IPL 2024: 'ಇದು ಎಲ್ಲಕ್ಕಿಂತ ಮಿಗಿಲಾದದ್ದು...', ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?

Shefali Bagga Comment On Shikhar Dhawan Post: ಟೀಮ್ ಇಂಡಿಯಾನಲ್ಲಿ ಗಬ್ಬರ್ ಎಂದೇ ಖ್ಯಾತ ಪಂಜಾಬ್ ಕಿಂಗ್ಸ್ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇದುವರೆಗೂ ಐಪಿಎಲ್‌ನಲ್ಲಿ ಅವರು ಆಡಬೇಕಾದ ರೀತಿಯಲ್ಲಿ ಆಟವನ್ನು ಪ್ರದರ್ಶಿಸಿಲ್ಲ.   

Written by - Nitin Tabib | Last Updated : Apr 19, 2024, 04:39 PM IST
  • 'ಯಾವಾಗಲೂ ನನ್ನೊಂದಿಗಿರುವೆ ಮಗಾ...' ಎಂದು ಧವನ್ ತಮ್ಮ ಪೋಸ್ಟ್ ಗೆ ಶೀರ್ಷಿಕೆಯನ್ನು ನೀಡಿದ್ದಾರೆ.
  • ಈ ಪೋಸ್ಟ್ ಬಹಿರಂಗಗೊಂಡ ಬಳಿಕ ಪ್ರತಿಯೊಬ್ಬರೂ ಧವನ್ ಅವರ ಚಡಪಡಿಕೆಯನ್ನು ಕುರಿತು ಮಾತನಾಡಿಕೊಳ್ಳುತ್ತಿದ್ದಾರೆ.
  • ಪ್ರಸ್ತುತ ಧವನ್ ಅವರ ಪೋಸ್ಟ್ ಭಾರಿ ವೈರಲ್ ಆಗಿದ್ದು, ಜನರು ಅದಕ್ಕೆ ಭಾರೀ ಕಮೆಂಟ್ ಮಾಡುತ್ತಿದ್ದಾರೆ.
IPL 2024: 'ಇದು ಎಲ್ಲಕ್ಕಿಂತ ಮಿಗಿಲಾದದ್ದು...', ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು? title=

ಶಿಖರ್ ಧವನ್ ಒಬ್ಬ ಸ್ಫೋಟಕ ಬ್ಯಾಟ್ಸ್‌ಮನ್ ಎಂಬುದು ಎಲ್ಲರಿಗೂ ತಿಳಿದಿದೆ ಮತ್ತು ಅವರ ಬ್ಯಾಟ್ ಬೌಲರ್‌ಗಳನ್ನು ಬಲವಾಗಿ ದಂಡಿಸುವವರೆಗೆ ಅವರ ಅಭಿಮಾನಿಗಳು ತೃಪ್ತರಾಗುವುದಿಲ್ಲ. ಇನ್ನೊಂದೆಡೆ ಶಿಖರ್ ಧವನ್ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಪಡುತ್ತಿದ್ದಾರೆ, ಆಟದ ಮೈದಾನದಂತೆ, ಶಿಖರ್ ಧವನ್ ಅವರ ವೈಯಕ್ತಿಕ ಬದುಕೂ ಕೂಡ ಕಷ್ಟದಲ್ಲಿದೆ. ಅವರು ತಮ್ಮ ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಪಡೆದಿರುವುದು ಎಲ್ಲರಿಗೂ ತಿಳಿದಿದೆ. 
ಆಯೇಷಾಗೆ ಮೂವರು ಮಕ್ಕಳಿದ್ದಾರೆ.

