IPLನ ಒಂದು ಪಂದ್ಯದಲ್ಲಿ ಡ್ಯಾನ್ಸ್ ಮಾಡಲು Cheer Girls ಪಡೆಯುವ ವೇತನ ಎಷ್ಟು ಗೊತ್ತಾ? ಶಾಕ್ ಆಗೋದು ಖಂಡಿತ
Highest Paid Cheer Girls in IPL: ಹೆಚ್ಚಿನ ಐಪಿಎಲ್ ಪಂದ್ಯಗಳಲ್ಲಿ ಭಾಗವಹಿಸಲು ವಿದೇಶದಿಂದ ಚಿಯರ್ ಲೀಡರ್‌ಗಳು ಬರುತ್ತಾರೆ. ಆದರೆ, ಕೆಲವು ಭಾರತೀಯರೂ ಇದರಲ್ಲಿ ಭಾಗಿಯಾಗಿದ್ದಾರೆ. ನಾವು ಅವರ ವೇತನದ ಬಗ್ಗೆ ಮಾತನಾಡುತ್ತಿದ್ದೇವೆ. ಅವರು ಒಂದು ಪಂದ್ಯಕ್ಕೆ ಸುಮಾರು 14000-17000 ರೂಪಾಯಿ ಪಡೆಯುತ್ತಾರಂತೆ.
Highest Paid Cheer Girls in IPL: ಐಪಿಎಲ್ 16ನೇ ಸೀಸನ್ ಆರಂಭವಾಗಿದೆ. ಮೊದಲ 10 ಪಂದ್ಯಗಳಲ್ಲಿಯೇ ಅಭಿಮಾನಿಗಳು ಸಾಕಷ್ಟು ಸಂಭ್ರಮವನ್ನು ಕಂಡಿದ್ದಾರೆ. ಮೈದಾನದಲ್ಲಿ ಬೌಂಡರಿ ಮತ್ತು ಸಿಕ್ಸರ್ ಗಳ ನಡುವೆ ಚೀರ್ ಲೀಡರ್’ಗಳು ಬಿರುಸಿನ ಮನರಂಜನೆಯನ್ನು ನೀಡುತ್ತಿರುವುದು ಕಂಡುಬರುತ್ತದೆ. ಆದರೆ ಈ ಚಿಯರ್ ಲೀಡರ್ ಗಳಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ? ಸಂಬಳವನ್ನು ಕೇಳಿದರೆ ಶಾಕ್ ಆಗೋದು ಖಂಡಿತ.
ಇದನ್ನೂ ಓದಿ: IPL 2023: ಹೀನಾಯ ಸೋಲಿನ ಬಳಿಕ RCBಯಿಂದ ಹೊರಬಿದ್ದ ಆಟಗಾರ: ಈ ಮಾರಕ ಬೌಲರ್ ಗ್ರ್ಯಾಂಡ್ ಎಂಟ್ರಿ!
ಒಂದು ಪಂದ್ಯದ ವೇತನದಲ್ಲಿ ನೀವು ದುಬೈ ತಲುಪಬಹುದು!
ಹೆಚ್ಚಿನ ಐಪಿಎಲ್ ಪಂದ್ಯಗಳಲ್ಲಿ ಭಾಗವಹಿಸಲು ವಿದೇಶದಿಂದ ಚಿಯರ್ ಲೀಡರ್‌ಗಳು ಬರುತ್ತಾರೆ. ಆದರೆ, ಕೆಲವು ಭಾರತೀಯರೂ ಇದರಲ್ಲಿ ಭಾಗಿಯಾಗಿದ್ದಾರೆ. ನಾವು ಅವರ ವೇತನದ ಬಗ್ಗೆ ಮಾತನಾಡುತ್ತಿದ್ದೇವೆ. ಅವರು ಒಂದು ಪಂದ್ಯಕ್ಕೆ ಸುಮಾರು 14000-17000 ರೂಪಾಯಿ ಪಡೆಯುತ್ತಾರಂತೆ. ಚೆನ್ನೈ, ಪಂಜಾಬ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಮ್ಮ ಪಂದ್ಯಗಳಲ್ಲಿ ಚೀರ್ ಲೀಡರ್’ಗಳಿಗೆ ಪ್ರತಿ ಪಂದ್ಯಕ್ಕೆ 12000 ರೂಪಾಯಿಗಳಿಗಿಂತ ಹೆಚ್ಚು ಪಾವತಿಸಲಾಗುತ್ತದೆ ಎಂದು ಕ್ರಿಕ್ ಫ್ಯಾಕ್ಟ್ಸ್ ವರದಿಯಲ್ಲಿ ತಿಳಿಸಲಾಗಿದೆ.
ಐಪಿಎಲ್’ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್, ತಮ್ಮ ಪಂದ್ಯಗಳ ಸಮಯದಲ್ಲಿ ಚೀರ್ ಲೀಡರ್’ಗಳಿಗೆ ಪ್ರತಿ ಪಂದ್ಯದಲ್ಲಿ 20,000 ರೂಪಾಯಿಗಳನ್ನು ನೀಡುತ್ತದೆ. ಇದಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಪ್ರತಿ ಪಂದ್ಯಕ್ಕೆ ಸುಮಾರು 20,000 ರೂ. ನೀಡುತ್ತದೆ. ಇನ್ನೊಂದೆಡೆ ಅತಿ ಹೆಚ್ಚು ಸಂಭಾವನೆ ಪಡೆಯುವುದು ಕೋಲ್ಕತ್ತಾ ನೈಟ್ ರೈಡರ್ಸ್ ಚೀರ್‌ಲೀಡರ್‌ಗಳು. ಇವರಿಗೆ ಪ್ರತಿ ಪಂದ್ಯಕ್ಕೆ ಸುಮಾರು 24000 ವರೆಗೆ ಪಾವತಿಸಲಾಗುತ್ತದೆ.
ಇದನ್ನೂ ಓದಿ: IPL ಮಧ್ಯೆಯೇ ಟೀಂ ಇಂಡಿಯಾದ ಈ ಸ್ಫೋಟಕ ಆರಂಭಿಕ ಆಟಗಾರ ಮೇಲೆ ಕೇಸು ದಾಖಲು!
ಪ್ರತಿ ಪಂದ್ಯದ ಸಂಬಳದ ಹೊರತಾಗಿ, ಚೀರ್ ಲೀಡರ್‌ಗಳು ತಮ್ಮ ಪ್ರದರ್ಶನದ ಆಧಾರದ ಮೇಲೆ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಅವರು ಹುರಿದುಂಬಿಸುವ ತಂಡ ಗೆದ್ದರೆ, ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಇದಲ್ಲದೇ ಅವರಿಗೆ ಪ್ರತಿದಿನವೂ ಆಹಾರ ನೀಡಲಾಗುತ್ತದೆ. ಪ್ರೇಕ್ಷಕರು ಕಿಕ್ಕಿರಿದು ತುಂಬಿರುವ ಮೈದಾನದಲ್ಲಿ ಚಿಯರ್ ಲೀಡರ್ಸ್ ಪ್ರದರ್ಶನ ನೀಡುವುದು ಅಷ್ಟು ಸುಲಭದ ಮಾತಲ್ಲ. ಅವರು ಸಹ ಈ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.