IPL 2023: ಇಂದು ನಡೆಯುವುದಿಲ್ಲವೇ RCB vs DC ಪಂದ್ಯ? ಹೊರಬಿತ್ತು ಬಿಗ್ ಅಪ್ಡೇಟ್

DC vs RCB IPL 2023 Match: ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಮತ್ತೊಮ್ಮೆ ಮೋಡ ಕವಿದ ವಾತಾವರಣ ಇದೆ. ಲಘು ಮಳೆಯಾಗುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಮಳೆ ಬೀಳದಿದ್ದರೆ ಪಂದ್ಯ ನಡೆಯುತ್ತದೆ, ಇಷ್ಟೇ ಅಲ್ಲದೆ, ಗಂಟೆಗೆ 16 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ತಾಪಮಾನ 26 ರಿಂದ 41 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ರಾತ್ರಿ 7.30ರಿಂದ ನಡೆಯಲಿದೆ.

Written by - Bhavishya Shetty | Last Updated : May 6, 2023, 12:02 PM IST
    • ಆರ್‌ ಸಿ ಬಿ ಎದುರು ಡೆಲ್ಲಿ ಕ್ಯಾಪಿಟಲ್ಸ್ 23 ರನ್‌ ಗಳಿಂದ ಸೋಲನುಭವಿಸಿತ್ತು.
    • ಇಂದು ನಡೆಯಲಿರುವ ಪಂದ್ಯಕ್ಕೂ ಮುನ್ನ ಬಿಗ್ ಅಪ್ಡೇಟ್ ಹೊರಬಿದ್ದಿದೆ.
    • ದೆಹಲಿಯಲ್ಲಿ ಮತ್ತೊಮ್ಮೆ ಮೋಡ ಕವಿದ ವಾತಾವರಣ ಇದೆ. ಲಘು ಮಳೆಯಾಗುವ ಸಾಧ್ಯತೆ ಕೂಡ ಇದೆ
IPL 2023: ಇಂದು ನಡೆಯುವುದಿಲ್ಲವೇ RCB vs DC ಪಂದ್ಯ? ಹೊರಬಿತ್ತು ಬಿಗ್ ಅಪ್ಡೇಟ್ title=
RCB vs DC

DC vs RCB IPL 2023 Match: IPL 2023ರ 50 ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇಂದು ಸಂಜೆ 7.30ಕ್ಕೆ ನಡೆಯಲಿದೆ. ಈ ಸೀಸನ್ ನ ಕೊನೆಯ ಪಂದ್ಯದಲ್ಲಿ ಆರ್‌ ಸಿ ಬಿ ಎದುರು ಡೆಲ್ಲಿ ಕ್ಯಾಪಿಟಲ್ಸ್ 23 ರನ್‌ ಗಳಿಂದ ಸೋಲನುಭವಿಸಿತ್ತು. ಆದರೆ ಇಂದು ನಡೆಯಲಿರುವ ಪಂದ್ಯಕ್ಕೂ ಮುನ್ನ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ICC ODI ವಿಶ್ವಕಪ್ ಆಡಲು ಭಾರತಕ್ಕೆ ಬರುತ್ತಿದೆಯೇ ಪಾಕಿಸ್ತಾನ? ಅಂತಿಮವಾಗಿ ನಿರ್ಧಾರ ತಿಳಿಸಿದ PAK ಸರ್ಕಾರ!

DC vs RCB ನಡುವಿನ ಪಂದ್ಯ ಇಂದು ನಡೆಯುವುದಿಲ್ಲವೇ?

ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಮತ್ತೊಮ್ಮೆ ಮೋಡ ಕವಿದ ವಾತಾವರಣ ಇದೆ. ಲಘು ಮಳೆಯಾಗುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಮಳೆ ಬೀಳದಿದ್ದರೆ ಪಂದ್ಯ ನಡೆಯುತ್ತದೆ, ಇಷ್ಟೇ ಅಲ್ಲದೆ, ಗಂಟೆಗೆ 16 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ತಾಪಮಾನ 26 ರಿಂದ 41 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ರಾತ್ರಿ 7.30ರಿಂದ ನಡೆಯಲಿದೆ.