ಪ್ರಸ್ತುತ ಶಿಖರ್ ಹಾಗೂ ಆಯೇಷಾ ಬೇರ್ಪಟ್ಟಿದ್ದಾರೆ ಮತ್ತು ಅವರು ಆಸ್ಟ್ರೇಲಿಯದಲ್ಲಿ ವಾಸವಾಗಿದ್ದಾರೆ. ಶಿಖರ್ ಧವನ್ ಭಾರತದಲ್ಲಿದ್ದಾರೆ. ಧವನ್ ಜೊತೆಗಿನ ಎರಡನೇ ವಿವಾಹದ ಬಳಿಕ ಆಯೇಷಾಗೆ ಮೂವರು ಮಕ್ಕಳಿದ್ದಾರೆ. ತನ್ನ ಮೊದಲ ಮದುವೆಯಿಂದ ಆಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದರೆ, ಶಿಖರ್ ಧವನ್‌ ಅವರಿಂದ ಜೋರಾವರ್ ಎಂಬ ಮಗನನ್ನು ಹೊಂದಿದ್ದಾಳೆ, ಆತನ ಭೇಟಿಗೆ ಶಿಖರ್ ಯಾವಾಗಲೂ ತವಕಿಸುತ್ತಿರುತ್ತಾರೆ. 
ಏತನ್ಮಧ್ಯೆ ಶಿಖರ್ ಧವನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಈ ಪೋಸ್ಟ್ ನಲ್ಲಿ ಅವರು ಜೋರಾವರ್ ಅವರ ಹೆಸರಿನೊಂದಿಗೆ ಜರ್ಸಿಯನ್ನು ಕೈಯಲ್ಲಿ ಹಿಡಿದಿದ್ದಾರೆ. ಈ ಜರ್ಸಿ ಧರಿಸಿ ಅವರು ಐಪಿಎಲ್ ಪಂದ್ಯಗಳಲ್ಲಿ ಆಡಬಹುದು ಎಂದು ನಿರೀಕ್ಷಿಸಲಾಗಿದೆ. 

'ಯಾವಾಗಲೂ ನನ್ನೊಂದಿಗಿರುವೆ ಮಗಾ...' ಎಂದು ಧವನ್ ತಮ್ಮ ಪೋಸ್ಟ್ ಗೆ ಶೀರ್ಷಿಕೆಯನ್ನು ನೀಡಿದ್ದಾರೆ. ಈ ಪೋಸ್ಟ್ ಬಹಿರಂಗಗೊಂಡ ಬಳಿಕ ಪ್ರತಿಯೊಬ್ಬರೂ ಧವನ್ ಅವರ ಚಡಪಡಿಕೆಯನ್ನು ಕುರಿತು ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಧವನ್ ಅವರ ಪೋಸ್ಟ್ ಭಾರಿ ವೈರಲ್ ಆಗಿದ್ದು, ಜನರು ಅದಕ್ಕೆ ಭಾರೀ ಕಮೆಂಟ್ ಮಾಡುತ್ತಿದ್ದಾರೆ. 

ಇದನ್ನೂ ಓದಿ-ICC T20 World Cup 2024: ಈ 16 ವರ್ಷ ವಯಸ್ಸಿನ ಹುಡುಗನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿಯಂತೆ ಹರಡುತ್ತಿದೆ! Watch Video

ಕಾಮೆಂಟ್ ಮಾಡಿದ ಶೇಫಾಲಿ ಬಗ್ಗಾ
ಖ್ಯಾತ ಆಂಕರ್ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಶಫಾಲಿ ಬಗ್ಗಾ ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದು. ಪೋಸ್ಟ್ ಅನ್ನು 'ಐಪಿಎಲ್‌ನ ಅತ್ಯುತ್ತಮ ಪೋಸ್ಟ್ ಮತ್ತು ಅತ್ಯುತ್ತಮ ಚಿತ್ರ' ಎಂದು ಕರೆದಿದ್ದಾರೆ. ಇದಾದ ನಂತರ ಶಫಾಲಿ ಬಗ್ಗಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ಕೆಲವರು ಅವರ ಕಾಮೆಂಟ್ ಅನ್ನು ಶ್ಲಾಘಿಸುತ್ತಿದ್ದರೆ, ಕೆಲವರು ಶಫಾಲಿ ಮತ್ತು ಧವನ್ ಅವರನ್ನು ಲಿಂಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ.
 ತನ್ನ ಮೋಹಕ ನೋಟದಿಂದ ಶೇಫಾಲಿ ಸಾಕಷ್ಟು ಜನಪ್ರಿಯಳಾಗಿದ್ದಾಳೆ. ಶೇಫಾಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಕೂಡ ಆಗಿದ್ದಾಳೆ.  ಜುಲೈ 1, 1994 ರಂದು ದೆಹಲಿಯಲ್ಲಿ ಜನಿಸಿದ ಶಫಾಲಿ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾಳೆ ಮತ್ತು ನಂತರ ಮಾಸ್ ಕಮ್ಯೂನಿಕೇಷನ್ ಕೋರ್ಸ್ ಮುಗಿಸಿದ್ದಾಳೆ.

