India Tour Of South Africa: Omicron ರೂಪಾಂತರಿ ಆತಂಕದ ನಡುವೆಯೂ ಕೂಡ ರದ್ದಾಗಲ್ಲವಂತೆ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಸರಣಿ! ಕಾರಣ ಇಲ್ಲಿದೆ

India Tour Of South Africa - ಡಿಸೆಂಬರ್ ಮೊದಲ ವಾರದಲ್ಲಿ ಭಾರತ ಕ್ರಿಕೆಟ್ ತಂಡ (Team India) ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಟೆಸ್ಟ್, 3 ODI ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳು ನಡೆಯಲಿವೆ. ಹೊಸ ಕರೋನವೈರಸ್ನ (Coronavirus) ರೂಪಾಂತರಗಳ ಬಗ್ಗೆ ಕಳವಳ ಹೆಚ್ಚಿದೆ, ಆದರೆ ಈಗ ದಕ್ಷಿಣ ಆಫ್ರಿಕಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೊಡ್ಡ ಹೇಳಿಕೆಯನ್ನು ನೀಡಿದೆ.

Written by - Nitin Tabib | Last Updated : Nov 30, 2021, 09:28 PM IST
  • ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ
  • ಸ್ಪಷ್ಟನೆ ನೀಡಿದ ವಿದೇಶಾಂಗ ಸಚಿವಾಲಯ
  • ದಕ್ಷಿಣ ಆಫ್ರಿಕಾದಲ್ಲಿದೆ ಭಾರತ ಎ ತಂಡ
India Tour Of South Africa: Omicron ರೂಪಾಂತರಿ ಆತಂಕದ ನಡುವೆಯೂ ಕೂಡ ರದ್ದಾಗಲ್ಲವಂತೆ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಸರಣಿ! ಕಾರಣ ಇಲ್ಲಿದೆ title=
India Tour Of South Africa (File Photo)

ನವದೆಹಲಿ: India Tour Of South Africa - ದಕ್ಷಿಣ ಆಫ್ರಿಕಾದಲ್ಲಿ ಕರೋನಾದ ಓಮಿಕ್ರಾನ್ ರೂಪಾಂತರದ ಹೆಚ್ಚುತ್ತಿರುವ ಪ್ರಭಾವದ ನಡುವೆ, ಭಾರತ ತಂಡದ ಪ್ರವಾಸದ ಮೇಲೆ ಓಮಿಕ್ರಾನ್ ಕಾರ್ಮೋಡ ಕವಿದಿದೆ. ಭಾರತ ಕ್ರಿಕೆಟ್ ತಂಡ ಡಿಸೆಂಬರ್ 17 ರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿದೆ, ಆದರೆ ಈ ನಡುವೆ ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವಾಲಯದಿಂದ ಮಹತ್ವದ ಹೇಳಿಕೆ ಪ್ರಕಟವಾಗಿದ್ದು, ಪ್ರವಾಸದ ಸಾಧ್ಯತೆಯನ್ನು ಹೆಚ್ಚಿಸಿದೆ.

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಹೋಗಬೇಕಿದೆ
ಡಿಸೆಂಬರ್ 17 ರಿಂದ ಪ್ರಾರಂಭವಾಗುವ ಸುಮಾರು 7 ವಾರಗಳ ಪ್ರವಾಸದಲ್ಲಿ ಟೀಮ್ ಇಂಡಿಯಾ (Team India) 3 ಟೆಸ್ಟ್, 3 ODI ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿದೆ. ಈ ಪಂದ್ಯಗಳು ಜೋಹಾನ್ಸ್‌ಬರ್ಗ್, ಸೆಂಚುರಿಯನ್, ಪರ್ಲ್ ಮತ್ತು ಕೇಪ್ ಟೌನ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ನಡೆಯಲಿವೆ. ದಕ್ಷಿಣ ಆಫ್ರಿಕಾದ ಉತ್ತರ ಭಾಗದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಕನಿಷ್ಠ ಎರಡು ಟೆಸ್ಟ್ ಸರಣಿಯ ಮೈದಾನಗಳಾದ ಜೋಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾ (ಸೆಂಚುರಿಯನ್‌ಗೆ ಹತ್ತಿರ) ಈ ಹೊಸ ರೂಪಾಂತರಕ್ಕೆ ಗುರಿಯಾಗಬಹುದು ಎನ್ನಲಾಗಿದೆ.

