿಯಮಕ್ಕೆ ವಿರುದ್ಧವಾಗಿದೆ. ಲಕ್ನೋ ತಂಡ ಇಬ್ಬರೂ ಆಟಗಾರರನ್ನು ಸಂಪರ್ಕಿಸಿದೆ. ಲಕ್ನೋ ತಂಡವನ್ನು ಸೇರಲು ಅವರಿಗೆ ಭಾರಿ ಮೊತ್ತದ ಆಫರ್ ಬಂದಿದೆ. ರಾಹುಲ್ ಗೆ ಲಕ್ನೋ ತಂಡದಿಂದ 20 ಕೋಟಿ ಆಫರ್ ಬಂದಿದೆ ಎನ್ನಲಾಗಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ರಶೀದ್ ಖಾನ್‌ಗೆ 16 ಕೋಟಿ ಮೊತ್ತದ ಆಫರ್ ಬಂದಿದೆ. ಇದಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಬಿಸಿಸಿಐಗೆ ದೂರು ನೀಡಿವೆ. ಬಿಸಿಸಿಐ ತನಿಖೆ ನಡೆಸುತ್ತಿದೆ.


ಇದನ್ನೂ ಓದಿ : India Tour Of South Africa: Omicron ರೂಪಾಂತರಿ ಆತಂಕದ ನಡುವೆಯೂ ಕೂಡ ರದ್ದಾಗಲ್ಲವಂತೆ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಸರಣಿ! ಕಾರಣ ಇಲ್ಲಿದೆ


ಕೆಎಲ್ ರಾಹುಲ್ ಬ್ಯಾಂಗ್ ಬ್ಯಾಟ್ಸ್‌ಮನ್


ಭಾರತದ ಸ್ಟಾರ್ ಓಪನಿಂಗ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್(KL Rahul) ತುಂಬಾ ಸ್ಟ್ರಾಂಗ್ ಬ್ಯಾಟ್ಸ್‌ಮನ್, ಅವರ ಲಾಂಗ್ ಸಿಕ್ಸರ್‌ಗಳನ್ನು ಹೊಡೆಯುವ ಕಲೆ ಎಲ್ಲರಿಗೂ ತಿಳಿದಿದೆ. ಕೆಎಲ್ ರಾಹುಲ್ 2018 ರಿಂದ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ ಮತ್ತು ಅವರು ಪ್ರತಿ ಋತುವಿನಲ್ಲಿ ಪಂಜಾಬ್ ಪರ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ವರದಿಗಳನ್ನು ನಂಬುವುದಾದರೆ, ಕೆಎಲ್ ರಾಹುಲ್ ಪಂಜಾಬ್ ಜೊತೆಗಿನ ಸಂಬಂಧವನ್ನು ಮುಂದುವರೆಸಲಕ್ಕಿಲ್ಲ.


 ಹೈದರಾಬಾದ್ ತಂಡಕ್ಕೆ ಕೈ ಕೊಡಬಹುದು ರಶೀದ್


ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್(Rashid Khan) ಅವರ ಎಸೆತಗಳನ್ನು ಆಡುವುದು ಯಾವುದೇ ಬ್ಯಾಟ್ಸ್‌ಮನ್‌ಗೆ ಸುಲಭವಲ್ಲ. ಐಪಿಎಲ್‌ನಲ್ಲಿ ತಮ್ಮ ಆಟದಿಂದ ಹೈದರಾಬಾದ್‌ಗೆ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. ರಶೀದ್ 2017 ರಿಂದ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. ರಶೀದ್ 76 ಪಂದ್ಯಗಳಲ್ಲಿ 93 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ : Ballon d'Or 2021: ಸತತ 7ನೇ ಬಾರಿಗೆ FIFA Ballon d'Or ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ Lionel Messi


ಇಂದು ಪ್ರೈಸ್ ಕೊನೆಯ ದಿನ


ಐಪಿಎಲ್ 2022 ರ ಮೆಗಾ ಹರಾಜಿನ(IPL 2022 Mega Auction) ದೃಷ್ಟಿಯಿಂದ, ಹಳೆಯ ಐಪಿಎಲ್ ಫ್ರಾಂಚೈಸಿಗಳು ಇಂದು ಅಂದರೆ ನವೆಂಬರ್ 30 ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. 2 ಹೊಸ ತಂಡಗಳು ಉಳಿಸಿಕೊಳ್ಳುವ ಆಯ್ಕೆಯನ್ನು ಹೊಂದಿಲ್ಲದ ಕಾರಣ ಹರಾಜಿನ ಮೊದಲು ಕೆಲವು ಆಟಗಾರರನ್ನು ಖರೀದಿಸಬಹುದು ಎಂಬ ವಿನಾಯಿತಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.