IPL 2024 KKR vs RCB: "ಎದೆತಟ್ಟಿ ಹೇಳುವೆ Virat Kohli ವಿಕೆಟ್ ಗೆ ಅಂಪೈರ್ ತಪ್ಪು ನಿರ್ಣಯವೇ ಕಾರಣ"

IPL  2024 Virat Kohli Controversial Wicket: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ನವಜೋತ್ ಸಿಂಗ್ ಸಿಧು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.   

Written by - Nitin Tabib | Last Updated : Apr 22, 2024, 10:03 PM IST
  • KKR ವೇಗದ ಬೌಲರ್ ಹರ್ಷಿತ್ ರಾಣಾ, ವಿರಾಟ್ ಕೊಹ್ಲಿಗೆ ಬೀಮರ್ ಬಾಲ್ ಎಸೆದಿದ್ದಾರೆ ಮತ್ತು
  • ಯಾವುದೇ ಬ್ಯಾಟ್ಸ್‌ಮನ್ ಇಂತಹ ಚೆಂಡಿಗೆ ಔಟ್ ಆಗಲು ಸಾಧ್ಯವಿಲ್ಲ ಎಂದು ಸಿಧು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • ಇನ್ನೊಂದೆಡೆ, ಅವರು ರಾಣಾ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿದ್ದು, ಅಂತಹ ಚೆಂಡನ್ನು ಬೌಲ್ ಮಾಡಿದ ನಂತರ
  • ಬೌಲರ್ ಬ್ಯಾಟ್ಸ್ ಮನ್ ಕ್ಷಮೆಯಾಚಿಸಬೇಕು ಆದರೆ ಇದು ಸಂಭವಿಸಲಿಲ್ಲ ಎಂದು ಅವರು ಹೇಳಿದ್ದಾರೆ.
IPL 2024 KKR vs RCB: "ಎದೆತಟ್ಟಿ ಹೇಳುವೆ Virat Kohli ವಿಕೆಟ್ ಗೆ ಅಂಪೈರ್ ತಪ್ಪು ನಿರ್ಣಯವೇ ಕಾರಣ"  title=

IPL 2024 Navjot Singh Sidhu On Virat Kohli Wicket: ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ RCB ಮಾಜಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ನವಜೋತ್ ಸಿಂಗ್ ಸಿಧು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದ ವೇಳೆ, ವಿರಾಟ್‌ಗೆ ವಿವಾದಾತ್ಮಕ ಔಟ್ ನೀಡಲಾಗಿದೆ, ಇದರ ಬಳಿಕ ವಿವಾದ ಹುಟ್ಟಿಕೊಂಡಿದೆ ಮತ್ತು ಕ್ರಿಕೆಟ್ ಜಗತ್ತಿನ ಎಲ್ಲಾ ದಿಗ್ಗಜರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಸಿಧು ಕೊಹ್ಲಿ ಅನ್ನು ಬೆಂಬಲಿಸಿದ್ದಾರೆ ಮತ್ತು ಅಂಪೈರ್ ನಿರ್ಧಾರವನ್ನು ಅವರು ಖಂಡಿಸಿದ್ದಾರೆ. 

ಇದನ್ನೂ ಓದಿ-IPL 2024 RR vs MI: Yujvendra Chahal ವಿಶಿಷ್ಟ ದ್ವೀಶತಕ, ಇದುವರೆಗೂ ಈ ಸಾಧನೆ ಯಾರೂ ಮಾಡಿಲ್ಲ!

