Ajinkya Rahane CSK : ಐಪಿಎಲ್ 2023 ಸೀಸನ್‌ಗಾಗಿ ಆಟಗಾರರ ಮಿನಿ ಹರಾಜು ಕೊಚ್ಚಿಯಲ್ಲಿ ನಡೆಯುತ್ತಿದೆ. ಐಪಿಎಲ್ 2023 ಸೀಸನ್‌ಗಾಗಿ ನಡೆಯುತ್ತಿರುವ ಈ ಹರಾಜಿನಲ್ಲಿ ಟೀಂ ಇಂಡಿಯಾದ ಆಟಗಾರನೊಬ್ಬನನ್ನ ತುಂಬಾ ಅಗ್ಗದ ಮೊತ್ತಕ್ಕೆ ಸೆಲ್ ಆಗಿದ್ದಾರೆ. ಐಪಿಎಲ್ 2023 ರ ಈ ಹರಾಜು ಪ್ರಾರಂಭವಾಗುವ ಮೊದಲು, ಈ ಆಟಗಾರನ ಐಪಿಎಲ್ ವೃತ್ತಿಜೀವನವು ಕೊನೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಈ ಟೀಂ ಇಂಡಿಯಾ ಆಟಗಾರ ಯಾರು?


ಐಪಿಎಲ್ ಹರಾಜಿನಲ್ಲಿ ಈ ಆಟಗಾರನನ್ನ ಚೆನ್ನೈ ಸೂಪರ್ ಕಿಂಗ್ಸ್  ಖರೀದಿಸಿದೆ. ತುಂಬಾ ದಿನಗಳಿಂದ ಈ ಆಟಗಾರ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ. ಐಪಿಎಲ್ 2023 ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 50 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿದೆ. ಅಜಿಂಕ್ಯ ರಹಾನೆ ಈಗ ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಲಿದ್ದಾರೆ.


ತುಂಬಾ ಅಗ್ಗದ ಬೆಳೆಗೆ ಸೆಲ್


ಅಜಿಂಕ್ಯ ರಹಾನೆ ಐಪಿಎಲ್ 2022 ರ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 1 ಕೋಟಿ ರೂಪಾಯಿಗೆ ಖರೀದಿಸಿತ್ತು, ಆದರೆ ಅವರು ಐಪಿಎಲ್ 2022 ರ 7 ಪಂದ್ಯಗಳಲ್ಲಿ ಕೇವಲ 133 ರನ್ ಗಳಿಸಿದರು. ಐಪಿಎಲ್ 2022 ರಲ್ಲಿ ಅಜಿಂಕ್ಯ ರಹಾನೆ ಅವರ ಕಳಪೆ ಪ್ರದರ್ಶನವನ್ನು ನೋಡಿ, ಅವರನ್ನು ಈ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಕೈ ಬಿಡಲಾಗಿತ್ತು. ಈಗ ಐಪಿಎಲ್ 2023 ರ ಹರಾಜಿನಲ್ಲಿ, ಅಜಿಂಕ್ಯ ರಹಾನೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 50 ಲಕ್ಷ ಬೆಲೆಗೆ ಖರೀದಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.