KL Rahul: ವೈಟ್​ವಾಷ್ ಮುಖಭಂಗದ ಬಳಿಕ ನಾಯಕ ಕೆ.ಎಲ್.ರಾಹುಲ್ ಹೇಳಿದ್ದೇನು..?

ಈ ಸೋಲಿನಿಂದ ನಾವು ಅನೇಕ ವಿಚಾರಗಳನ್ನು ಕಲಿತ್ತಿದ್ದೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂಬರುವ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ  ಚಿಂತಿಸಬೇಕಾಗಿದೆ ಅಂತಾ ರಾಹುಲ್ ಹೇಳಿದ್ದಾರೆ.

Written by - Puttaraj K Alur | Last Updated : Jan 24, 2022, 01:18 PM IST
  • ದಕ್ಷಿಣ ಆಫ್ರಿಕಾದ ವಿರುದ್ಧ ವೈಟ್​ವಾಷ್ ಮುಖಭಂಗ ಅನುಭವಿಸಿದ ಟೀಂ ಇಂಡಿಯಾ
  • ಸೋಲಿನ ಸುಳಿಗೆ ಸಿಲುಕಿದ್ದ ತಂಡವನ್ನು ದೀಪಕ್ ಚಹರ್ ಗೆಲುವಿನ ದಡಕ್ಕೆ ತರುವ ಪ್ರಯತ್ನ ಮಾಡಿದ್ದರು
  • ಗೆಲುವಿಗಾಗಿ ನಾವು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡಿದ್ದೇವೆಂದ ಕೆ.ಎಲ್.ರಾಹುಲ್
KL Rahul: ವೈಟ್​ವಾಷ್ ಮುಖಭಂಗದ ಬಳಿಕ ನಾಯಕ ಕೆ.ಎಲ್.ರಾಹುಲ್ ಹೇಳಿದ್ದೇನು..? title=
ವೈಟ್​ವಾಷ್ ಮುಖಭಂಗ ಅನುಭವಿಸಿದ ಟೀಂ ಇಂಡಿಯಾ

ನವದೆಹಲಿ: ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ(Team India) ದೊಡ್ಡ ಮುಖಭಂಗ ಅನುಭವಿಸಿದೆ. 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಗೆಲ್ಲದೇ ವೈಟ್​ವಾಷ್ ಆಗಿದೆ. ಕನ್ನಡಿಗ ಕೆ.ಎಲ್.ರಾಹುಲ್ ಕ್ಯಾಪ್ಟನ್ ಆದ ಬಳಿಕ ಟೀಂ ಇಂಡಿಯಾ(India vs South Africa) ಹೀನಾಯ ಸೋಲು ಕಾಣುವಂತಾಯಿತು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ ಪಂದ್ಯದಲ್ಲಿ 31 ರನ್ ಗಳ ಸೋಲು ಕಂಡಿದ್ದ ಭಾರತ 2ನೇ ಪಂದ್ಯದಲ್ಲಿ 7 ವಿಕೆಟ್ ಅಂತರದ ಹೀನಾಯ ಸೋಲನುಭವಿಸಿತ್ತು. ನಿನ್ನೆ ನಡೆದ ಅಂತಿಮ ಹಾಗೂ ಕೊನೆಯ ಪಂದ್ಯದಲ್ಲಿ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಾಣುವ ಮೂಲಕ ಕೆ.ಎಲ್.ರಾಹುಲ್ ಪಡೆ ವೈಟ್​ವಾಷ್ ಆಗಿದೆ. ದೀಪಕ್ ಚಹರ್(Deepak Chahar) ಕೊನೆ ಹಂತದವರೆಗೂ ಹೋರಾಡಿದರೂ ಭಾರತಕ್ಕೆ ಗೆಲುವು ಸಿಗಲಿಲ್ಲ. ಪರಿಣಾಮ ನಾಯಕನ ಕ್ಯಾಪ್ ಧರಿಸಿದ ಬಳಿಕ ರಾಹುಲ್ ಹೆಸರಿಗೆ ಕೆಟ್ಟ ದಾಖಲೆಯೊಂದು ಸೇರ್ಪಡೆಯಾದಂತಾಯಿತು.  

