Great Brazilian Football Player Ricardo Kaka: ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಅವರನ್ನು ಅವರ ಕಾಲದ ಅತ್ಯಂತ ಸುಂದರ ಫುಟ್ಬಾಲ್ ಆಟಗಾರ ಎಂದು ಕರೆಯಲಾಗುತ್ತಿತ್ತು. ಕಾಕಾ 2017 ರಲ್ಲಿ ವೃತ್ತಿಪರ ಫುಟ್‌ಬಾಲ್‌ನಿಂದ ನಿವೃತ್ತರಾಗಿದ್ದಾರೆ. ಕಾಕಾ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ,
Great Brazilian Football Player Ricardo Kaka: ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಅವರನ್ನು ಅವರ ಕಾಲದ ಅತ್ಯಂತ ಸುಂದರ ಫುಟ್ಬಾಲ್ ಆಟಗಾರ ಎಂದು ಕರೆಯಲಾಗುತ್ತಿತ್ತು. ಕಾಕಾ 2017 ರಲ್ಲಿ ವೃತ್ತಿಪರ ಫುಟ್‌ಬಾಲ್‌ನಿಂದ ನಿವೃತ್ತರಾಗಿದ್ದಾರೆ. ಕಾಕಾ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ, ಆದರೆ ಅವರು ತಮ್ಮ ಆಟದಿಂದ ವಿಶ್ವದಾದ್ಯಂತ ಫುಟ್ಬಾಲ್ ಪ್ರೇಮಿಗಳ ಹೃದಯದ ಮೇಲೆ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕಾಕಾ ತನ್ನ ಫುಟ್‌ಬಾಲ್ ಆಟ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಯಾವಾಗಲೂ ಸುದ್ದಿಯಲ್ಲಿರುತ್ತಿದ್ದರು. ಆದರೆ ಇದೀಗ ಅವರ ಮಾಜಿ ಪತ್ನಿ ತನ್ನ ವಿವಾಹ ವಿಚ್ಛೇದನೆ ಕುರಿತು ಶಾಕಿಂಗ್ ಅಂಶ ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿ ಜನರು ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ-Viral Video: ಆರು ಎಸೆತಗಳಲ್ಲಿ 6,6,6,6,6,6. ಕೇವಲ 21 ಎಸೆತಗಳಲ್ಲಿ 64 ರನ್, Watch Video!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ವಿವಾಹ: ಕಾಕಾ 2005 ರಲ್ಲಿ ಕ್ಯಾರೊಲಿನ್ ಸೆಲಿಕೊ ಅವರನ್ನು ವಿವಾಹವಾಗಿದ್ದರು. ಇಬ್ಬರೂ ಬಾಲ್ಯದಿಂದಲೂ ಪರಸ್ಪರ ಅರಿತುಕೊಂಡು ಸ್ನೇಹಿತರಾಗಿದ್ದರು. ಕಾಕಾ ಮತ್ತು ಸೆಲಿಕೊ ಅವರನ್ನು ಪರಿಪೂರ್ಣ ದಂಪತಿಗಳು ಎಂದು ಕರೆಯಲಾಗುತ್ತಿತ್ತು. ಇವರಿಬ್ಬರು 2015ರಲ್ಲಿ ಪರಸ್ಪರ ಬೇರ್ಪಟ್ಟಿದ್ದಾರೆ. ಇದನ್ನು ಕೇಳಿ ಎಲ್ಲರೂ ನಿಬ್ಬೆರಗಾಗಿದ್ದರು. ಕಾಕಾ ಮತ್ತು ಸೆಲಿಕೊ ಅವರ ವಿವಾಹವು 10 ವರ್ಷಗಳ ಕಾಲ ಮುಂದುವರೆದಿತ್ತು.
