IPL 2024: ಐಪಿಎಲ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಶಿಖರ್ ಧವನ್, ಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರ!

IPL 2024: Punjab Kings Vs Delhi Capitals: ಐಪಿಎಲ್ 2024 ರಲ್ಲಿ ನಿನ್ನೆ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಪಂಜಾಬ್ ದೆಹಲಿ ತಂಡವನ್ನು ನಾಲ್ಕು ವಿಕೆಟ್ ಗಳಿಂದ ಬಗ್ಗು ಬಡೆದಿದೆ. ಪಂಜಾಬ್ 19.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಒಟ್ಟು 177 ರನ್ ಕಲೆ ಹಾಕಿ, ಗೆಲುವು ತನ್ನದಾಗಿಸಿಕೊಂಡಿದೆ. (IPL News In Kannada)   

Written by - Nitin Tabib | Last Updated : Mar 24, 2024, 09:00 PM IST
  • ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭವನ್ನು ಮಾಡಿ
  • ಶಿಖರ್ ಧವನ್ ಅವರ (16 ಎಸೆತದಲ್ಲಿ 22) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೇವಲ ಮೂರು ಓವರ್ ಗಳಲ್ಲಿ 34 ರನ್ ಕಲೆ ಹಾಕಿತು.
  • ಅಷ್ಟೊತ್ತಿಗೆ ಈಶಾನ್ ಶರ್ಮಾ ಅವರು ಧವನ್ ಅವರ ಮಿಡಲ್ ಸ್ಟಂಪ್ ಹಾಳು ಮಾಡಿದರು.
IPL 2024: ಐಪಿಎಲ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಶಿಖರ್ ಧವನ್, ಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರ! title=

Shikhar Dhawan Unique Record: ಐಪಿಎಲ್ 2024 ರಲ್ಲಿ ನಿನ್ನೆ ನಡೆದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ   ಸ್ಯಾಮ್ ಕುರ್ರಾನ್ ಅವರ ಅರ್ಧಶತಕ ಮತ್ತು ಅವರ ಇಂಗ್ಲೆಂಡ್ ನ ಸಹ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರ 67 ರನ್ ಜೊತೆಯಾಟದ ಸಹಾಯದಿಂದ, ಪಂಜಾಬ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ತನ್ನ ಈ ಬಾರಿಯ ಐಪಿಎಲ್ ಅಭಿಯಾನ ಆರಂಭಿಸಿದೆ. 14 ತಿಂಗಳ ಬಳಿಕ ಮೈದಾನಕ್ಕೆ ಕಾಲಿಟ್ಟ ರಿಷಬ್ ಪಂತ್ ಅವರಿಗೆ ಗೆಲುವನ್ನು ಆಚರಿಸಲು ಪಂಜಾಬ್ ಅವಕಾಶ ನೀಡಲಿಲ್ಲ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡ,  ಅಭಿಷೇಕ್ ಪೊರೆಲ್ ಅವರ 10 ಎಸೆತಗಳಲ್ಲಿ 32 ರನ್‌ಗಳ ಅಜೇಯ ಇನ್ನಿಂಗ್ಸ್‌ನ ಸಹಾಯದಿಂದ ಒಂಬತ್ತು ವಿಕೆಟ್‌ಗೆ 174 ರನ್‌ಗಳ ಸವಾಲಿನ ಸ್ಕೋರ್ ಪಂಜಾಬ್ ತಂಡಕ್ಕೆ ನೀಡಿತು. 

ಇದನ್ನೂ ಓದಿ-IPL 2024: ಮೈದಾನದಲ್ಲಿ SRH ತಂಡದ ಆಟಗಾರರ ವಿರುದ್ಧ ಅನುಚಿತವಾಗಿ ವರ್ತಿಸಿದ ಕೆಕೆಆರ್ ಆಟಗಾರ Watch Video

ಶಿಖರ್ ಧವನ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಷ್ಟೇನೂ ಹೇಳಿಕೊಳ್ಳುವ ಇನ್ನಿಂಗ್ಸ್ ಆಡದೆ ಹೋದರೂ, ತನ್ನ  22 ರನ್‌ಗಳ ಇನ್ನಿಂಗ್ಸ್‌ನಲ್ಲಿ ಅವರು ವಿಶಿಷ್ಟ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ, ಧವನ್ ಐಪಿಎಲ್ ಇತಿಹಾಸದಲ್ಲಿ 900 ಬೌಂಡರಿಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರ ರಾಗಿದ್ದಾರೆ.

ಇದನ್ನೂ ಓದಿ-IPL 2024: ಅಹ್ಮದಾಬಾದ್ ಅಲ್ಲ ಇಲ್ಲಿ ನಡೆಯಲಿದೆ IPL 2024 Final, ಮಹತ್ವದ ಅಪ್ಡೇಟ್ ಇಲ್ಲಿದೆ!

ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭವನ್ನು ಮಾಡಿ ಶಿಖರ್ ಧವನ್ ಅವರ (16 ಎಸೆತದಲ್ಲಿ 22) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೇವಲ ಮೂರು ಓವರ್ ಗಳಲ್ಲಿ 34 ರನ್ ಕಲೆ ಹಾಕಿತು. ಅಷ್ಟೊತ್ತಿಗೆ ಈಶಾನ್ ಶರ್ಮಾ ಅವರು ಧವನ್ ಅವರ ಮಿಡಲ್ ಸ್ಟಂಪ್ ಹಾಳು ಮಾಡಿದರು. ಬಳಿಕ ಬಂದ ಕರೇನ್ ಒಟ್ಟು 47 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರೆ, ಅವರಿಗೆ ಸಾಥ್ ನೀಡಿದ ಲಿವಿಂಗ್‌ಸ್ಟೋನ್ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ ಅಜೇಯ 38 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಸುಮಿತ್ ಕುಮಾರ್ ಭಾರಿಸಿದ ವಿನ್ನಿಂಗ್ ಸಿಕ್ಸರ್ ನೆರವಿನಿಂದ ಪಂಜಾಬ್ ತಂಡ 19.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಗೆಲುವಿನ ನಗೆ ಬೀರಿತು. 

ಇದನ್ನೂ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News