iPL 2024: GT VS MI: ನಿನ್ನೆ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಎದುರಿಸಿದೆ. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಮುಂಬೈ ತಂಡದ ನಾಯಕ ಸ್ಥಾನದ ಜವಾಬ್ದಾರಿ ಹೊತ್ತಿದ್ದಾರೆ. ಪಂದ್ಯದ ವೇಳೆ ಮೈದಾನದಲ್ಲಿ ನಡೆಯುತ್ತಿರುವ ಪೈಪೋಟಿಗಿಂತ ಎಲ್ಲರ ಗಮನ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಮೇಲೆ ಕೇಂದ್ರೀಕೃತವಾಗಿತ್ತು. ಈ ಪಂದ್ಯದ ವೇಳೆ, ಕೆಲ ಅಭಿಮಾನಿಗಳು ರೋಹಿತ್ ಶರ್ಮಾ (Rohit Sharma) ಪರ ಘೋಷಣೆಗಳನ್ನು ಕೂಗಿದರೆ ಕೆಲ ಅಭಿಮಾನಿಗಳು ಹಾರ್ದಿಕ್ ಪಾಂಡ್ಯಾ (Hardik Pandya) ಪರ ಘೋಷಣೆಗಳನ್ನು ಮೊಳಗಿಸಿದ್ದಾರೆ (IPL 2024 News In Kannada).


COMMERCIAL BREAK
SCROLL TO CONTINUE READING

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡ ಆರು ರನ್ ಗಳಿಂದ ಸೋಲನ್ನು ಅನುಭವಿಸಿದೆ. ಆದರೆ, ಈ ಪಂದ್ಯದ ವೇಳೆ ಕ್ರೀಡಾಂಗಣದಿಂದ ಹೊರಹೊಮ್ಮಿದ ಚಿತ್ರಗಳು ಮತ್ತು ವೀಡಿಯೊಗಳು ಕ್ರಿಕೆಟ್ ಅಭಿಮಾನಿಗಳ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿವೆ. ಸಾಮಾಜಿಕ ಮಾಧ್ಯಮದಲ್ಲಿ (Social Media) ಈ ಕುರಿತಾದ ವೀಡಿಯೊವೊಂದು ವೈರಲ್ ಆಗುತ್ತಿದೆ, ಇದರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪರಸ್ಪರ ಮಾರಾಮಾರಿ ನಡೆಸಿದ್ದಾರೆ (clash between mi and gt fans at narendra modi stadium ).


ಗುಜರಾತ್ ಮತ್ತು ಮುಂಬೈ ಅಭಿಮಾನಿಗಳ ಮಧ್ಯೆ ತೀವ್ರ ಹೊಡೆದಾಟ
ಪಂದ್ಯದ ಕುರಿತು ಹೇಳುವುದಾದರೆ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಭಮನ್ ಗಿಲ್ ನೇತೃತ್ವದ ತಂಡದ ವಿರುದ್ಧ ಹಾರ್ದಿಕ್ ತಂಡವು ಸೋಲನ್ನು ಅನುಭವಿಸಿದೆ. ರೋಹಿತ್ ಶರ್ಮಾ (43) ಮತ್ತು ಡೆವಾಲ್ಡ್ ಬ್ರೆವಿಸ್ (46) ಅವರ ಆಕರ್ಷಕ ಪ್ರದರ್ಶನದ ಹೊರತಾಗಿಯೂ, ಪಾಂಡ್ಯಾ ತಂಡ ಸೋಲನ್ನು ಅನುಭವಿಸಿದೆ. ಈ ರೋಚಕ ಪಂದ್ಯದಲ್ಲಿ ಗುಜರಾತ್ ಕೊನೆಯ ಓವರ್‌ನಲ್ಲಿ ಆರು ರನ್‌ಗಳಿಂದ ಪಂದ್ಯವನ್ನು ಗೆದ್ದು ಗೆಲುವಿನೊಂದಿಗೆ ಐಪಿಎಲ್ 2024 ರಲ್ಲಿ ಶುಭಾರಂಭ ಮಾಡಿದೆ. 


ಇದನ್ನೂ ಓದಿ-IPL 2024: ಐಪಿಎಲ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಶಿಖರ್ ಧವನ್, ಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರ!


ಪಂದ್ಯದ ನಂತರ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ಗುರಿ ಬೆನ್ನತ್ತುವ ವಿಶ್ವಾಸವಿದ್ದರೂ, ಮೋಮೆಂಟಮ್ ಕಳೆದುಕೊಂಡಿದ್ದರಿಂದ ಅಂತಿಮವಾಗಿ ಸೋಲನ್ನು ಅನುಭವಿಸಬೇಕಾಯಿತು. ಬಳಿಕ ಕ್ರೀಡಾಂಗಣದಲ್ಲಿನ ವಾತಾವರಣದ ಬಗ್ಗೆ ಮಾತನಾಡಿದ ನಂತರ ಋತುವಿನಲ್ಲಿ ಇನ್ನೂ 13 ಪಂದ್ಯಗಳು ಬಾಕಿ ಉಳಿದಿರುವ ಕಾರಣ ತಮ್ಮ ತಂಡವನ್ನು ಬೆಂಬಲಿಸಲು ಅಭಿಮಾನಿಗಳಿಗೆ ಕೋರಿದ್ದಾರೆ.


ಇದನ್ನೂ ಓದಿ-IPL 2024: ಮೈದಾನದಲ್ಲಿ SRH ತಂಡದ ಆಟಗಾರರ ವಿರುದ್ಧ ಅನುಚಿತವಾಗಿ ವರ್ತಿಸಿದ ಕೆಕೆಆರ್ ಆಟಗಾರ Watch Video


“ನಿಸ್ಸಂಶಯವಾಗಿ ನಾವು ಆ 42 ರನ್‌ಗಳನ್ನು ಬೆನ್ನಟ್ಟಲು ಯತ್ನಿಸಿದೆವು, ಆದರೆ ಕೊನೆಯಲ್ಲಿ ನಾವು ಮೋಮೆಂಟಮ್ ಕಳೆದುಕೊಂಡಿದ್ದೇವೆ.  ಅದಕ್ಕಾಗಿಯೇ ನಾವು ಸೋತಿದ್ದೇವೆ. ಹಿಂತಿರುಗುವುದು ಒಳ್ಳೆಯದು ಏಕೆಂದರೆ ನೀವು ವಾತಾವರಣವನ್ನು ಆನಂದಿಸುವ ಮತ್ತು ಅನುಭವಿಸುವ ಕ್ರೀಡಾಂಗಣ ಇದಾಗಿದೆ ಮತ್ತು ನಿಸ್ಸಂಶಯವಾಗಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು ಮತ್ತು ಅವರು ಕೂಡ ಉತ್ತಮ ಆಟವನ್ನು ಎಂಜಾಯ್ ಮಾಡಿದ್ದಾರೆ ಎಂದರು.  ಈ ಸಂದರ್ಭದಲ್ಲಿ ತಿಲಕ್ ರಶೀದ್ ಉತ್ತಮ ವಿಕಲ್ಪ ಭಾವಿಸಿದ್ದರು, ನಾನು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ, ಯಾವುದೇ ಸಮಸ್ಯೆಯಿಲ್ಲ, 13 ಪಂದ್ಯಗಳು ಉಳಿದಿವೆ" ಎಂದು ಹಾರ್ದಿಕ್ ಪಾಂಡ್ಯಾ ಹೇಳಿದ್ದಾರೆ. 


ಇಲ್ಲಿದೆ ವೈರಲ್ ವಿಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