IPL 2024 RCB vs MI: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ (ಏಪ್ರಿಲ್ 11) ರಾಯಲ್ ಚಾಲೆಂಜರ್ಸ್ ಬೆಂಗಳೂರು  (Royal Challengers Bangalore) (ಆರ್‌ಸಿಬಿ) - ಮುಂಬೈ ಇಂಡಿಯನ್ಸ್ (Mumbai Indians) (ಎಂಐ)  ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Star fast bowler Jasprit Bumrah) ಐದು ವಿಕೆಟ್ ಕಬಳಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದರೊಂದಿಗೆ ಆರ್‌ಸಿ‌ಬಿ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎಂದೆನಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ರಾಯಲ್ ಚಾಲೆಂಜರ್ಸ್ ಬೆಂಗಳೂರು -ಆರ್‌ಸಿಬಿ (Royal Challengers Bangalore-RCB)  ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್- ಎಂಐ (Mumbai Indians- MI) ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಪ್ರಮುಖ ಕ್ರೆಡಿಟ್ ಸ್ಟಾರ್ ವೇಗ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಸಲ್ಲುತ್ತದೆ. 


ಇದನ್ನೂ ಓದಿ- IPL 2024: ಮುಂಬೈ ಇಂಡಿಯನ್ಸ್ ಅಬ್ಬರಕ್ಕೆ ತಬ್ಬಿಬ್ಬಾದ ಆರ್ಸಿಬಿ...!


ಅದ್ಭುತ ಶೈಲಿಯಲ್ಲಿ ಪಂದ್ಯವನ್ನು ಪ್ರಾರಂಭಿಸಿದ ಜಸ್ಪ್ರೀತ್ ಬುಮ್ರಾ (Jasprit Bumrah), ಅವರ ಮೊದಲ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ವಿಕೆಟ್ ಕಬಳಿಸಿದರು. ನಂತರ ತಮ್ಮ ಮೂರನೇ ಓವರ್‌ನಲ್ಲಿ ನಿನ್ನೆಯ ಪಂದ್ಯದಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಸಿಡಿಸುವಲ್ಲಿ ಯಶಸ್ವಿಯಾದ ಫಾಫ್ ಡು ಪ್ಲೆಸಿಸ್ ಬಳಿಕ ಮಹಿಪಾಲ್ ಲೊಮ್ರೋರ್ ಅವರನ್ನು ಬ್ಯಾಕ್-ಟು-ಬ್ಯಾಕ್ ಔಟ್ ಮಾಡಿದ. ಆರ್‌ಸಿ‌ಬಿ ಇನ್ನಿಂಗ್ಸ್ ನ 19ನೇ ಓವರ್‌ನಲ್ಲಿ ಸೌರವ್ ಚೌಹಾಣ್ ಮತ್ತು ವಿಜಯ್ ಕುಮಾರ್ ವೈಶಾಕ್ ಅವರ ವಿಕೆಟ್‌ಗಳನ್ನು ಉರುಳಿಸಿದರು. 


ಹೀಗೆ ಆರ್‌ಸಿ‌ಬಿ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆದ ಜಸ್ಪ್ರೀತ್ ಬುಮ್ರಾ ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದ ಮುಂಬೈ ಇಂಡಿಯನ್ಸ್ ತಂಡದ ಮೊದಲ ಬೌಲರ್, ಐಪಿಎಲ್‌ನ ನಾಲ್ಕನೇ ಬೌಲರ್ ಎಂದೆನಿಸಿಕೊಂಡರು. 


ಇದನ್ನೂ ಓದಿ- “ನಾನು ಈ ವಿಚಾರದಲ್ಲಿ ಗಡಗಡ ನಡುಗುತ್ತೇನೆ”- ಇದೇ ಮೊದಲ ಬಾರಿಗೆ ತನ್ನ ಭಯದ ಬಗ್ಗೆ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ


ಐದು ವಿಕೆಟ್ ಗಳಿಕೆಯೊಂದಿಗೆ, ಜಸ್ಪ್ರೀತ್ ಬುಮ್ರಾ ಈಗ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ವಿರುದ್ಧ 29 ವಿಕೆಟ್‌ಗಳನ್ನು ಪಡೆದಿದ್ದಾರೆ. ಮಾತ್ರವಲ್ಲ, ಐ‌ಪಿ‌ಎಲ್ ಪಂದ್ಯಾವಳಿಯಲ್ಲಿ ಫ್ರಾಂಚೈಸಿ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಗಮನಾರ್ಹವಾಗಿ, ಸಂದೀಪ್ ಶರ್ಮಾ ಮತ್ತು ರವೀಂದ್ರ ಜಡೇಜಾ  ಆರ್‌ಸಿ‌ಬಿ ವಿರುದ್ಧ ತಲಾ 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 


ಗುರುವಾರ ನಡೆದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಅದ್ಭುತ ಬೌಲಿಂಗ್ ಪ್ರದರ್ಶನಕ್ಕಾಗಿ ಪ್ಲೇಯರ್ ಆಫ್ ದ ಮ್ಯಾಚ್ ಎಂಬ ಕಿರೀಟವನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.