IPL 2023 ಪ್ರಾರಂಭಕ್ಕೂ ಮುನ್ನ ಚೆನ್ನೈ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಧೋನಿ ಸಹ-ಆಟಗಾರ ಆಡೋದು ಡೌಟ್
Chennai Super Kings 2023: ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಈ ಋತುವಿನ ಮೊದಲ ಪಂದ್ಯದಲ್ಲಿ ಮಾರ್ಚ್ 31 ರಂದು ಮೈದಾನಕ್ಕಿಳಿಯಲಿದೆ. ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಗುಜರಾತ್ ತಂಡದ ನಾಯಕತ್ವವನ್ನು ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಿರ್ವಹಿಸುತ್ತಿದ್ದಾರೆ.
Chennai Super Kings 2023: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್’ನ 16ನೇ ಸೀಸನ್ ಅಂದರೆ ಐಪಿಎಲ್ ಮಾರ್ಚ್ 31ರಿಂದ ಪ್ರಾರಂಭವಾಗಲಿದೆ. 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಸೀಸನ್ ಆರಂಭಕ್ಕೂ ಮುನ್ನ ಕೆಟ್ಟ ಸುದ್ದಿಯೊಂದು ಬಂದಿದೆ. ಇದನ್ನು ತಿಳಿದ ಕ್ರಿಕೆಟ್ ಅಭಿಮಾನಿಗಳು ಕೂಡ ನಿರಾಸೆಗೊಂಡಿದ್ದಾರೆ.
ಇದನ್ನೂ ಓದಿ: CSK: ಮತ್ತೆ ಮೋಡಿ ಮಾಡುತ್ತಾ ಧೋನಿ ಮ್ಯಾಜಿಕ್! ಚೆನ್ನೈಗೆ ಇದು ಸಹಕರಿಸಿದ್ರೆ, ಅದು ಮುಳುವಾಗುತ್ತೆ! ಏನದು ಗೊತ್ತಾ?
ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಈ ಋತುವಿನ ಮೊದಲ ಪಂದ್ಯದಲ್ಲಿ ಮಾರ್ಚ್ 31 ರಂದು ಮೈದಾನಕ್ಕಿಳಿಯಲಿದೆ. ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಗುಜರಾತ್ ತಂಡದ ನಾಯಕತ್ವವನ್ನು ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಿರ್ವಹಿಸುತ್ತಿದ್ದಾರೆ. ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಕಳೆದ ವರ್ಷ ತನ್ನ ಮೊದಲ ಋತುವಿನಲ್ಲಿ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಈ ಮಧ್ಯೆ ಮಂಗಳವಾರ ವಿಶ್ವ ಚಾಂಪಿಯನ್ ಕ್ರಿಕೆಟಿಗ ಇಂಗ್ಲೆಂಡ್‌ನ ಸೂಪರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಕುರಿತು ಸುದ್ದಿ ಬಂದಿದೆ. ಐಪಿಎಲ್-2023 ರ ಆರಂಭಿಕ ಪಂದ್ಯಗಳಲ್ಲಿ ಸ್ಟೋಕ್ಸ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಆಡುವ ಸಾಧ್ಯತೆಯಿದೆ. ಹೊರತಾಗಿ ಬೌಲಿಂಗ್ ಮಾಡುವುದು ಕೊಂಚ ಕಷ್ಟ. ಕ್ರಿಕ್‌ಇನ್‌ಫೋ ವರದಿಯಲ್ಲಿ ಹೀಗೆ ಹೇಳಲಾಗಿದೆ.
