IPL 2024: ಅಹ್ಮದಾಬಾದ್ ಅಲ್ಲ ಇಲ್ಲಿ ನಡೆಯಲಿದೆ IPL 2024 Final, ಮಹತ್ವದ ಅಪ್ಡೇಟ್ ಇಲ್ಲಿದೆ!
IPL 2024 Final Match Update!: ಐಪಿಎಲ್ 2024 ರ ಫೈನಲ್ ಕುರಿತು ಒಂದು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಫೈನಲ್ ಪಂದ್ಯವು ಬಹುಶಃ ಮೇ 26 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂದು ಕ್ವಾಲಿಫೈಯರ್ ಮತ್ತು ಒಂದು ಎಲಿಮಿನೇಟರ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಎರಡನೇ ಕ್ವಾಲಿಫೈಯರ್ ಚೆನ್ನೈನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.(IPL 2024 News In Kannada)
IPL 2024 Final Match Update: ಐಪಿಎಲ್ 2024 ರ ಫೈನಲ್ ಕುರಿತು ಒಂದು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ಭಾರತೀಯ ಕ್ರಿಕೆಟ್ ಮಂಡಳಿ (BCCI) ಮೂಲಗಳ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಫೈನಲ್ ಬಹುಶಃ ಮೇ 26 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂದು ಕ್ವಾಲಿಫೈಯರ್ ಮತ್ತು ಒಂದು ಎಲಿಮಿನೇಟರ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಎರಡನೇ ಕ್ವಾಲಿಫೈಯರ್ ಚೆನ್ನೈನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. (IPL 2024 News In Kannada)
IPL 2024 ಫೈನಲ್ ಎಲ್ಲಿ ನಡೆಯಲಿದೆ?
ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, 'ಐಪಿಎಲ್ ಆಡಳಿತ ಮಂಡಳಿಯು ಕಳೆದ ವರ್ಷದ ಹಾಲಿ ಚಾಂಪಿಯನ್(ಚೆನ್ನೈ ಸೂಪರ್ ಕಿಂಗ್ಸ್ ತವರು ಮೈದಾನದಲ್ಲಿ ಆರಂಭಿಕ ಮತ್ತು ಫೈನಲ್ ಪಂದ್ಯಗಳನ್ನು ನಡೆಸುವ ಸಂಪ್ರದಾಯವನ್ನು ಅನುಸರಿಸಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ನ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ (ipl 2024 schedule)
ಒಂದು ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ತಲುಪಿದರೆ, ಮಹೇಂದ್ರ ಸಿಂಗ್ ಧೋನಿಗೆ ತಮ್ಮ ತವರು ನೆಲದಲ್ಲಿ ವಿದಾಯ ಹೇಳಲು ಉತ್ತಮ ಅವಕಾಶವಿದೆ. ಐಪಿಎಲ್ 2024 ರ ನಂತರ ಮಹೇಂದ್ರ ಸಿಂಗ್ ಧೋನಿ ಮತ್ತೆ ಈ ಲೀಗ್‌ನಲ್ಲಿ ಆಡುವ ಸಾಧ್ಯತೆಯಿಲ್ಲ. ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ನ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದೆ ಮತ್ತು ಅದನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು ಎನ್ನಲಾಗಿದೆ. ಐಪಿಎಲ್ ಆಯೋಜಕರು ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು 15 ದಿನ ಮುಂಚಿತವಾಗಿ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ-IPL 2024: 'ರುತುರಾಜ್ ಮುಖವನ್ನೂ ತೋರಿಸು ಬ್ರೋ... ಬರೀ ಧೋನಿಯ ಮುಖವನ್ನೇ!', ಹೀಗಂತ ಸೆಹ್ವಾಗ್ ಯಾರಿಗೆ ಹೇಳಿದ್ದು?
ಐಪಿಎಲ್ ಪ್ಲೇಆಫ್ ಪಂದ್ಯಗಳು ಎಲ್ಲೆಲ್ಲಿ ನಡೆಯಲಿವೆ? (ipl 2024 schedule with venue)
1. ಅಂತಿಮ ಪಂದ್ಯ - ಚೆಪಾಕ್ ಸ್ಟೇಡಿಯಂ, ಚೆನ್ನೈ
2. ಮೊದಲ ಕ್ವಾಲಿಫೈಯರ್ - ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
3. ಎಲಿಮಿನೇಟರ್- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
4. ಎರಡನೇ ಕ್ವಾಲಿಫೈಯರ್ - ಚೆಪಾಕ್ ಸ್ಟೇಡಿಯಂ, ಚೆನ್ನೈ
ಇದನ್ನೂ ಓದಿ-IPL 2024: ಐಪಿಎಲ್ ನ ಈ ತಂಡದಲ್ಲಿ ಆಸ್ಟ್ರೇಲಿಯಾ-ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನ ಓರ್ವ ಆಟಗಾರ ಕೂಡ ಇಲ್ಲ!
ಐಪಿಎಲ್ 2024 ರಲ್ಲಿ ದುವರೆಗೆ ಮೂರು ಪಂದ್ಯಗಳನ್ನು ಆಡಲಾಗಿದೆ
ಐಪಿಎಲ್ 2024 ರಲ್ಲಿ ಇದುವರೆಗೆ ಒಟ್ಟು ಮೂರು ಪಂದ್ಯಗಳನ್ನು ಆಡಲಾಗಿದೆ. ಐಪಿಎಲ್ 2024 ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ್ದರೆ(ipl 2024 first match), ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಈಡನ್ ಗಾರ್ಡನ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 4 ರನ್‌ಗಳಿಂದ ಸೋಲಿಸಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