IPL 2024: ಐಪಿಎಲ್ ಮೊದಲ ಬಾರಿಗೆ 2008 ರಲ್ಲಿ ನಡೆಯಿತು.. ಇದರಲ್ಲಿ ರಾಜಸ್ಥಾನ ತಂಡ ಚಾಂಪಿಯನ್ ಆಯಿತು. ಅದರಂತೆ ಭಾರತದಲ್ಲಿ ಪ್ರತಿ ವರ್ಷ ಐಪಿಎಲ್ ಕ್ರಿಕೆಟ್ ಹಬ್ಬವನ್ನು ಬಿಸಿಸಿಐ ಆಯೋಜಿಸುತ್ತದೆ.. ಇದು ಇಲ್ಲಿಯವರೆಗೆ 16 ಸೀಸನ್‌ಗಳನ್ನು ಪೂರ್ತಿಗೊಳಿಸಿದೆ.


COMMERCIAL BREAK
SCROLL TO CONTINUE READING

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಾತ್ರ ತಲಾ 5 ಬಾರಿ ಟ್ರೋಫಿ ಗೆದ್ದಿವೆ. ಈ ವರ್ಷದ 17 ನೇ ಸೀಸನ್ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ. ಆದರೆ, ದಿನಾಂಕವನ್ನು ಪ್ರಕಟವಾಗಿಲ್ಲ.. ಹೀಗಿರುವಾಗಲೇ ಐಪಿಎಲ್ ಸರಣಿಯಲ್ಲಿ ನಾಯಕರಿಗೆ ಸಂಭಾವನೆ ನೀಡಿರುವ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.. 


ಇದನ್ನೂ ಓದಿ-Lockie Ferguson: ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಇನ್ನಿಂಗ್ಸ್‌ ಆರಂಭಿಸಿದ RCB ಆಟಗಾರ!


ಇದರ ಪ್ರಕಾರ, ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರಿಗೆ ಗರಿಷ್ಠ 17 ಕೋಟಿ ರೂ.ಗಳವರೆಗೆ ಸಂಭಾವನೆ ನೀಡಲಾಗುತ್ತಿದ್ದು... ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಸಂಭಾವನೆ ಪಡೆಯುವುದು ಕೇವಲ 12 ಕೋಟಿ ರೂ. ಎನ್ನಲಾಗಿದೆ.. 


ಇದನ್ನೂ ಓದಿ-ಟೆಸ್ಟ್’ನಲ್ಲಿ ಚೊಚ್ಚಲ ಅವಕಾಶ ಪಡೆದ ಆಕಾಶ್ ದೀಪ್ ಯಾರು ಗೊತ್ತಾ? ಒಂದೇ ಪಂದ್ಯದಲ್ಲಿ 10 ವಿಕೆಟ್ ಪಡೆದಿದ್ದ ಈತನ ಹಿನ್ನೆಲೆ ಏನು?


ರಿಷಭ್ ಪಂತ್ (ದೆಹಲಿ ಕ್ಯಾಪಿಟಲ್ಸ್) - ರೂ.16 ಕೋಟಿ
ಶ್ರೇಯಸ್ ಅಯ್ಯರ್ (ಕೋಲ್ಕತ್ತಾ ನೈಟ್ ರೈಡರ್ಸ್) - ರೂ. 12.25 ಕೋಟಿ
ಸಂಜು ಸ್ಯಾಮ್ಸನ್ (ರಾಜಸ್ಥಾನ್ ರಾಯಲ್ಸ್) - ರೂ. 14 ಕೋಟಿ
ಹಾರ್ದಿಕ್ ಪಾಂಡ್ಯ (ಮುಂಬೈ ಇಂಡಿಯನ್ಸ್) - ರೂ. 15 ಕೋಟಿ
ಏಡನ್ ಮಾರ್ಕ್ರಂ (ಸನ್ರೈಸ್ ಹೈದರಾಬಾದ್) ) – Rs 2.6 ಕೋಟಿ
ಶಿಖರ್ ಧವನ್ (ಪಂಜಾಬ್ ಕಿಂಗ್ಸ್) – Rs 8.25 ಕೋಟಿ
ಶುಬ್ಮನ್ ಗಿಲ್ (ಗುಜರಾತ್ ಟೈಟಾನ್ಸ್) – Rs 8 ಕೋಟಿ
ಬಾಬ್ ಡುಪ್ಲೆಸಿಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – Rs 7 ಕೋಟಿ


ಕಳೆದ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಆಟಗಾರರನ್ನು ರೇಟ್ ನೀಡುವ ಮೂಲಕ ವರ್ಗಾಯಿಸಲಾಗಿತ್ತು. ಅದರಂತೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತು. ಆ ವೇಳೆ ಹಾರ್ದಿಕ್ ಪಾಂಡ್ಯ ತಮ್ಮನ್ನು ನಾಯಕನನ್ನಾಗಿ ಮಾಡಿದರೆ ಮಾತ್ರ ತಂಡ ಸೇರುತ್ತೇನೆ ಎಂದು ಷರತ್ತು ಹಾಕಿದ್ದರು ಎಂದು ವರದಿಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