IPL 2024 MI vs RR: ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೂ ಕೂಡ ಕಾಲಕಾಲಕ್ಕೆ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತದೆ. ಇದಕ್ಕೆ ಕಾರಣ ಎಂದರೆ ಅವರ ಫಿಟ್ನೆಸ್ ಹಾಗೂ ತೂಕ. ಅದನ್ನು ನೋಡಿ ಅಭಿಮಾನಿಗಳು ಅವರಿಗೆ ಅಭಿಮಾನಿಗಳು ತರಹೇವಾರಿ ಹೆಸರುಗಳನ್ನಿಟ್ಟು ಕರೆಯುತ್ತಾರೆ. ಈ ಬಾರಿ RR ತಂಡದ ವಿರುದ್ಧ MI ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಓರ್ವ ಮಹಿಳಾ ಅಭಿಮಾನಿ ಹದ್ದು ಮೀರಿ ಒಂದು ವಿಶಿಷ್ಟ ಪೋಸ್ಟರ್ ಹಿಂಡಿದುಕೊಂಡು ಸ್ಟೇಡಿಯಂಗೆ ಆಮಿಸಿದ್ದರು. 

COMMERCIAL BREAK
SCROLL TO CONTINUE READING

RR ತಂಡದ ವಿರುದ್ಧ ಫ್ಲಾಪ್ ಆಗಿದ್ದಾರೆ ರೋಹಿತ್ 
ಹೌದು, ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಈ ಬಾರಿ ರೋಹಿತ್ ಶರ್ಮಾ ನೀರಸ ಪ್ರದರ್ಶನ ತೋರಿದ್ದಾರೆ. ಈಶಾನ್ ಜೊತೆಗೆ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೈದಾನಕ್ಕಿಳಿದ ರೋಹಿತ್ ಶರ್ಮಾ ಕೇವಲ 6 ರನ್ ಗಳಿಸಿ ಪೆವಳಿಯಂಗೆ ಮರಳಿದ್ದಾರೆ. 


ಇದನ್ನೂ ಓದಿ-IPL 2024 KKR vs RCB: "ಎದೆತಟ್ಟಿ ಹೇಳುವೆ Virat Kohli ವಿಕೆಟ್ ಗೆ ಅಂಪೈರ್ ತಪ್ಪು ನಿರ್ಣಯವೇ ಕಾರಣ"

ರೋಹಿತ್ ಈ ಪೋಸ್ಟರ್ ನೋಡಿದ್ದರೆ ಕೆಂಡಾಮಂಡಲವಾಗುತ್ತಿದ್ದರು
ನಿನ್ನೆ ಜೈಪುರ್ ನ ಸವಾಯಿ ಮಾನಸಿಂಗ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಪಂದ್ಯ ನಡೆದಿದೆ. ಈ ಸಂದರ್ಭದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಪೋಸ್ಟರ್ ವೊಂದನ್ನು ತೆಗೆದುಕೊಂಡು ಸ್ಟೇಡಿಯಂಗೆ ಎಂಟ್ರಿ ನೀಡಿದ್ದಾರೆ. ಈ ಪೋಸ್ಟರ್ ನಲ್ಲಿ ಸಂಜು ಸ್ಯಾಮ್ ಸನ್ ಹಾಗೂ ರೋಹಿತ್ ಶರ್ಮಾ ಭಾವಚಿತ್ರವಿತ್ತು. ಭಾವಚಿತ್ರಗಳ ಜೊತೆಗೆ "Dal Bati vs Vada Pav" ಎಂದು ಬರೆಯಲಾಗಿತ್ತು ಮತ್ತು ಎಲ್ಲರೂ ಆ ಪೋಸ್ಟರ್ ಅನ್ನೆ ನೋಡುತ್ತಿದ್ದರು. ವಾಸ್ತವದಲ್ಲಿ ರೋಹಿತ್ ಶರ್ಮಾ ಅವರನ್ನು ವಡಾ ಪಾವ್ ಹೆಸರಿನಿಂದ ಟ್ರೋಲ್ ಮಾಡಲಾಗುತ್ತದೆ ಮತ್ತು ಮೀಮ್ಸ್ ಗಳನ್ನು ಕೂಡ ತಯಾರಿಸಲಾಗುತ್ತದೆ. 


ಇದನ್ನೂ ಓದಿ-IPL 2024 RR vs MI: Yujvendra Chahal ವಿಶಿಷ್ಟ ದ್ವೀಶತಕ, ಇದುವರೆಗೂ ಈ ಸಾಧನೆ ಯಾರೂ ಮಾಡಿಲ್ಲ!

ರೋಹಿತ್ ಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ರೈನಾ
ಇತ್ತೀಚೆಗೆ ಸುರೇಶ್ ರೈನಾ ಸಂದರ್ಶನವೊಂದರಲ್ಲಿ ರೋಹಿತ್ ಶರ್ಮಾ ಅವರನ್ನು ಎಂಐ ನಾಯಕತ್ವದಿಂದ ತೆಗೆದು ಹಾಕಿರುವ ಬಗ್ಗೆ ಮಾತನಾಡಿದ್ದರು. ರೋಹಿತ್ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದು ನನಗೆ ಆಶ್ಚರ್ಯ ತಂದಿದೆ , ಈ ನಿರ್ಧಾರ ನನಗೆ ಅರ್ಥವಾಗಲಿಲ್ಲ. ಎಂಐ ತಂಡ ಹಾರ್ದಿಕ್ ನಾಯಕತ್ವದಲ್ಲಿ ಸೋಲು ಕಂಡಿದ್ದರೂ, ತಂಡದ ಪ್ರದರ್ಶನವನ್ನು ನೋಡಿದರೆ, ಈ ತಂಡವು ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಗಳಿಸುವುದು ಕಷ್ಟವೇ ಎನಿಸುತ್ತಿದೆ ಎಂದಿದ್ದರು. ಈ ತಂಡವು 2020 ರಲ್ಲಿ ಕೊನೆಯ ಬಾರಿಗೆ ಪ್ರಶಸ್ತಿಯನ್ನು ಗೆದ್ದಿದ್ದರೂ, ಅಂದಿನಿಂದ ತಂಡವು ಪ್ರಶಸ್ತಿಯನ್ನು ಗೆಲ್ಲಲು ಹೆಣಗಾಡುತ್ತಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