Lockie Ferguson: ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಇನ್ನಿಂಗ್ಸ್‌ ಆರಂಭಿಸಿದ RCB ಆಟಗಾರ!

Lockie Ferguson Marriage: ಐಪಿಎಲ್ 2024ಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಅದಕ್ಕೂ ಮುನ್ನ ನ್ಯೂಜಿಲೆಂಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಲಾಕಿ ಫರ್ಗುಸನ್ ತಮ್ಮ ಬಹುಕಾಲದ ಗೆಳತಿಯೊಂದಿಗೆ ವಿವಾಹವಾಗಿದ್ದಾರೆ.. ಆ ಪೋಟೋಗಳು ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ..

Written by - Savita M B | Last Updated : Feb 10, 2024, 12:39 PM IST
  • IPL 2024 ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗಬಹುದು.
  • ಪ್ರತಿ ವರ್ಷದಂತೆ ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಕಣಕ್ಕಿಳಿಯಲಿದೆ.
  • ಸದ್ಯಕ್ಕೆ RCB ತಂಡಕ್ಕೆ ಮತ್ತು ಅದರ ಅಭಿಮಾನಿಗಳಿಗೆ ಒಂದು ಒಳ್ಳೆಯ ಸುದ್ದಿ ಇದೆ.‌
Lockie Ferguson: ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಇನ್ನಿಂಗ್ಸ್‌ ಆರಂಭಿಸಿದ RCB ಆಟಗಾರ!  title=

RCB Player Lockie Ferguson: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಸೀಸನ್ ಅಂದರೆ IPL 2024 ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗಬಹುದು. ಪ್ರತಿ ವರ್ಷದಂತೆ ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಕಣಕ್ಕಿಳಿಯಲಿದೆ. ಮೊದಲ ಐಪಿಎಲ್ ಪ್ರಶಸ್ತಿ ಗೆಲ್ಲುವ RCB ಕನಸು ನನಸಾಗುತ್ತದೋ ಇಲ್ಲವೋ ಎಂಬುದು ಈ ಸೀಸನ್ ಮುಕ್ತಾಯದ ವೇಳೆಗೆ ತಿಳಿಯಲಿದೆ, ಆದರೆ ಸದ್ಯಕ್ಕೆ RCB ತಂಡಕ್ಕೆ ಮತ್ತು ಅದರ ಅಭಿಮಾನಿಗಳಿಗೆ ಒಂದು ಒಳ್ಳೆಯ ಸುದ್ದಿ ಇದೆ.‌ 

ಐಪಿಎಲ್ 17ನೇ ಸೀಸನ್‌ಗೂ ಮುನ್ನ ಆರ್‌ಸಿಬಿ ತಂಡದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.. ಏಕೆಂದರೆ ತಂಡದ ವೇಗದ ಬೌಲರ್ ಲಾಕ್ ಫರ್ಗುಸನ್ ತಮ್ಮ ಗೆಳತಿ emma komockiಯವರನ್ನು ಮದುವೆಯಾಗಿದ್ದಾರೆ... ಫರ್ಗುಸನ್ ಅವರ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯಿಸಿ ವಿವಾಹಿತ ದಂಪತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ-18 ಬೌಂಡರಿ, 3 ಸಿಕ್ಸರ್, ಒಂದೇ ಇನ್ನಿಂಗ್ಸ್’ನಲ್ಲಿ 159 ರನ್… 24ರ ಹರೆಯದ ಭಾರತದ ಕ್ರಿಕೆಟಿಗನಿಂದ ಅಮೋಘ ಶತಕದಾಟ!

Emma komocki ಯಾರು?
ಎಮ್ಮಾ ಕೊಮೊಕಿಯವರು ಫಿಸಿಯೋಥೆರಪಿಸ್ಟ್. ಅವರು 2013 ರಲ್ಲಿ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಎಮ್ಮಾ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿರುವುದಿಲ್ಲ...

ಇನ್ನುಚಐಪಿಎಲ್ 2024 ರ ಮಿನಿ ಹರಾಜಿನಲ್ಲಿ ಲಾಕಿ ಫರ್ಗುಸನ್ RCB 2 ಕೋಟಿಗೆ ಸಹಿ ಹಾಕಿದರು. ಶೀಘ್ರದಲ್ಲೇ ಅವರು ಕೆಂಪು ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಫರ್ಗುಸನ್ ನ್ಯೂಜಿಲೆಂಡ್ ಪರ 1 ಟೆಸ್ಟ್, 65 ODI ಮತ್ತು 36 T20 ಪಂದ್ಯಗಳನ್ನು ಮತ್ತು ಐಪಿಎಲ್‌ನಲ್ಲಿ 38 ಪಂದ್ಯಗಳನ್ನೂ ಆಡಿದ್ದಾರೆ.

ಇದನ್ನೂ ಓದಿ-Irfan Pathan wife: ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗ್ ಯಾರು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News