ಕಳೆದ ಪಂದ್ಯದಲ್ಲಿ ಅದ್ಭುತ ಗೆಲುವು ದಾಖಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿದೆ. ಗೆಲುವು ಸಾಧಿಸಬೇಕೆಂದರೆ ಉಭಯ ತಂಡದ ಬ್ಯಾಟ್ಸ್‌ ಮನ್‌ ಗಳು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಆರ್‌ ಸಿ ಬಿಯ ಸ್ಥಾನವು ದೆಹಲಿಗಿಂತ ಉತ್ತಮವಾಗಿದೆ. ಆದರೆ ಫಾಫ್ ಡು ಪ್ಲೆಸಿಸ್ ತಂಡದಲ್ಲಿ ಕೆಲವೊಂದಿಷ್ಟು ಆಟಗಾರರನ್ನು ಬಿಟ್ಟರೆ ಬೇರೆ ಯಾರೂ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡುತ್ತಿಲ್ಲ. ಮತ್ತೊಂದೆಡೆ, ಅಗ್ರ ಶ್ರೇಯಾಂಕದ ಗುಜರಾತ್ ಟೈಟಾನ್ಸ್ ತಂಡವನ್ನು ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ಸೋಲಿಸಿದ ಡೆಲ್ಲಿ ಅದೇ ಪ್ರದರ್ಶನವನ್ನು ಪುನರಾವರ್ತಿಸಿದರೆ ಉತ್ತಮ ಎನ್ನಬಹುದು.

ಐಪಿಎಲ್ 2023ರ ಉಭಯ ತಂಡಗಳ ಆಟಗಾರರ ಪಟ್ಟಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಆಕಾಶ್ ದೀಪ್, ಫಿನ್ ಅಲೆನ್, ಅನುಜ್ ರಾವತ್, ಅವಿನಾಶ್ ಸಿಂಗ್, ಮನೋಜ್ ಭಾಂಡ್ಗೆ, ಮೈಕೆಲ್ ಬ್ರೇಸ್‌ ವೆಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಸಿದ್ಧಾರ್ಥ್ ಕೌಲ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ ವೆಲ್, ಮೊಹಮ್ಮದ್ ಸಿರಾಜ್, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಸುಯಶ್ ಪ್ರಭುದೇಸಾಯಿ, ರಾಜನ್ ಕುಮಾರ್, ಶಹಬಾಜ್ ಅಹ್ಮದ್, ಕರ್ಣ್ ಶರ್ಮಾ, ಹಿಮಾಂಶು ಶರ್ಮಾ, ಸೋನು ಯಾದವ್, ವಿಜಯ್‌ಕುಮಾರ್ ವೈಶಾಕ್ ಮತ್ತು ಡೇವಿಡ್ ವಿಲ್ಲಿ.

ಇದನ್ನೂ ಓದಿ: WTC Final: ಮತ್ತೆ ಹೆಚ್ಚಾಯ್ತು ಟೀಂ ಇಂಡಿಯಾದ ಟೆನ್ಷನ್: WTC ಫೈನಲ್’ನಿಂದ ಈ 4 ಆಟಗಾರರು ಔಟ್!

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಸರ್ಫರಾಜ್ ಖಾನ್, ಅಮನ್ ಹಕೀಮ್ ಖಾನ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ರೋವ್‌ ಮನ್ ಪೊವೆಲ್, ರಿಲೆ ರೊಸೊವ್, ಅನ್ರಿಚ್ ನಾರ್ಕಿಯಾ, ಮುಸ್ತಾಫಿಜುರ್ ರೆಹಮಾನ್, ಚೇತನ್ ಸರ್ಕಾರಿಯಾ, ಮುಖೇಶ್ ಕುಮಾರ್, ಫಿಲ್ ಸಾಲ್ಟ್, ಲುಂಗಿ ಎಂಗಿಡಿ, ಪ್ರವೀಣ್ ದುಬೆ, ಲಲಿತ್ ಯಾದವ್, ರಿಪ್ಪಲ್ ಪಟೇಲ್, ವಿಕ್ಕಿ ಓಸ್ತ್ವಾಲ್, ಇಶಾಂತ್ ಶರ್ಮಾ, ಮನೀಶ್ ಪಾಂಡೆ, ಕಮಲೇಶ್ ನಾಗೆರ್ಕೋಟಿ ಮತ್ತು ಯಶ್ ಧುಲ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News