Harshi Rana Punished For Breaching IPL Code: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಯುವ ವೇಗದ ಬೌಲರ್ ಹರ್ಷಿತ್ ರಾಣಾ ಮೈದಾನದಲ್ಲಿ ಅನುಚಿತ ವರ್ತನೆ ತೋರಿರುವುದು ಇದೀಗ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ. ಶನಿವಾರ ನಡೆದ Sun Risers Hyderabad (SRH) ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ ಈ ಅನುಚಿತ ವರ್ತನೆ ತೋರಿದ್ದು, ಬಿಸಿಸಿಐ ಅವರಿಗೆ ಭಾರಿ ದಂಡ ವಿಧಿಸಿದೆ. ಶನಿವಾರ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ನಡೆದ ಐಪಿಎಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಹರ್ಷಿತ್ ರಾಣಾ 13 ರನ್ ಡಿಫೆಂಡ್ ಮಾಡಿದ್ದರು. ((IPL 2024 News In Kannada))
Sealed with a kiss 🫣
Watch #KKRvSRH with #IPLonJioCinema now in Bengali 🤩#TATAIPL #IPL2024 #JioCinemaSports pic.twitter.com/w2mf87HVa0
— JioCinema (@JioCinema) March 23, 2024
Harshit Rana fined 60% of his match fees for this. While it was little over the top, this much sportsmanship should be allowed in a high adrenaline match situation.. #KKRvsSRHpic.twitter.com/lIxsqfx8iz
— Keh Ke Peheno (@coolfunnytshirt) March 24, 2024
ಮೈದಾನದಲ್ಲಿ ಅನುಚಿತ ವರ್ತನೆ (kkr vs srh 2024)
ತುಂಬಾ ರೋಚಕ ಹಂತಕ್ಕೆ ತಲುಪಿದ್ದ ಈ ಪಂದ್ಯದ ಕೊನೆಯ ಓವರ್‌ನಲ್ಲಿ ಹರ್ಷಿತ್ ರಾಣಾ ಕೇವಲ 8 ರನ್ ನೀಡಿ 2 ವಿಕೆಟ್ ಪಡೆದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ 4 ರನ್‌ಗಳ ರೋಚಕ ಜಯ ತಂದುಕೊಟ್ಟರು (Ipl 2024 kkr vs srh match scorecard). ಈ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರು ಸನ್‌ರೈಸರ್ಸ್ ಹೈದರಾಬಾದ್ (SRH) ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ನಂತರ ಅವರ ಹತ್ತಿರ ಬಂದು ಫ್ಲೈಯಿಂಗ್ ಕಿಸ್ ನೀಡಿದರು. ಅಷ್ಟೇ ಅಲ್ಲ, ಪಂದ್ಯದ ಕೊನೆಯ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಅವರನ್ನು ಔಟ್ ಮಾಡಿದ ನಂತರ, ಹರ್ಷಿತ್ ರಾಣಾ ಆಕ್ರಮಣಕಾರಿ ಸಂಭ್ರಮಾಚರಣೆಯಲ್ಲಿ ತೊಡಗಿ ಅವರನ್ನು ಮೈದಾನ ತೊರೆಯುವಂತೆ ಸನ್ನೆ ಮಾಡಿದ್ದರು.
ದಂಡ ವಿಧಿಸಿದ ಬಿಸಿಸಿಐ (kkr vs srh 2024 highlights)
ಮೈದಾನದಲ್ಲಿ ಹರ್ಷಿತ್ ರಾಣಾ (harshi rana punished by bcci for breacing ipl code of conduct) ತೋರಿದ ಈ ನಡುವಳಿಕೆಯಿಂದ ಬಿಸಿಸಿಐ ಆಡಳಿತ ಮಂಡಳಿ ಗರಂ ಆಗಿದ್ದು, ತಕ್ಷಣ ಕ್ರಮ ಕೈಗೊಂಡಿದೆ. ಹರ್ಷಿತ್ ರಾಣಾಗೆ ಪಂದ್ಯ ಶುಲ್ಕದ ಶೇ.60ರಷ್ಟು ದಂಡ ವಿಧಿಸಲಾಗಿದೆ. ಹರ್ಷಿತ್ ರಾಣಾ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ಅಡಿಯಲ್ಲಿ ಎರಡು ಲೆವೆಲ್ 1 ಅಪರಾಧಗಳನ್ನು ಎಸಗಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಎರಡು ಪ್ರತ್ಯೇಕ ಅಪರಾಧಗಳಿಗಾಗಿ ಹರ್ಷಿತ್ ರಾಣಾಗೆ 10 ಪ್ರತಿಶತ ಮತ್ತು ಅವರ ಪಂದ್ಯದ ಶುಲ್ಕದ 50 ಪ್ರತಿಶತ ದಂಡ ವಿಧಿಸಲಾಗಿದೆ. ಹರ್ಷಿತ್ ರಾಣಾ ಅವರು ಎರಡೂ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಮ್ಯಾಚ್ ರೆಫರಿಯ ಶಿಕ್ಷೆಯನ್ನು ಸ್ವಾಕರಿಸಿದ್ದಾರೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಾಗಿ ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