CSK: ಮತ್ತೆ ಮೋಡಿ ಮಾಡುತ್ತಾ ಧೋನಿ ಮ್ಯಾಜಿಕ್! ಚೆನ್ನೈಗೆ ಇದು ಸಹಕರಿಸಿದ್ರೆ, ಅದು ಮುಳುವಾಗುತ್ತೆ! ಏನದು ಗೊತ್ತಾ?

CSK strength and weakness: ಧೋನಿ ಮೊದಲ ಸೀಸನ್‌’ನಿಂದ ಈ ತಂಡದ ನಾಯಕತ್ವ ವಹಿಸಿದ್ದಾರೆ. 16 ನೇ ಋತುವಿನಲ್ಲಿ, ಅವರು ಬಹುಶಃ ಕೊನೆಯ ಬಾರಿಗೆ ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ. ಧೋನಿ ನಾಯಕತ್ವದಲ್ಲಿ ಸಿಎಸ್‌’ಕೆ ತಂಡ 11 ಬಾರಿ ಪ್ಲೇಆಫ್‌ಗೆ ತಲುಪಿದ್ದರೆ, 4 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Written by - Bhavishya Shetty | Last Updated : Mar 28, 2023, 05:08 PM IST
    • 16 ನೇ ಋತುವಿನಲ್ಲಿ ಧೋನಿ ಬಹುಶಃ ಕೊನೆಯ ಬಾರಿಗೆ ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ.
    • ಧೋನಿ ನಾಯಕತ್ವದಲ್ಲಿ ಸಿಎಸ್‌’ಕೆ ತಂಡ 11 ಬಾರಿ ಪ್ಲೇಆಫ್‌ಗೆ ತಲುಪಿದ್ದರೆ, 4 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
    • ಎದುರಾಳಿ ಪಾಳಯವನ್ನು ಭಯಭೀತಗೊಳಿಸಲು ಧೋನಿ ಅವರ ಉಪಸ್ಥಿತಿ ಸಾಕು.
CSK: ಮತ್ತೆ ಮೋಡಿ ಮಾಡುತ್ತಾ ಧೋನಿ ಮ್ಯಾಜಿಕ್! ಚೆನ್ನೈಗೆ ಇದು ಸಹಕರಿಸಿದ್ರೆ, ಅದು ಮುಳುವಾಗುತ್ತೆ! ಏನದು ಗೊತ್ತಾ?  title=
CSK strength and weakness

Indian Premier League 2023: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿರುವ ವಿಶ್ವದ ಅತ್ಯಂತ ಪ್ರಸಿದ್ಧ ಟಿ20 ಲೀಗ್ ಐಪಿಎಲ್ 16 ನೇ ಋತುವಿನ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಉಳಿದಿವೆ. ಐಪಿಎಲ್‌’ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಸಿಎಸ್‌’ಕೆ ತಂಡದ ಬಗ್ಗೆ ಮಾತನಾಡುವುದಾದರೆ, ಈ ಫ್ರಾಂಚೈಸ್‌’ನೊಂದಿಗೆ ಅಭಿಮಾನಿಗಳ ಸಂಬಂಧವು ಸ್ವಲ್ಪ ಭಾವನಾತ್ಮಕವಾಗಿ ತೋರುತ್ತದೆ. ಇದಕ್ಕೆ ಮುಖ್ಯ ಕಾರಣ ಆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ.

ಧೋನಿ ಮೊದಲ ಸೀಸನ್‌’ನಿಂದ ಈ ತಂಡದ ನಾಯಕತ್ವ ವಹಿಸಿದ್ದಾರೆ. 16 ನೇ ಋತುವಿನಲ್ಲಿ, ಅವರು ಬಹುಶಃ ಕೊನೆಯ ಬಾರಿಗೆ ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ. ಧೋನಿ ನಾಯಕತ್ವದಲ್ಲಿ ಸಿಎಸ್‌’ಕೆ ತಂಡ 11 ಬಾರಿ ಪ್ಲೇಆಫ್‌ಗೆ ತಲುಪಿದ್ದರೆ, 4 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಈ ತಂಡವು 9 ಬಾರಿ ಐಪಿಎಲ್‌’ನ ಫೈನಲ್‌ನಲ್ಲಿ ಆಡಿದೆ. ಎದುರಾಳಿ ಪಾಳಯವನ್ನು ಭಯಭೀತಗೊಳಿಸಲು ಧೋನಿ ಅವರ ಉಪಸ್ಥಿತಿ ಸಾಕು.