ಇದನ್ನೂ ಓದಿ: 3rd IND vs SA ODI: ತಂದೆ ವಿರಾಟ್ ಅರ್ಧಶತಕದ ವೇಳೆ ಕಾಣಿಸಿಕೊಂಡ ಪುತ್ರಿ ವಾಮಿಕಾ

ದಕ್ಷಿಣ ಆಫ್ರಿಕಾ ವಿರುದ್ಧ ವೈಟ್​ವಾಷ್ ಆದ ಬಳಿಕ ಮಾತನಾಡಿರುವ ಕೆ.ಎಲ್.ರಾಹುಲ್(KL Rahul)  ಸೋಲಿಗೆ ಏನು ಕಾರಣ ಅನ್ನೋದನ್ನು ಬಹಿರಂಗಪಡಿಸಿದ್ದಾರೆ. ‘ಸೋಲಿನ ಸುಳಿಗೆ ಸಿಲುಕಿದ್ದ ತಂಡವನ್ನು ಗೆಲುವಿನ ದಡಕ್ಕೆ ತರುವ ಪ್ರಯತ್ನವನ್ನು ದೀಪಕ್ ಚಹರ್ ಮಾಡಿದ್ದರು. ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ನಮಗೆ ಅವರು ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದ್ದರು. ಹೀಗಾಗಿ ಈ ಪಂದ್ಯವು ತುಂಬಾ ರೋಚಕತೆಯಿಂದ ಕೂಡಿತ್ತು. ಆದರೆ ಅಂತಿಮವಾಗಿ ನಾವು ಸೋಲಿಗೆ ಶರಣಾಗಬೇಕಾಯಿತು. ಗೆಲುವಿಗಾಗಿ ನಾವು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡಿದ್ದೇವೆ. ಈ ಸೋಲಿನಿಂದ ನಾವು ಅನೇಕ ವಿಚಾರಗಳನ್ನು ಕಲಿತ್ತಿದ್ದೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂಬರುವ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ನಾವು ಚಿಂತಿಸಬೇಕಾಗಿದೆ’ ಅಂತಾ ರಾಹುಲ್ ಹೇಳಿದ್ದಾರೆ.

‘ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದು ನಮಗೆ ಈಗ ತಿಳಿದಿದೆ. ಈ ಸೋಲಿನಿಂದ ಹಿಂದೆ ಸರಿಯುವ ಮಾತೇ ಇಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ನಾವು ಕೆಲ ತಪ್ಪುಗಳನ್ನು ಮಾಡಿದ್ದರಿಂದ ತಂಡಕ್ಕೆ ಸೋಲಾಯಿತು. ಹೀಗಾಗಿ ನಾವು ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಆಟವಾಡಬೇಕಾಗಿದೆ. ಆಡುವಾಗಿನ ಕೌಶಲ್ಯ ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ತಪ್ಪು ಮಾಡಿದ್ದೇವೆ. ಇಂದೊಂದು ಕಳಪೆ ಪ್ರದರ್ಶನವೆಂಬುದು ನಮ್ಮ ಅರಿವಿಗೆ ಬಂದಿದೆ. ಏಕದಿನ ಸರಣಿಗಳಲ್ಲಿ ನಾವು ಆಗಾಗ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ಮುಂಬರುವ ವಿಶ್ವಕಪ್ ಟೂರ್ನಿ(ICC World Cup 2022)ಗೆ ಅತ್ಯುತ್ತಮ ತಂಡವನ್ನು ಸಜ್ಜುಗೊಳಿಸಬೇಕಾದ ಅನಿವಾರ್ಯತೆ ಇದೆ. ಸಾಕಷ್ಟು ಕಠಿಣ ಹೋರಾಟ ನಡೆಸಿದರೂ ನಮಗೆ ಸೋಲಾಗಿದೆ. ಇದರಿಂದ ನಾವು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳುವುದಿಲ್ಲ. ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಪ್ರದರ್ಶನ ನೀಡುವತ್ತ ಗಮನಹರಿಸುತ್ತೇವೆ’ ಅಂತಾ ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ: South Africa vs India: ಕೆ.ಎಲ್.ರಾಹುಲ್ ನಾಯಕತ್ವವನ್ನು ಬೆಂಬಲಿಸಿದ ಕೋಚ್ ರಾಹುಲ್ ದ್ರಾವಿಡ್

 ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಭಾನುವಾರ ನಡೆದ 3ನೇ ಏಕದಿನ ಪಂದ್ಯ(3rd ODI Match)ದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 49.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 287 ರನ್ ಗಳಿಸಿತ್ತು. ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್(124) ಭರ್ಜರಿ ಶತಕ ಭಾರಿಸಿ ಮಿಂಚಿದರು. ರಾಸಿ ವಂಡರ್ ಡುಸೆಲ್(52) ಮತ್ತು ಡೇವಿಡ್ ಮಿಲ್ಲರ್(39) ಉತ್ತಮ ಪ್ರದರ್ಶನ ನೀಡಿದರು. ಗೆಲುವಿನ ಗುರಿ ಬೆನ್ನತ್ತಿದ ಭಾರತ ಸಂಘಟಿತ ಹೋರಾಟದ ಮಧ್ಯೆಯೂ 49.2 ಓವರ್ ಗಳಲ್ಲಿ 283 ರನ್ ಗಳಿಗೆ ಆಲೌಟ್ ಆಯಿತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News