ಸ್ಟೋಕ್ಸ್ ಅವರ ಎಡ ಮೊಣಕಾಲಿಗೆ ಗಾಯವಾಗಿದ್ದು, ಅದನ್ನು ನಿರ್ವಹಿಸಲು ಕಾರ್ಟಿಸೋನ್ ಅನ್ನು ಚುಚ್ಚುಮದ್ದು ನೀಡಲಾಗಿದೆ. ಈಗ ಈ ಗಾಯ ಗಂಭೀರವಾಗಿದೆ. ಇದನ್ನು ತಡೆಯಲು ಆರಂಭಿಕ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದು ಕಷ್ಟ ಎಂದು ಹೇಳಲಾಗಿದೆ. ಇದರಿಂದ ಸಿ ಎಸ್ ಕೆ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಸ್ಟೋಕ್ಸ್’ನ ಆಲ್‌ರೌಂಡ್ ಸಾಮರ್ಥ್ಯದ ಮೇಲೆ, ಅವರನ್ನು ತಂಡದ ಎಕ್ಸ್-ಫ್ಯಾಕ್ಟರ್ ಎಂದು ಪರಿಗಣಿಸಲಾಗುತ್ತಿದೆ. ಆದರೆ ಅವರು ಕೇವಲ ಬ್ಯಾಟ್ಸ್‌ಮನ್ ಆಗಿ ಆಡಿದರೆ, ತಂಡದ ಅಭಿಯಾನಕ್ಕೆ ದೊಡ್ಡ ಹೊಡೆತ ಬೀಳಲಿದೆ.
ಸ್ಟೋಕ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಹರಾಜಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿತ್ತು. ಆಲ್ ರೌಂಡರ್ ಆಗಿರುವ ಅವರು ಆರಂಭಿಕ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂದು ವರದಿಯಾಗಿದೆ. ಇದು ಸಿಎಸ್ ಕೆ ತಂಡದ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ. ಹರಾಜಿನಲ್ಲಿ ಸ್ಟೋಕ್ಸ್ ಅವರಿಗಾಗಿ 16.25 ಕೋಟಿ ಖರ್ಚು ಮಾಡಲಾಗಿದೆ. ಇದು ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಅತ್ಯಂತ ದುಬಾರಿ ಸಹಿಯಾಗಿದೆ.
ಕಳೆದ ವಾರವಷ್ಟೇ ಭಾರತಕ್ಕೆ ಸ್ಟೋಕ್ಸ್ ಆಗಮಿಸಿದ್ದರು. ಸೀಸನ್’ನ ಮೊದಲು ತಮ್ಮ ಹೊಸ ತಂಡದ ಸಹ ಆಟಗಾರರೊಂದಿಗೆ ಅಭ್ಯಾಸ ಮಾಡುತ್ತಿದ್ದರು.
ಇದನ್ನೂ ಓದಿ:IPL 2023: ಹರಾಜಿನಲ್ಲಿ ಕಾಣಿಸಿಕೊಳ್ಳದ ಈ ಆಟಗಾರ ಐಪಿಎಲ್’ನಲ್ಲಿ ಆಡೋದು ಫಿಕ್ಸ್! ಈತ ವಿರಾಟ್ ಕೊಹ್ಲಿಯ ಶತ್ರು…
ಎಡಮೊಣಕಾಲಿಗೆ ಆಗಾಗ ಗಾಯಗಳಿಂದ ತೊಂದರೆಗೊಳಗಾದ ಸ್ಟೋಕ್ಸ್ ನ್ಯೂಜಿಲೆಂಡ್ ಪ್ರವಾಸದಲ್ಲಿ 2 ಟೆಸ್ಟ್‌ಗಳಲ್ಲಿ ಕೇವಲ 9 ಓವರ್‌ಗಳನ್ನು ಮಾತ್ರ ಬೌಲ್ ಮಾಡಲು ಸಾಧ್ಯವಾಯಿತು. ಜೂನ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಕೂಡ ಆಶಸ್ ಸರಣಿಯನ್ನು ಆಡಬೇಕಿದೆ. ಐಪಿಎಲ್’ನ ಆರಂಭಿಕ ಪಂದ್ಯಗಳಲ್ಲಿ ಸ್ಟೋಕ್ಸ್ ಬೌಲಿಂಗ್ ಮಾಡುವುದಿಲ್ಲ ಎಂದು ಸಿಎಸ್’ಕೆ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಖಚಿತಪಡಿಸಿದ್ದಾರೆ. ಅವರು ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹಸ್ಸಿ ಹೇಳಿದ್ದಾರೆ. ಬೌಲಿಂಗ್ ವಿಚಾರ ನೋಡಿಕೊಳ್ಳಬೇಕಷ್ಟ. ಚೆನ್ನೈ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಯ ಫಿಸಿಯೋಗಳು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ನಂತರದ ಪಂದ್ಯಗಳಲ್ಲಿ ಅವರು ಬೌಲಿಂಗ್ ಮಾಡುವ ಸಾಧ್ಯತೆ ಇದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.