KKR ವೇಗದ ಬೌಲರ್ ಹರ್ಷಿತ್ ರಾಣಾ, ವಿರಾಟ್ ಕೊಹ್ಲಿಗೆ ಬೀಮರ್ ಬಾಲ್ ಎಸೆದಿದ್ದಾರೆ ಮತ್ತು ಯಾವುದೇ ಬ್ಯಾಟ್ಸ್‌ಮನ್ ಇಂತಹ ಚೆಂಡಿಗೆ ಔಟ್ ಆಗಲು ಸಾಧ್ಯವಿಲ್ಲ ಎಂದು ಸಿಧು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಅವರು ರಾಣಾ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿದ್ದು, ಅಂತಹ ಚೆಂಡನ್ನು ಬೌಲ್ ಮಾಡಿದ ನಂತರ ಬೌಲರ್ ಬ್ಯಾಟ್ಸ್ ಮನ್ ಕ್ಷಮೆಯಾಚಿಸಬೇಕು ಆದರೆ ಇದು ಸಂಭವಿಸಲಿಲ್ಲ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಭಾರತದ ಮಾಜಿ ಕ್ರಿಕೆಟಿಗ, ಸ್ಟಾರ್ ಸ್ಪೋರ್ಟ್ಸ್‌ನಲ್ಲಿನ ಸಂಭಾಷಣೆಯ ಸಮಯದಲ್ಲಿ, ಕೊಹ್ಲಿ ಔಟಾಗಿಲ್ಲ ಎಂಬ ತನ್ನ ನಿರ್ಧಾರದ ಮೇಲೆ ಧೃಢವಾಗಿ ನಿಂತಿದ್ದಾರೆ.

ಇದನ್ನೂ ಓದಿ-IPL 2024: KKR vs RCB ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ ನಡೆಸಿದ Shreyas Iyer-Gautam Gambhir ವಿಡಿಯೋ ನೋಡಿ

"ವಿರಾಟ್ ಕೊಹ್ಲಿ ಔಟಾಗಿಲ್ಲ ಎಂದು ಎಡೆತಟ್ಟಿ  ಹೇಳುತ್ತೇನೆ. ಅಂತಹ ಯಾವುದೇ ನಿಯಮವಿದ್ದರೆ ಅದನ್ನು ಬದಲಾಯಿಸಬೇಕು. ಆಟದ ಹಿತದೃಷ್ಟಿಯಿಂದ ನಿಯಮಗಳು ಇರಬೇಕು. ಇದು ಬೀಮರ್ ಬಾಲ್ ಆಗಿತ್ತು ಮತ್ತು ಯಾವುದೇ ಬೌಲರ್ ಅಂತಹ ಚೆಂಡನ್ನು ಬೌಲ್ ಮಾಡಿದರೆ, ಅವರು ಕ್ಷಮೆಯಾಚಿಸುತ್ತಾರೆ. ಆದರೆ, ಚೆಂಡು ಬ್ಯಾಟ್‌ಗೆ ತಗುಲಿದಾಗ, ಅದು ಸೊಂಟದಿಂದ ಒಂದೂವರೆ ಅಥವಾ ಎರಡು ಅಡಿ ಎತ್ತರದಲ್ಲಿದೆ ಮತ್ತು ನಿಯಮಗಳನ್ನು ಬದಲಾಯಿಸಬೇಕು ಎಂದು ನಾನು ಭಾವಿಸುತ್ತೇನೆ. ಒಂದೇ ಒಂದು ವಿಕೆಟ್ ಪಂದ್ಯದ ದಿಕ್ಕನ್ನೇ ಬದಲಾಯಿಸಿದೆ. ಅವರು ಕ್ಲೀಯರ್ ನಾಟ್ ಔಟ್ ಆಗಿದ್ದಾರೆ" ಎಂದು ಸಿಧು ಹೇಳಿದ್ದಾರೆ.

"MAIN CHHAATI THOKK KE KAHUNGA, NOT OUT!"@sherryontopp gives his verdict on that debatable @imVkohli dismissal from #KKRvRCB!

Enjoy more gold class 'Sidhuisms' from Sidhuji, throughout #IPLOnStar!

📺 | #PBKSvGT | LIVE NOW | #IPLFanWeekOnStar pic.twitter.com/8ZcjXOrgl4

— Star Sports (@StarSportsIndia) April 21, 2024

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News