ನವದೆಹಲಿ : ಕ್ರಿಕೆಟ್ ಪ್ರಿಯರಿಗೆ ಐಪಿಎಲ್ 2022 ರ ಸೀಸನ್‌ ಭರ್ಜರಿ ಸಿಹಿ ಸುದ್ದಿ ನೀಡಲಿದೆ. ಈ ಸೀಸನ್‌ನಲ್ಲಿ 8 ಅಲ್ಲ 10 ತಂಡಗಳು ಭಾಗವಹಿಸಲಿವೆ. ಹೊಸದಾಗಿ ಎರಡು ತಂಡಗಳಿಗೆ ಲಕ್ನೋ ಮತ್ತು ಅಹಮದಾಬಾದ್ ಹೆಸರನ್ನು ಇಡಲಾಗಿದೆ. ಆದರೆ ಐಪಿಎಲ್‌ನಲ್ಲಿ ಪ್ರತಿಯೊಂದು ತಂಡಕ್ಕೂ ವಿಭಿನ್ನ ಹೆಸರುಗಳಿವೆ ಮತ್ತು ಅಹಮದಾಬಾದ್ ಮತ್ತು ಲಕ್ನೋ ತಂಡಗಳು ಯಾವ ಹೆಸರಿನಲ್ಲಿ ಐಪಿಎಲ್‌ಗೆ ಪ್ರವೇಶಿಸುತ್ತವೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ಲಕ್ನೋ ತಂಡ ತನ್ನ ಹೆಸರನ್ನು ಅನೌನ್ಸ್  ಮಾಡುವ ಮೂಲಕ ಐಪಿಎಲ್ 2022 ಗೆ ಎಂಟ್ರಿ ನೀಡಲು ರೆಡಿ ಆಗಿದೆ.


COMMERCIAL BREAK
SCROLL TO CONTINUE READING

ಹೆಸರು ಘೋಷಿಸಿದ ಲಕ್ನೋ 


ಲಕ್ನೋ ತಂಡವು ಈ ವರ್ಷ ಐಪಿಎಲ್‌ಗೆ ವಿಶೇಷ ಹೆಸರಿನೊಂದಿಗೆ ಪ್ರವೇಶಿಸಲಿದೆ. ಲಕ್ನೋ ತಂಡವು ತನ್ನನ್ನು ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ಎಂದು ಹೆಸರಿಸಿದೆ. ಈ ತಂಡದ ಮಾಲೀಕತ್ವವು ಆರ್‌ಪಿ ಸಂಜೀವ್ ಗೋಯೆಂಕಾ ಗ್ರೂಪ್‌ನಲ್ಲಿದೆ. ಲಕ್ನೋ ಫ್ರಾಂಚೈಸ್ ತನ್ನ ಹೆಸರನ್ನು ಸೋಮವಾರ ಅಧಿಕೃತವಾಗಿ ಪ್ರಕಟಿಸಿದೆ.


ಇದನ್ನೂ ಓದಿ : ICC Awards: ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾದ ಸ್ಮೃತಿ ಮಂಧಾನ


ಟೀಂ ಕ್ಯಾಪ್ಟನ್ ಆಗ್ತಾರೆ ಕೆಎಲ್ ರಾಹುಲ್


ಲಕ್ನೋ ಸೂಪರ್ ಜೈಂಟ್ಸ್ ಈಗಾಗಲೇ ತಮ್ಮ ಕ್ಯಾಪ್ಟನ್ ಹೆಸರು ಘೋಷಿಸಿದೆ. ಐಪಿಎಲ್ 2022ರಲ್ಲಿ ಕೆಎಲ್ ರಾಹುಲ್(KL Rahul) ನಾಯಕರಾಗಲಿದ್ದಾರೆ. ಲಕ್ನೋ 17 ಕೋಟಿ ಭಾರಿ ಮೊತ್ತ ನೀಡಿ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರು. ಈ ಹಿಂದೆ ಈ ಆಟಗಾರ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಅಷ್ಟೇ ಅಲ್ಲ, ಈ ಲೀಗ್‌ನ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾದರು. ಆದರೆ, ನಾಯಕನಾಗಿ ರಾಹುಲ್ ಅವರ ದಾಖಲೆ ಹೆಚ್ಚು ವಿಶೇಷವಾಗಿಲ್ಲ. ಈ ಆಟಗಾರ ಪ್ರತಿ ಕ್ರೀಡಾಋತುವಿನಲ್ಲೂ ಪಂಜಾಬ್ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯಲು ವಿಫಲರಾದರು.


IPL Mega Auction 2022) ಫೆಬ್ರವರಿ 11, 12 ಮತ್ತು 13 ರಂದು ನಡೆಯಲಿದೆ ಎಂಬ ಹೊಸ ಸುದ್ದಿ ಬಹಿರಂಗವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಬಿಸಿಸಿಐನ ಕೆಲವು ಮೂಲಗಳು ಈ ವಿಷಯವನ್ನು ಸ್ಪಷ್ಟಪಡಿಸಿವೆ. ಅಹಮದಾಬಾದ್ ಮತ್ತು ಲಕ್ನೋದಿಂದ ಹೊಸ ಫ್ರಾಂಚೈಸಿಯನ್ನು ದೃಢೀಕರಿಸಿದ ನಂತರವೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.


ಇದನ್ನೂ ಓದಿ : Virat Kohli: ರಿಷಭ್ ಪಂತ್ ‘ಗೋಲ್ಡನ್ ಡಕ್’ಗೆ ಔಟಾದಾಗ ಕೊಹ್ಲಿ ಮಾಡಿದ್ದೇನು ನೋಡಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.