ಇದನ್ನೂ ಓದಿ: Hopshoots: ಕೆಜಿಗೆ 1 ಲಕ್ಷ ರೂ… ಇದು ವಿಶ್ವದ ಅತ್ಯಂತ ದುಬಾರಿ ತರಕಾರಿ: ಬರೋಬ್ಬರಿ 20 ವರ್ಷ ಬದುಕುತ್ತೆ ಈ ವೆಜಿಟೇಬಲ್!!

ವೃತ್ತಿ ಜೀವನಕ್ಕೆ ವಿದಾಯ ಹೇಳಲು ಬಯಸಿದ್ದಾರಂತೆ ಧೋನಿ!!

ವೃತ್ತಿಪರ ಕ್ರಿಕೆಟಿಗನಾಗಿ ಇದು ಅವರ ಕೊನೆಯ ಸೀಸನ್ ಆಗಲಿದೆ ಎಂದು ಅನೇಕ ಮೂಲಗಳು ಹೇಳುತ್ತಿವೆ. ಈ ಹಿನ್ನೆಲೆಯಲ್ಲಿಯೆ ಈ ಸೀಸನ್’ನ್ನು ಸ್ಮರಣೀಯವಾಗಿಸಲು ಮುಂದಾಗುತ್ತಿದ್ದಾರೆ. ಐಪಿಎಲ್ ಈಗ 'ಹೋಮ್ ಆಂಡ್ ಅವೇ' (Home and Away) ಸ್ವರೂಪಕ್ಕೆ ಮರಳಿದೆ. ಚೆನ್ನೈ ತನ್ನ ಭದ್ರಕೋಟೆಯಾದ ಚೆಪಾಕ್‌’ನಲ್ಲಿ ಏಳು ಪಂದ್ಯಗಳನ್ನು ಆಡಬೇಕಾಗಿದೆ. ಕಳೆದ ಋತುವಿನಲ್ಲಿ ಪ್ಲೇಆಫ್ ತಲುಪಲು ವಿಫಲವಾದ ಚೆನ್ನೈ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಲಾಗಿತ್ತು, ಆದರೆ ನಂತರ ಧೋನಿಯನ್ನು ಮತ್ತೆ ನಾಯಕನನ್ನಾಗಿ ಮಾಡಲಾಯಿತು. ಐಪಿಎಲ್‌’ನಲ್ಲಿ ಚೆನ್ನೈ ತಂಡವನ್ನು ಲಘುವಾಗಿ ಪರಿಗಣಿಸುವುದು ಮೂರ್ಖತನ ಎಂಬುದು ಪ್ರತಿಯೊಂದು ಟೀಂ ಗೆ ತಿಳಿದಿದೆ.

ಇಂಗ್ಲೆಂಡ್‌ನ ಆಲ್‌’ರೌಂಡರ್ ಬೆನ್ ಸ್ಟೋಕ್ಸ್ ಇದೀಗ ಎಕ್ಸ್ ಫ್ಯಾಕ್ಟರ್ ಎಂದು ಸಾಬೀತುಪಡಿಸುವ ತಂಡದಲ್ಲಿದ್ದಾರೆ. ಬೆನ್ ಸ್ಟೋಕ್ಸ್ ಉಪಸ್ಥಿತಿಯು ಚೆನ್ನೈನ ಕ್ರಾಸ್-ಹಿಟ್ಟಿಂಗ್ ಅನ್ನು ಬಲಪಡಿಸುತ್ತದೆ. ಚೆಪಾಕ್‌’ನ ನಿಧಾನಗತಿಯ ಪಿಚ್‌’ನಲ್ಲಿ, ಅವರು ಒಂದು ಅಥವಾ ಎರಡು ಅದ್ಭುತ ಓವರ್‌’ಗಳನ್ನು ಬೌಲ್ ಮಾಡಬಹುದು. ಅದು ಪಂದ್ಯದ ಲಯವನನ್ನೇ ತಿರುಗಿಸುವ ಸಾಮಾರ್ಥ್ಯ ಹೊಂದಿದೆ. ರವೀಂದ್ರ ಜಡೇಜಾ ಮತ್ತು ಮೊಯಿನ್ ಅಲಿ ಚೆಪಾಕ್‌’ನಲ್ಲಿ ನಡೆದ ಏಳು ತವರಿನ ಪಂದ್ಯಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಆಡಲಿದ್ದಾರೆ. ಡೆವೊನ್ ಕಾನ್ವೆ ಮತ್ತು ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್‌’ನಲ್ಲಿ ಉಪಯುಕ್ತವಾಗಿದ್ದರೆ, ಅಂಬಟಿ ರಾಯುಡು, ಸ್ಟೋಕ್ಸ್, ಧೋನಿ ಮತ್ತು ಜಡೇಜಾ ಮಧ್ಯಮ ಕ್ರಮಾಂಕವನ್ನು ಬಲಪಡಿಸಬಹುದು.

