Brother duos in Team India: ಟೀಂ ಇಂಡಿಯಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ 5 ಪ್ರಸಿದ್ಧ ಸಹೋದರ ಜೋಡಿಗಳು

Brother duos in Team India: ಅಂತರರಾಷ್ಟ್ರೀಯ ಕ್ರಿಕೆಟ್’ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ ಟಾಪ್ 5 ಸಹೋದರರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

1 /5

ಮೊಹಿಂದರ್ ಅಮರನಾಥ್ ಅವರ ಹೆಸರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. 1983ರ ವಿಶ್ವಕಪ್  ಪಂದ್ಯದ ಸಮಯದಲ್ಲಿ ಸೆಮಿ-ಫೈನಲ್ ಮತ್ತು ಫೈನಲ್‌’ನಲ್ಲಿ ಅವರು ಅದ್ಭುತವಾಗಿ ಆಟವಾಡಿದ್ದರು. ಇನ್ನು ಇವರ ಸಹೋದರ ಸುರೀಂದರ್ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಅದ್ಭುತವಾದ ಆರಂಭವನ್ನು ನೀಡಿದವರು. 1976 ರಲ್ಲಿ ಆಕ್ಲೆಂಡ್‌’ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಸ್ಮರಣೀಯ 124 ರನ್ ಗಳಿಸಿದರು.

2 /5

ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಟೀಂ ಇಂಡಿಯಾದ ಪ್ರಸಿದ್ಧ ಆಟಗಾರರು. ಆಲ್ ರೌಂಡರ್ ಆಗಿ ಭಾರತದ ಪರ ಇಬ್ಬರೂ ಸಹ ಅದ್ಭುತವಾಗಿ ಆಟವಾಡುತ್ತಿದ್ದಾರೆ. ಆದರೆ ಹಾರ್ದಿಕ್ ಅವರ ಹಿರಿಯ ಸಹೋದರ ಕೃನಾಲ್ ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

3 /5

ಸುಭಾಷ್ ಗುಪ್ತೆ ಮತ್ತು ಬಾಲೂ ಗುಪ್ತೆ ಭಾರತ ಕಂಡ ಅತ್ಯುತ್ತಮ ಆಟಗಾರರು. ಸುಭಾಷ್ ಅವರು ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡಿದ ಅತ್ಯುತ್ತಮ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರು. ಬಾಲೂ ಕೂಡ ಲೆಗ್ ಬ್ರೇಕ್ ಬೌಲರ್ ಆಗಿದ್ದರು, ಆದರೆ ಅವರು ಯಶಸ್ವಿ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಹೊಂದಿರಲಿಲ್ಲ.

4 /5

ಪಠಾಣ್ ಸಹೋದರರು ಬಡತನದಿಂದ ಮೇಲೆದ್ದು ಇಡೀ ದೇಶವೇ ತನ್ನತ್ತ ನೋಡುವಂತೆ ಬೆಳೆದವರು. ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಎಂದರೆ ಟೀಂ ಇಂಡಿಯಾದ ಚಿರಪರಿಚಿತ ಹೆಸರು.

5 /5

ಮಾಧವ್ ಆಪ್ಟೆ ಮತ್ತು ಅರವಿಂದ್ ಭಾರತದ ಆಕ್ರಮಣಕಾರಿ ಬ್ಯಾಟರ್ಸ್. ಇವರು ಮುಂಬೈ ಮೂಲದವರು. ಅರವಿಂದ್ ಆಪ್ಟೆ ಅವರು ಅದ್ಭುತ ಆರಂಭಿಕ ಬ್ಯಾಟ್ಸ್’ಮನ್ ಕೂಡ ಹೌದು.