ಇದನ್ನೂ ಓದಿ-ICC T20 World Cup 2024: ಈ 16 ವರ್ಷ ವಯಸ್ಸಿನ ಹುಡುಗನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿಯಂತೆ ಹರಡುತ್ತಿದೆ! Watch Video

ಇದಾದ ಬಳಿಕ ಆ್ಯಂಕರಿಂಗ್ ಜಗತ್ತಿಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಟಿವಿಯ ಹಾಟ್ ಆ್ಯಂಕರ್ ಗಳಲ್ಲಿ ಶೇಫಾಲಿ ಒಬ್ಬಳಾಗಿದ್ದಾಳೆ. 'ಬಿಗ್ ಬಾಸ್' ನಿಂದಾಗಿ ಆಕೆ ಪ್ರತಿ ಮನೆ ಮಾತಾಗಿದ್ದಾಳೆ. ಪ್ರಸ್ತುತ ಆಕೆ ಉಡುಪಿನ ಬ್ರಾಂಡ್ ಕಂಪನಿಯೊಂದರ  ಮಾಲೀಕ ಆರವ್ ಜೈನ್ ಜೊತೆ ಡೇಟಿಂಗ್  ನಡೆಸುತ್ತಿದ್ದಾಳೆ ಎನ್ನಲಾಗುತ್ತಿದೆ! ಈ ದಿನಗಳಲ್ಲಿ ಶಫಾಲಿ ಉಡುಪಿನ ಬ್ರ್ಯಾಂಡ್ ಕಂಪನಿಯೊಂದರ ಮಾಲೀಕ ಆರವ್ ಜೈನ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ, ಆದರೂ ಅದನ್ನು ಉಭಯರು ಖಚಿತಪಡಿಸಿಲ್ಲ. ಅದೇನೇ ಇದ್ದರೂ,  ಶಿಖರ್ ಧವನ್ ಬಗ್ಗೆ ಕಾಮೆಂಟ್ ಮಾಡಿದ ಶೇಫಾಲಿ, ಸಾಮಾಜಿಕ ಮಾಧ್ಯಮದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುವುದಂತು ನಿಜ. ಶೇಫಾಲಿ ಕಾಮೆಂಟ್ ಗೆ ಕಾಮೆಂಟ್ ಮಾಡಿರುವ ಓರ್ವ ಬಳಕೆದಾರ. 'ದೆಹಲಿಯವರಿಗೆ ಮಾತ್ರ ದೆಹಲಿಯ ನೋವು ಅರ್ಥವಾಗುತ್ತದೆ' ಎಂದಿದ್ದಾರೆ. ಮತ್ತೊರ್ವ ಬಳಕೆದಾರರು 'ಇದು ಎಳೇಳು ಜನುಮದ ಬಂಧವಾಗಿ ಮಾರ್ಪಟ್ಟರೆ ಅದರಲ್ಲೇನು ತಪ್ಪು? ಎಂದು ಪ್ರಶ್ನಿಸಿದ್ದಾರೆ.ಜನರ ಇಂತಹ ಕಾಮೆಂಟ್‌ಗಳಿಗೆ ಶಫಾಲಿ ಅಥವಾ ಶಿಖರ್ ಧವನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಧವನ್ ಇದುವರೆಗೆ ಈ ಬಾರಿಯ ಐಪಿಎಲ್ ನಲ್ಲಾಡಿದ  5 ಪಂದ್ಯಗಳಲ್ಲಿ 151 ರನ್ ಗಳಿಸಿದ್ದಾರೆ, ಆದರೆ ಅವರು ದೀರ್ಘಕಾಲದವರೆಗೆ ಟೀಮ್ ಇಂಡಿಯಾದ ಭಾಗವಾಗಿಲ್ಲ. ಅವರು 2022 ರಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.

ಇಲ್ಲಿದೆ ಆ ವೈರಲ್ ಪೋಸ್ಟ್

ಇದನ್ನೂ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News