ಇದು ಸಿಎಸ್’ಕೆ ದೌರ್ಬಲ್ಯ!

ಗಾಯದ ಸಮಸ್ಯೆಯಿಂದ ಮುಕೇಶ್ ಚೌಧರಿ ಟೂರ್ನಿಯಿಂದ ಹೊರಗುಳಿದಿರುವುದು ಸಿಎಸ್‌’ಕೆಗೆ ದೊಡ್ಡ ಹೊಡೆತವಾಗಿದೆ. ಬೆನ್ನು ಮತ್ತು ಮಂಡಿರಜ್ಜು ಗಾಯಗಳಿಂದ ಚೇತರಿಸಿಕೊಂಡ ನಂತರ ದೀಪಕ್ ಚಹಾರ್ ಬಹಳ ಸಮಯದ ನಂತರ ಪುನರಾಗಮನ ಮಾಡುತ್ತಿದ್ದಾರೆ. ಪಂದ್ಯದ ಪರಿಸ್ಥಿತಿಯಲ್ಲಿ ಅವರ ಫಿಟ್ನೆಸ್ ಪರೀಕ್ಷಿಸಲಾಗಲಿಲ್ಲ. ವಿಶ್ವಕಪ್ ತಂಡದಲ್ಲಿ ಸ್ಥಾನಕ್ಕಾಗಿ ಸ್ಪರ್ಧಿಯಾಗಿದ್ದು, ಐಪಿಎಲ್‌’ನಲ್ಲಿ ಅದ್ಭುತ ಪ್ರದರ್ಶನ ನೀಡಲು ಬಯಸುತ್ತಿದ್ದಾರೆ.

ವೇಗದ ಬೌಲಿಂಗ್‌ನಲ್ಲಿ ಯುವ ಸಿಮರ್‌ಜೀತ್ ಮತ್ತು ಲಸಿತ್ ಮಾಲಿಂಗ ಅವರಂತಹ ಆಕ್ಷನ್ ಹೊಂದಿರುವ ಎಂ ಪತಿರಾನಾಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶವಿದೆ. ಧೋನಿ ಪ್ರತಿಭೆಯನ್ನು ಪರೀಕ್ಷಿಸುವಲ್ಲಿ ಪರಿಣತಿ ಹೊಂದಿದ್ದು, 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ಹೇಗೆ ಚೆನ್ನಾಗಿ ಬಳಸಬೇಕೆಂದು ತಿಳಿದಿದ್ದಾರೆ. ಮತ್ತೊಂದೆಡೆ ಮಿಚೆಲ್ ಸ್ಯಾಂಟ್ನರ್ ಸಹ ಉಪಯುಕ್ತವಾಗುವಂತೆ ತೋರುತ್ತದೆ.

ಇದನ್ನೂ ಓದಿ: Hopshoots: ಕೆಜಿಗೆ 1 ಲಕ್ಷ ರೂ… ಇದು ವಿಶ್ವದ ಅತ್ಯಂತ ದುಬಾರಿ ತರಕಾರಿ: ಬರೋಬ್ಬರಿ 20 ವರ್ಷ ಬದುಕುತ್ತೆ ಈ ವೆಜಿಟೇಬಲ್!!

ಈ ಸವಾಲು ಸಿಎಸ್‌’ಕೆಗೆ ಅಪಾಯಕಾರಿ!

CSK ಮುಂದಿರುವ ದೊಡ್ಡ ಸವಾಲು ಎಂದರೆ ಆಟಗಾರರ ವಯಸ್ಸು. ರಾಯುಡು ಮತ್ತು ಅಜಿಂಕ್ಯ ರಹಾನೆ ಹೆಚ್ಚಿನ ಸ್ಕೋರಿಂಗ್ ಪಂದ್ಯಗಳಲ್ಲಿ ಒತ್ತಡಕ್ಕೆ ಒಳಗಾಗಬಹುದು. ಇದಲ್ಲದೇ ತಂಡದಲ್ಲಿ ಉತ್ತಮ ಭಾರತೀಯ ಸ್ಪಿನ್ನರ್‌’ಗಳೂ ಇಲ್ಲ. ಇತ್ತೀಚಿನ ದಿನಗಳಿಂದ ಟಿ20ಯಲ್ಲಿ ಜಡೇಜಾಗೆಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News