Rajasthan Royals vs Gujarat Titans: ಐಪಿಎಲ್ 2023 ರ 48 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಬ್ಯಾಟಿಂಗ್ ಅಥವಾ ಬೌಲಿಂಗ್‌ ನಲ್ಲಿ ಶಕ್ತಿ ಪ್ರದರ್ಶನ ತೋರದೆ ಸಂಪೂರ್ಣ ವಿಫಲವಾಯಿತು. ಈ ಪಂದ್ಯದ ನಂತರ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ದೊಡ್ಡ ಹೇಳಿಕೆ ನೀಡಿದ್ದು, ತಂಡ ಹೀನಾಯ ಸೋಲಿನ ಹಿಂದಿನ ದೊಡ್ಡ ಕಾರಣವನ್ನು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಡಿಕೆಶಿ ಹೆಲಿಕಾಪ್ಟರ್ ಆಗಮಿಸುತಿದ್ದಂತೆ ಹೆಲಿಕಾಪ್ಟರ್ ಪಕ್ಕದಲ್ಲೇ ಹುಲ್ಲಿಗೆ ಹೊತ್ತಿದ ಬೆಂಕಿ..!


ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 9 ವಿಕೆಟ್‌ ಗಳಿಂದ ಸೋಲು ಅನುಭವಿಸಬೇಕಾಯಿತು. ಈ ಸೋಲಿನ ಜೊತೆಗೆ, ಪಂದ್ಯದ ನಂತರ ಸಂಜು ಸ್ಯಾಮ್ಸನ್ ಬ್ಯಾಟ್ಸ್‌ಮನ್‌ ಗಳ ಮೇಲೆ ಕೋಪದಿಂದ ಗುಡುಗಿದರು. “ಇದು ನಮಗೆ ತುಂಬಾ ಕಠಿಣ ದಿನವಾಗಿತ್ತಯ. ಪ್ರಾರಂಭಿಸಲು ನಿಜವಾಗಿಯೂ ಉತ್ತಮ ಪವರ್‌ಪ್ಲೇ ಇರಲಿಲ್ಲ ಮತ್ತು ಸ್ಪಿನ್ನರ್‌ ಗಳ ವಿರುದ್ಧ ಹೋರಾಡಿದೆವು. ಅವರ (ಗುಜರಾತ್) ಬೌಲರ್‌ ಗಳು ಉತ್ತಮ ಲೈನ್ ಆಂಡ್ ಲೆಂತ್ ಬೌಲಿಂಗ್ ಮಾಡುತ್ತಿದ್ದರು. ಮಧ್ಯಮ ಓವರ್‌ ಗಳಲ್ಲಿ ಕೆಲವು ಪ್ರಮುಖ ವಿಕೆಟ್‌ ಗಳನ್ನು ಕಳೆದುಕೊಂಡೆವು. ಆ ಸಂದರ್ಭದಲ್ಲಿ ಹೆಚ್ಚೇನು ಮಾಡಲು ಸಾಧ್ಯವಾಗಲಿಲ್ಲ. ಆಗ ನಾವು ನಿಜವಾಗಿಯೂ ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆಯೇ ಎಂದು ಪ್ರಶ್ನೆ ಮೂಡಿತು. ಆದರೆ ಪ್ರತಿಯೊಂದಕ್ಕೂ ಸಜ್ಜಾಗಬೇಕು, ಕೆಲವು ಪ್ರಮುಖ ಪಂದ್ಯಗಳು ಬರಲಿವೆ. ಮುಂದಿನ ಕೆಲವು ವಾರಗಳಲ್ಲಿ ನಾವು ಪಂದ್ಯಗಳನ್ನು ಗೆಲ್ಲಲು ಸಾಕಷ್ಟು ಪ್ರಯತ್ನ ಪಡುತ್ತೇವೆ” ಎಂದರು,


ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಕೇವಲ 118 ರನ್ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ಟೈಟಾನ್ಸ್ ಪರ ರಶೀದ್ ಖಾನ್ ನಾಲ್ಕು ಓವರ್ ಗಳಲ್ಲಿ 14 ರನ್ ನೀಡಿ ಮೂರು ವಿಕೆಟ್ ಪಡೆದರು. ಅದೇ ಸಮಯದಲ್ಲಿ, ನೂರ್ ಅಹ್ಮದ್ ಮೂರು ಓವರ್‌ ಗಳಲ್ಲಿ 25 ರನ್ ನೀಡುವ ಮೂಲಕ ಎರಡು ವಿಕೆಟ್ ಕಬಳಿಸಿದರು. ಇನ್ನುಳಿದಂತೆ ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಜೋಶ್ ಲಿಟಲ್ ತಲಾ ಒಂದು ವಿಕೆಟ್ ಪಡೆದರು.


ಇದನ್ನೂ ಓದಿ: ನಿಮ್ಮ ಮಗುವಿನ ಕಣ್ಣಿಗೆ ಕಾಜಲ್ ಹಚ್ಚುವ ಮುನ್ನ, ಅದರಿಂದಾಗುವ ಹಾನಿಯ ಬಗ್ಗೆ ತಿಳಿಯಿರಿ..!


ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ವಿಫಲ:


17.5 ಓವರ್‌ ಗಳಲ್ಲಿ 118 ರನ್‌ ಗಳಿಗೆ ರಾಜಸ್ಥಾನದ ಇನಿಂಗ್ಸ್ ನಿಲ್ಲಿಸಿದ ಗುಜರಾತ್ ಟೈಟಾನ್ಸ್, 13.5 ಓವರ್‌ ಗಳಲ್ಲಿ ಒಂದು ವಿಕೆಟ್ ನಷ್ಟದಲ್ಲಿ ಆ ಗುರಿಯನ್ನು ಸಾಧಿಸಿತು. ಗುರಿ ಬೆನ್ನಟ್ಟಿದ ವೃದ್ಧಿಮಾನ್ ಸಹಾ 34 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಸಿಕ್ಸರ್‌ ಗಳ ನೆರವಿನಿಂದ ಅಜೇಯ 39 ರನ್ ಬಾರಿಸಿದರು. ತಂಡದ ಪರ ಆರಂಭಿಕ ಆಟಗಾರ ಶುಭಮನ್ ಗಿಲ್ 35 ಎಸೆತಗಳಲ್ಲಿ 36 ರನ್ ಗಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.