Preeti Zinta: `ನಾವು Rohit Sharma ಅವರನ್ನು PBKS ತಂಡದಲ್ಲಿ ಸೇರಿಸುತ್ತಿಲ್ಲ`
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಋತುವಿನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡ ನಾಯಕರಾಗಿ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡದಲ್ಲಿ ಶಾಮೀಲುಗೊಳಿಸಲಿದೆಯೇ ಎಂಬ ವಿಷಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
Indian Premier League 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಋತುವಿನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡ ನಾಯಕರಾಗಿ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡದಲ್ಲಿ ಶಾಮೀಲುಗೊಳಿಸಲಿದೆಯೇ ಎಂಬ ವಿಷಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಿಟ್‌ಮ್ಯಾನ್ ಹರಾಜಿನಲ್ಲಿ ಭಾಗವಹಿಸಿದರೆ, ಪಂಜಾಬ್ ಕಿಂಗ್ಸ್ (PBKS) ಸಹ-ಮಾಲಿಕೆಯಾಗಿರುವ ಪ್ರೀತಿ ಜಿಂಟಾ ಅವರನ್ನು ತನ್ನ ತಂಡದ ಭಾಗವಾಗಿ ಮಾಡಬಹುದು ಎನ್ನಲಾಗುತ್ತಿದೆಉ. ಈ ಸುದ್ದಿ ಇದೀಗ ಭಾರಿ ವೈರಲ್ ಆಗಿದ್ದು, ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ, ಪ್ರೀತಿ ಝಿಂಟಾ ಮಾತ್ರ ಇದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಈ ಕುರಿತು ತನ್ನ 'X' ಹಾಂಡಲ್ ನಲ್ಲಿ ಬರೆದುಕೊಂಡ ಪ್ರೀತಿ, "ನಕಲಿ ಸುದ್ದಿ. ಈ ಎಲ್ಲಾ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತ. ನಾನು ರೋಹಿತ್ ಶರ್ಮಾ ಅವರನ್ನು ತುಂಬಾ ಗೌರವಿಸುತ್ತೇನೆ. ನಾನು ಅವರ ದೊಡ್ಡ ಅಭಿಮಾನಿ, ಆದರೆ ನಾನು ಯಾವುದೇ ಸಂದರ್ಶನದಲ್ಲಿ ಅವರ ಬಗ್ಗೆ ಚರ್ಚಿಸಿಲ್ಲ. ನಾನು ಹೇಳಿದಂತೆ ಬರೆಯಲ್ಪಟ್ಟಿರುವ ಅಥವಾ ಪ್ರಸ್ತುತಪಡಿಸಿದ ಯಾವುದಾದರೂ ನನ್ನ ಕಾಮೆಂಟ್ ಕೂಡ ಅಲ್ಲ ಅದು ಅಲ್ಲ. ಶಿಖರ್ ಧವನ್ ಅವರನ್ನೂ ನಾನು ತುಂಬಾ ಗೌರವಿಸುತ್ತೇನೆ. ಇದೀಗ ಗಾಯಗೊಂಡು ಮೈದಾನದಿಂದ ಹೊರಗುಳಿದಿದ್ದಾರೆ. ಇಂತಹ ಸಂದರ್ಬದಲಿ ಇಂತಹ ವರದಿ ಪ್ರಕಟಿಸುವುದು ತಪ್ಪು. "ಪರಿಶೀಲನೆ ಇಲ್ಲದೆ ಆನ್‌ಲೈನ್‌ನಲ್ಲಿ ಹೇಗೆ ತಪ್ಪು ಮಾಹಿತಿ ಹರಡುತ್ತದೆ ಎಂಬುದಕ್ಕೆ ಇಂತಹ ವರದಿಗಳು ಉತ್ತಮ ಉದಾಹರಣೆಯಾಗಿವೆ" ಎಂದು ಹೇಳಿದ್ದಾರೆ
ಇದಕ್ಕೂ ಮುಂದುವರೆದು ಬರೆದುಕೊಂಡ ಪ್ರೀತಿ “ಈ ವರದಿಯನ್ನು ಪ್ರಸಾರ ಮಾಡದಂತೆ ನಾನು ಎಲ್ಲಾ ಮಾಧ್ಯಮಗಳಲ್ಲಿ ವಿನಂತಿಸುತ್ತೇನೆ. ಇಂತಹ ಸುದ್ದಿ ಎಲ್ಲರಿಗೂ ನಾಚಿಕೆಗೇಡು. ಸದ್ಯ ನಮ್ಮಲ್ಲಿರುವ ತಂಡ ತುಂಬಾ ಚೆನ್ನಾಗಿದೆ ಎಂದು ಹೇಳಲು ನಾನು ಬಯಸುತ್ತೇನೆ. ಈ ಐಪಿಎಲ್‌ನಲ್ಲಿ ಪಂದ್ಯಗಳನ್ನು ಗೆಲ್ಲುವುದು ಮತ್ತು ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿಯಾಗಿದೆ. ಧನ್ಯವಾದ." ಎಂದಿದ್ದಾರೆ.
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತೊರೆಯುತ್ತಾರಾ?
ಐಪಿಎಲ್ 2024 ರ ನಂತರ ರೋಹಿತ್ ತಂಡವನ್ನು ಬದಲಾಯಿಸುತ್ತಾರೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ (MI) ಮಾಜಿ ನಾಯಕ ಚೆನ್ನೈ ಸೂಪರ್ ಕಿಂಗ್ಸ್ (CSK) ಗೆ ಸೇರುತ್ತಾರೆ ಎಂಬ ವದಂತಿಯೂ ಇದೆ. ಏತನ್ಮಧ್ಯೆ, ಅವರು ಪಂಜಾಬ್ ಕಿಂಗ್ಸ್‌ಗೆ ಸೇರುವ ಬಗ್ಗೆ ಊಹಾಪೋಹಗಳು ಸಹ ಹುಟ್ಟಿಕೊಂಡಿವೆ. ಗುರುವಾರ ಚಂಡೀಗಢದಲ್ಲಿ ಪಂಜಾಬ್ ವಿರುದ್ಧ ರೋಹಿತ್ 36 ರನ್ ಗಳಿಸಿದ್ದು ಗೊತ್ತೇ ಇದೆ. ಅವರ ತಂಡ 9 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿದೆ. ಈ ಪಂದ್ಯದ ನಂತರ, ರೋಹಿತ್ PBKS ಸೇರುವ ಬಗ್ಗೆ ಊಹಾಪೋಹಗಳು ಸೃಷ್ಟಿಯಾಗಿವೆ.
ಇದನ್ನೂ ಓದಿ-ACC Men's Premium Cup 2024: ಕ್ರಿಕೆಟ್ ಇತಿಹಾಸದಲ್ಲಿಯೇ ಇಂತಹ ಕ್ಯಾಚ್ ನೋಡಲು ಸಿಗುವುದು ಅಪರೂಪ, Watch Video
ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾದಾಗಿನಿಂದ ರೋಹಿತ್ ಶರ್ಮಾ ಅಭಿಮಾನಿಗಳು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ ಮತ್ತು ಟ್ರೋಲ್ ಮಾಡುತ್ತಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಮೈದಾನದಲ್ಲಿ ಅಭಿಮಾನಿಗಳು ಹಾರ್ದಿಕ್ ವಿರುದ್ಧ ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.