IPL 2024 KKR vs LSG: ಐಪಿಎಲ್ 2024 ರ 28 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಇಂದು ತಮ್ಮ ತವರು ಮೈದಾನ ಈಡನ್ ಗಾರ್ಡನ್ಸ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸುತ್ತಿದೆ. ಕೆಕೆಆರ್‌ಗೆ ತವರು ನೆಲದಲ್ಲಿ ಇದು ಈ ಋತುವಿನ ಎರಡನೇ ಪಂದ್ಯವಾಗಿದೆ. ಈ ಪಂದ್ಯದೊಂದಿಗೆ ಕೋಲ್ಕತ್ತಾದ ತವರಿನ ಸುತ್ತು ಮತ್ತೆ ಆರಂಭವಾಗಿದೆ. ಅಂದರೆ ಕೆಕೆಆರ್ ಮುಂದಿನ ಐದು ಪಂದ್ಯಗಳನ್ನು ತವರು ನೆಲದಲ್ಲಿಯೇ ಆಡಲಿದೆ.


COMMERCIAL BREAK
SCROLL TO CONTINUE READING

ಪಂದ್ಯದ ಕುರಿತು ಹೇಳುವುದಾದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಲಖನೌ ವಿರುದ್ಧ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯಕ್ಕಾಗಿ ಕೆಕೆಆರ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಕಖನೌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಕೆಕೆಆರ್‌ನಲ್ಲಿ ರಿಂಕು ಸಿಂಗ್ ಬದಲಿಗೆ ಬೌಲರ್ ಹರ್ಷಿತ್ ರಾಣಾ ಸೇರ್ಪಡೆಗೊಂಡಿದ್ದಾರೆ. ಇದೇ ವೇಳೆ, ದೇವದತ್ ಪಡಿಕಲ್ ಮತ್ತು ನವೀನ್ ಉಲ್ ಹಕ್ ಬದಲಿಗೆ ದೀಪಕ್ ಹೂಡಾ ಮತ್ತು ಶಮರ್ ಜೋಸೆಫ್ ಅವರನ್ನು ಎಲ್ಎಸ್ಜಿಗೆ ಸೇರಿಸಲಾಗಿದೆ. ಇಂದಿನ ಪಂದ್ಯದದ ಮೂಲಕ ವೆಸ್ಟ್ ಇಂಡೀಸ್ ಬೌಲರ್ ಶಮರ್ ಜೋಸೆಫ್ ಐಪಿಎಲ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.


ತುಂಬಾ ಕಳಪೆ ಆರಂಭ ಮಾಡಿದ LSG 
ಲಖನೌ ಪರ ಕ್ವಿಂಟನ್ ಡಿ ಕಾಕ್ ಮತ್ತು ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದರು. ಮಿಚೆಲ್ ಸ್ಟಾರ್ಕ್ ಕೆಕೆಆರ್ ಬೌಲಿಂಗ್ ಆರಂಭಿಸಿದರು. ಮೊದಲ ಓವರ್‌ನಲ್ಲಿ 2 ಬೌಂಡರಿ ಸೇರಿದಂತೆ ಒಟ್ಟು 10 ರನ್‌ಗಳು ಬಂದವು. ಆದಾಗ್ಯೂ, ಲಖನೌ ತಂಡದ ಸ್ಕೋರ್  19 ರನ್ ಇದ್ದಾಗ ತಂಡಕ್ಕೆ ಕ್ವಿಂಟನ್ ಡಿ ಕಾಕ್ ರೂಪದಲ್ಲಿ ಮೊದಲ ಹೊಡೆತ ಬಿಟ್ಟು, ಅವರು 10 ರನ್ ಗಳಿಸಿ ಔಟಾದರು. ಡಿ ಕಾಕ್ ಔಟಾದ ಬಳಿಕ ದೀಪಕ್ ಹೂಡಾ ಬ್ಯಾಟಿಂಗ್ ಮಾಡಲು ಕ್ರೀಸ್ ಗೆ ಬಂದರು.


ಇದನ್ನೂ ಓದಿ-IPL 2024: ಮುಂಬೈ ಇಂಡಿಯನ್ಸ್ ತಂಡದ ಬಸ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡ Rohit Sharma, Watch Video


ಹೂಡಾ ಅವರಿಂದ ತಂಡವು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿತ್ತು, ಆದರೆ ಅವರು ಆರಂಭದಿಂದಲೂ ಬೌಲರ್‌ಗಳ ವಿರುದ್ಧ ಹೆಣಗಾಡುತ್ತಿರುವುದು ಕಂಡುಬಂತು.  ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಪವರ್‌ಪ್ಲೇನಲ್ಲಿ ಎರಡನೇ ಪೆಟ್ಟು ಬಿಟ್ಟು. ಸ್ಕೋರ್ 39 ಆಗಿರುವಾಗ  ಹೂಡಾ ಅವರ ವಿಕೆಟ್ ಪತನವಾಯಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ದೀಪಕ್ ಹೂಡಾ 8 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ದೀಪಕ್ ಹೂಡಾ ಅವರ ವಿಕೆಟ್ ಮಿಚೆಲ್ ಸ್ಟಾರ್ಕ್ ಪಡೆದುಕೊಂಡಿದ್ದಾರೆ, ಆದರೆ ರಮಣದೀಪ್ ಸಿಂಗ್ ಅವರ ಕ್ಯಾಚ್ ಪಡೆದುಕೊಂಡಿದ್ದು, ಈ ಕ್ಯಾಚ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. 


ಇದನ್ನೂ ಓದಿ-Ricardo Kaka-Caroline Celico Devorce: 'ಆತ ಅವಶ್ಯಕತೆಗಿಂತ ಹೆಚ್ಚು....' ವಿಚ್ಛೇದನೆಯ 9 ವರ್ಷಗಳ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ದಿಗ್ಗಜ ಫುಟ್ಬಾಲ್ ಆಟಗಾರನ ಮಾಜಿ ಪತ್ನಿ!


ದೀಪಕ್ ಹೂಡಾ ರೈಟ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಚೆಂಡನ್ನು ಸ್ಲೈಸ್ ಮಾಡಲು ಹೋದಾಗ, ರಮಣದೀಪ್ ಸಿಂಗ್ ಗಾಳಿಯಲ್ಲಿ ಹಾರುತ್ತಾ ಅದ್ಭುತ ಕ್ಯಾಚ್ ಪಡೆದುಕೊಂಡಿದ್ದಾರೆ. ಈ ಕ್ಯಾಚ್ ನೋಡಿದ ಅಭಿಮಾನಿಗಳು ಈ ವಿಕೆಟ್ ಅನ್ನು ಬೌಲರ್‌ಗೆ ಸಲ್ಲಬಾರದು ಮತ್ತು ಫೀಲ್ಡರ್ ಗೆ ಸಲ್ಲಬೇಕು ಎಂದು ಹೇಳಲು ಆರಂಭಿಸಿದ್ದಾರೆ.  


ವೈರಲ್ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