ವಿಚ್ಛೇದನೆಯ ಕಾರಣ ಹೇಳಿಕೊಂಡ ಸೆಲಿಕೋ: ಕಾಕಾ ಅವರ ಮಾಜಿ ಪತ್ನಿ ಸೆಲಿಕೊ 9 ವರ್ಷಗಳ ನಂತರ ವಿಚ್ಛೇದನದ ಕಾರಣವನ್ನು ಬಹಿರಂಗಪಡಿಸಿದ್ದಾಳೆ. ಸೂಪರ್‌ಸ್ಟಾರ್ ಫುಟ್‌ಬಾಲ್ ಆಟಗಾರನಿಂದ ವಿಚ್ಛೇದನೆ ಪಡೆಯಲು ಕಾಕಾ ಪರಿಪೂರ್ಣ ಪ್ರಾಮಾಣಿಕತೆಯೇ ಕಾರಣ ಎಂದಿದ್ದಾಳೆ. ಉಭಯರಿಗೆ ಇಬ್ಬರು ಮಕ್ಕಳಿದ್ದರೂ ಅವಳಿಗೆ ನೆಮ್ಮದಿ ಇರಲಿಲ್ಲ. ಯಾವುದೋ ಒಂದು ವಿಷಯದ ಕೊರತೆ ಇದೆ ಅನಿಸುತ್ತಿತ್ತು ಎಂದು ಸೇಲಿಕೋ ಹೇಳಿದ್ದಾರೆ.
'ಕಾಕಾ ನನ್ನ ಪಾಲಿಗೆ ತುಂಬಾ ಪರಿಪೂರ್ಣರಾಗಿದ್ದರು': ಈ ಕುರಿತು ಮುಂದುವರೆದು ಹೇಳಿಕೊಂಡ ಸೇಲಿಕೊ, “ಕಾಕಾ ನನಗೆ ಎಂದಿಗೂ ಮೋಸ ಮಾಡಲಿಲ್ಲ. ಅವರು ನನ್ನನ್ನು ಚೆನ್ನಾಗಿ ನಡೆಸಿಕೊಂಡರು. ಅವರು ನನಗೆ ಅದ್ಭುತ ಕುಟುಂಬವನ್ನು ನೀಡಿದರು, ಆದರೆ ನಾನು ಸಂತೋಷವಾಗಿರಲಿಲ್ಲ, ಏನೋ ಕೊರತೆ ಇದೆ ಅನಿಸುತ್ತಿತ್ತು. ಸಮಸ್ಯೆಯೆಂದರೆ ಆತ ನನ್ನ ಪಾಲಿಗೆ ತುಂಬಾ ಪರಿಪೂರ್ಣನಾಗಿದ್ದ.
ಎರಡನೇ ಬಾರಿ ವಿವಾಹವಾದ ಸೇಲಿಕೊ: ಸೆಲಿಕೊ, 36, ಎಡ್ವರ್ಡೊ ಸ್ಕಾರ್ಪಾ ಜೂಲಿಯೊ ಅವರನ್ನು 2021 ರಲ್ಲಿ ವಿವಾಹವಾಗಿದ್ದಾಳೆ. ಸೆಲಿಕೊ ಮೋಟಾರ್‌ಸೈಕ್ಲಿಸ್ಟ್ ಎಡ್ವರ್ಡೊ ಸ್ಕಾರ್ಪಾ ಅವರೊಂದಿಗೆ ಮೂರನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ.
ಕಾಕಾ ಕೂಡ ತನ್ನ ಜೀವನದಲ್ಲಿ ಮುಂದಕ್ಕೆ ಸಾಗಿದ್ದಾರೆ: ಅಷ್ಟೇ ಯಾಕೆ ಇಂದು ಕಾಕಾ ಕೂಡ ತನ್ನ ಜೀವನದಲ್ಲಿ ಮುಂದಕ್ಕೆ ಸಾಗಿ, ಕೆರೊಲಿನಾ ಡಯಾಸ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ 2019 ರಲ್ಲಿ ವಿವಾಹವಾದರು. ಕಾಕಾ ಮತ್ತು ಡಯಾಸ್‌ಗೆ ಇಬ್ಬರು ಮಕ್ಕಳಿದ್ದಾರೆ. ಬ್ರೆಜಿಲ್‌ನಿಂದ ಬಂದಿರುವ ಕಾಕಾ, ಕ್ಲಬ್ ಮಟ್ಟದಲ್ಲಿ ಸಾವೊ ಪಾಲೊ (ಬ್ರೆಜಿಲ್), ಎಸಿ ಮಿಲನ್ (ಇಟಲಿ), ರಿಯಲ್ ಮ್ಯಾಡ್ರಿಡ್ (ಸ್ಪೇನ್) ಮತ್ತು ಒರ್ಲ್ಯಾಂಡೊ ಸಿಟಿ (ಅಮೆರಿಕಾ) ತಂಡಗಳನ್ನು ಪ್ರತಿನಿಧಿಸಿದ್ದರು.