ನವದೆಹಲಿ : ಐಪಿಎಲ್ 2022ರ ಮೆಗಾ ಹರಾಜಿಗೂ (IPL Mega Auction) ಮುನ್ನ ಎಲ್ಲಾ 8 ತಂಡಗಳು ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.  ಕೆಲವು ದಿಗ್ಗಜ ಆಟಗಾರರನ್ನು ತಂಡಗಳು ಕೈಬಿಟ್ಟಿವೆ. ಈ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya), ರಶೀದ್ ಖಾನ್ ಮತ್ತು ಕೆಎಲ್ ರಾಹುಲ್ (KL Rahul) ಅವರಂತಹ ಆಟಗಾರರ ಹೆಸರುಗಳು ಸೇರಿವೆ. ಇನ್ನು RCB ಯಿಂದ ಕೈಬಿಡಲ್ಪಟ್ಟ ಈ ಆಟಗಾರನನ್ನು ಖರೀದಿಸಲು ಇತರ ತಂಡಗಳು ಎದುರು ನೋಡುತ್ತಿವೆ.  


COMMERCIAL BREAK
SCROLL TO CONTINUE READING

 ಮುಂಬೈ ಪಾಲಾಗುತ್ತಾರಾ RCBಯ ಈ ಆಟಗಾರ :
RCB ಉಳಿಸಿಕೊಂಡಿರುವ 3 ಆಟಗಾರರಲ್ಲಿ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಹೆಸರು ಇರಲಿಲ್ಲ. ಚಹಾಲ್ RCB ಯೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದಾರೆ.  ಆದರೆ ಮುಂದಿನ ಸೀಸನ್ ಗೆ ತಂಡ ಅವರನ್ನು ಉಳಿಸಿಕೊಂಡಿಲ್ಲ. ಇದೀಗ ಈ ಆಟಗಾರ ಹರಾಜು ಪೂಲ್ ಪ್ರವೇಶಿಸಲಿದ್ದಾರೆ. ಉಳಿದ ಎಲ್ಲಾ 9 ತಂಡಗಳು ಯುಜ್ವೇಂದ್ರ ಚಹಾಲ್ ಅವರನ್ನು ಟಾರ್ಗೆಟ್ ಮಾಡಲು ಪ್ರಯತ್ನಿಸುತ್ತವೆ. ಇವರ ಮೇಲೆ ಮುಂಬೈ ಇಂಡಿಯನ್ಸ್ (Mumbai Indians) ಈಗಾಗಲೇ ಕಣ್ಣು ಇಟ್ಟುಕೊಂಡಿದೆ. 


ಇದನ್ನೂ ಓದಿ : IPL 2022: ಮೂವರು ಮ್ಯಾಚ್ ವಿನ್ನರ್ ಗಳನ್ನೇ ಕೈಬಿಟ್ಟ ಮುಂಬೈ ಇಂಡಿಯನ್ಸ್..!


ರೋಹಿತ್ ಜೊತೆ ಚಹಾಲ್ ಉತ್ತಮ ಸ್ನೇಹ :
ರೋಹಿತ್ ಶರ್ಮಾ (Rohit Sharma) ಇಷ್ಟಪಡುವ ವಿಶೇಷ ಆಟಗಾರರಲ್ಲಿ ಯುಜ್ವೇಂದ್ರ ಚಹಾಲ್ ಕೂಡಾ ಒಬ್ಬರು. ವಿರಾಟ್ ಕೊಹ್ಲಿ ಜೊತೆಗಿನ ಚಹಲ್ ಸಂಬಂಧವೂ ಉತ್ತಮವಾಗಿದ್ದರೂ, ಈಗ ಕೊಹ್ಲಿ ಆರ್‌ಸಿಬಿ ನಾಯಕರಾಗಿ ಉಳಿದಿಲ್ಲ. ಮುಂಬೈ ತಂಡದಲ್ಲಿ ಮುಂದಿನ ಸೀಸನ್ ಗೆ ಯಾವುದೇ ಸ್ಪಿನ್ನರ್ ಇಲ್ಲ. ಹೀಗಿರುವಾಗ ಈ ತಂಡವು ಚಹಾಲ್ ಅವರನ್ನು ಹರಾಜಿನಲ್ಲಿ ಖರೀದಿಸಲು ಬಯಸುತ್ತದೆ ಎನ್ನುವುದರಲ್ಲಿಎರಡು ಮಾತಿಲ್ಲ. ಚಹಲ್ ತನ್ನ IPL ವೃತ್ತಿಜೀವನದ ಆರಂಭದಲ್ಲಿ, ಮುಂಬೈ ಇಂಡಿಯನ್ಸ್‌ಗಾಗಿ ಮಾತ್ರ ಆಡುತ್ತಿದ್ದರು. ಬಳಿಕ ಅವರು ಆರ್‌ಸಿಬಿ ಸೇರಿಕೊಂಡರು. 


RCB ಈ 3 ಆಟಗಾರರನ್ನು ಉಳಿಸಿಕೊಂಡಿದೆ :
RCB ಉಳಿಸಿಕೊಂಡ ಆಟಗಾರರಲ್ಲಿ ಮೊದಲ ಹೆಸರು ವಿರಾಟ್ ಕೊಹ್ಲಿ (Virat Kohli) ಅವರದ್ದು. ಈ ತಂಡವು 15 ಕೋಟಿಗೆ ಕೊಹ್ಲಿಯನ್ನು ಉಳಿಸಿಕೊಂಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಎರಡನೇ ಸ್ಥಾನದಲ್ಲಿದ್ದಾರೆ. ಅವರನ್ನು ಈ ತಂಡವು 11 ಕೋಟಿಗೆ ಉಳಿಸಿಕೊಂಡಿದೆ. ಅದೇ ಸಮಯದಲ್ಲಿ RCB ಮೊಹಮ್ಮದ್ ಸಿರಾಜ್ ಅವರನ್ನು 7 ಕೋಟಿಗೆ ಆಯ್ಕೆ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ ಚಹಾಲ್ ಹೆಸರು ಎಲ್ಲೂ ಇಲ್ಲ. 


ಇದನ್ನೂ ಓದಿ : IPL : ಕನ್ನಡಿಗ ಕೆಎಲ್ ರಾಹುಲ್ ಮತ್ತು ರಶೀದ್ ಖಾನ್‌ ಬ್ಯಾನ್!? ಈ ಆಟಗಾರರಿಂದ ನಡೆದಿದೆ ದೊಡ್ಡ ತಪ್ಪು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.