ವಿದೇಶಾಂಗ ಸಚಿವಾಲಯದ (Foreign Ministry) ಸ್ಪಷ್ಟನೆ
ಇದೀಗ ದಕ್ಷಿಣ ಆಫ್ರಿಕಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟೀಂ ಇಂಡಿಯಾಗೆ ಎಲ್ಲ ರೀತಿಯ ಭದ್ರತೆ ನೀಡುವುದಾಗಿ ಸ್ಪಷ್ಟಪಡಿಸಿದೆ. ಭಾರತ ತಂಡವು ದಕ್ಷಿಣ ಆಫ್ರಿಕಾಕ್ಕೆ ಬಂದಾಗ, ಅದು ಸಂಪೂರ್ಣ ಜೈವಿಕ ಬಬಲ್ ಪರಿಸರವನ್ನು ಪಡೆಯಲಿದೆ. ಟೀಂ ಇಂಡಿಯಾ ಯಾವುದೇ ರೀತಿಯ ಸಮಸ್ಯೆ ಎದುರಿಸುವುದಿಲ್ಲ. ಭಾರತ-ಎ ತಂಡವು ಇನ್ನೂ ದಕ್ಷಿಣ ಆಫ್ರಿಕಾದಲ್ಲಿ ಪಂದ್ಯಗಳನ್ನು ಆಡುತ್ತಿರುವ ಕಾರಣ ದಕ್ಷಿಣ ಆಫ್ರಿಕಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಿಸಿಸಿಐಗೆ ಧನ್ಯವಾದ ಸಲ್ಲಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತ ಎ ತಂಡ
ಭಾರತ ಎ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಭಾರತ ಎ ತಂಡದ ಜೊತೆಗೆ ಬ್ಲೋಮ್‌ಫಾಂಟೈನ್‌ನಲ್ಲಿರುವ ಆಡಳಿತ ಅಧಿಕಾರಿಯನ್ನು ಪಿಟಿಐ ಸಂಪರ್ಕಿಸಿದೆ. ಈ ಕುರಿತು ಮಾತನಾಡಿರುವ ಅವರು 'ನಾವು ಇಲ್ಲಿಗೆ ತಲುಪಿದಾಗ ನಾವು ಕಟ್ಟುನಿಟ್ಟಾದ ಕ್ವಾರಂಟೈನ್ ಮೂಲಕ ಹೋಗಬೇಕಾಗಿಲ್ಲ ಏಕೆಂದರೆ ನಾವು ಚಾರ್ಟರ್ಡ್ ವಿಮಾನದಲ್ಲಿ ಬಂದಿದ್ದೇವೆ ಮತ್ತು ಜೈವಿಕ ಬಬಲ್‌ನಲ್ಲಿ ವಾಸಿಸುತ್ತಿದ್ದೇವೆ. ಹೊಸ ಪ್ರಕರಣಗಳು ಕಂಡುಬಂದ ನಂತರ ಕ್ರಿಕೆಟ್ ದಕ್ಷಿಣ ಆಫ್ರಿಕಾದ ವೈದ್ಯಕೀಯ ತಂಡವು ನಮ್ಮ ಪ್ರತಿನಿಧಿಗಳೊಂದಿಗೆ ಇಲ್ಲಿ ಸಭೆ ನಡೆಸಿದೆ' ಎಂದು ಹೇಳಿದ್ದಾರೆ. 

ಭಾರತ vs ದಕ್ಷಿಣ ಆಫ್ರಿಕಾ 2021-22 ಸಂಪೂರ್ಣ ವೇಳಾಪಟ್ಟಿ (India Tour Of South Africa Schedule)
1 ನೇ ಟೆಸ್ಟ್ - ವಾಂಡರರ್ಸ್, ಜೋಹಾನ್ಸ್‌ಬರ್ಗ್ - ಡಿಸೆಂಬರ್ 17-21 ರವರೆಗೆ
2 ನೇ ಟೆಸ್ಟ್ - ಸೂಪರ್‌ಸ್ಪೋರ್ಟ್ ಪಾರ್ಕ್, ಸೆಂಚುರಿಯನ್ - 26-30 ಡಿಸೆಂಬರ್ ವರೆಗೆ 
3 ನೇ ಟೆಸ್ಟ್ - ವಾಂಡರರ್ಸ್, ಜೋಹಾನ್ಸ್‌ಬರ್ಗ್ - 3 ಜನವರಿಯಿಂದ 7 ಜನವರಿವರೆಗೆ

ಇದನ್ನೂ ಓದಿ-Ballon d'Or 2021: ಸತತ 7ನೇ ಬಾರಿಗೆ FIFA Ballon d'Or ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ Lionel Messi

1 ನೇ ODI - ಬೋಲ್ಯಾಂಡ್ ಪಾರ್ಕ್, ಪಾರ್ಲ್ - 11 ಜನವರಿ
2ನೇ ODI - ನ್ಯೂಲ್ಯಾಂಡ್ಸ್, ಕೇಪ್ ಟೌನ್ - 14 ಜನವರಿ
3ನೇ ODI - ನ್ಯೂಲ್ಯಾಂಡ್ಸ್, ಕೇಪ್ ಟೌನ್ - ಜನವರಿ 16

ಇದನ್ನೂ ಓದಿ-IPL : ಬೆಸ್ಟ್ ಆಟಗಾರರನ್ನು ಕೈಬಿಟ್ಟ ಧೋನಿ ನೇತೃತ್ವದ CSK ಟೀಂ!

1ನೇ ಟಿ20 - ನ್ಯೂಲ್ಯಾಂಡ್ಸ್, ಕೇಪ್ ಟೌನ್ - ಜನವರಿ 19
2ನೇ ಟಿ20 - ನ್ಯೂಲ್ಯಾಂಡ್ಸ್, ಕೇಪ್ ಟೌನ್ - ಜನವರಿ 21
3 ನೇ T20 - ಬೋಲ್ಯಾಂಡ್ ಪಾರ್ಕ್, ಪಾರ್ಲ್ - 23 ಜನವರಿ
4ನೇ ಟಿ20 - ಬೋಲ್ಯಾಂಡ್ ಪಾರ್ಕ್, ಪಾರ್ಲ್ - 26 ಜನವರಿ

ಇದನ್ನೂ ಓದಿ-IPL 2022 : Mega Auction ಮುಂಚೆಯೇ ದೊಡ್ಡ ನಿರ್ಧಾರಕ್ಕೆ ಬಂದ ಮುಂಬೈ ಇಂಡಿಯನ್ಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News