IPL 2023: ಹೀನಾಯ ಸೋಲಿನ ಬಳಿಕ RCBಯಿಂದ ಹೊರಬಿದ್ದ ಆಟಗಾರ: ಈ ಮಾರಕ ಬೌಲರ್ ಗ್ರ್ಯಾಂಡ್ ಎಂಟ್ರಿ!

Royal Challengers Bangalore: ಗಾಯಗೊಂಡಿರುವ ಬೌಲರ್ ರೀಸ್ ಟೋಪ್ಲಿ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಕಟಿಸಿದೆ. ಈ ಆಟಗಾರನ ಬದಲಿಗೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ವೇಯ್ನ್ ಪಾರ್ನೆಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಈ ಆಟಗಾರನ ಸೇರ್ಪಡೆಯೊಂದಿಗೆ, ತಂಡವು ಅನೇಕ ಸಂದರ್ಭಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.  

Written by - Bhavishya Shetty | Last Updated : Apr 7, 2023, 03:55 PM IST
    • ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ ಸಿ ಬಿ ಬ್ಯಾಟ್ಸ್‌’ಮನ್‌’ಗಳು ಸಂಪೂರ್ಣವಾಗಿ ಮಂಡಿಯೂರಿದ್ದು ಕಂಡುಬಂತು
    • ಈ ಪಂದ್ಯವನ್ನು ಕೋಲ್ಕತ್ತಾ 81 ರನ್‌’ಗಳ ದೊಡ್ಡ ಅಂತರದಿಂದ ಗೆದ್ದುಕೊಂಡಿತು.
    • ಗಾಯಗೊಂಡಿರುವ ಬೌಲರ್ ರೀಸ್ ಟೋಪ್ಲಿ ಅವರ ಸ್ಥಾನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಕಟಿಸಿದೆ
IPL 2023: ಹೀನಾಯ ಸೋಲಿನ ಬಳಿಕ RCBಯಿಂದ ಹೊರಬಿದ್ದ ಆಟಗಾರ: ಈ ಮಾರಕ ಬೌಲರ್ ಗ್ರ್ಯಾಂಡ್ ಎಂಟ್ರಿ! title=
Royal Challengers Bangalore

Royal Challengers Bangalore: ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ IPL ಋತುವಿನಲ್ಲಿ ಅನೇಕ ಸಮಸ್ಯೆಯನ್ನು ಎದುರಿಸುತ್ತಿದೆ. ಆರ್ ಸಿ ಬಿಯ ಅನೇಕ ಆಟಗಾರರು ಗಾಯಗೊಂಡಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ ಸಿ ಬಿ ಬ್ಯಾಟ್ಸ್‌’ಮನ್‌’ಗಳು ಸಂಪೂರ್ಣವಾಗಿ ಮಂಡಿಯೂರಿದ್ದು ಕಂಡುಬಂತು. ಈ ಪಂದ್ಯವನ್ನು ಕೋಲ್ಕತ್ತಾ 81 ರನ್‌’ಗಳ ದೊಡ್ಡ ಅಂತರದಿಂದ ಗೆದ್ದುಕೊಂಡಿತು. ಈ ಮಧ್ಯೆ RCB ತಮ್ಮ ತಂಡಕ್ಕೆ ಅಪಾಯಕಾರಿ ಬೌಲರ್ ಪ್ರವೇಶಿಸಿದ್ದಾರೆ. ಈ ಆಟಗಾರ ರೀಸ್ ಟೋಪ್ಲೆ ಬದಲಿಗೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: KKR vs RCB: ಗೆದ್ದರೂ ಸಂತಸವಿಲ್ಲ…! KKR ತಂಡಕ್ಕೆ ಬರೋಬ್ಬರಿ 12 ಕೋಟಿ ಮೋಸ ಮಾಡಿದನೇ ಈ ಅನುಭವಿ ಆಟಗಾರ?

ಗಾಯಗೊಂಡಿರುವ ಬೌಲರ್ ರೀಸ್ ಟೋಪ್ಲಿ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಕಟಿಸಿದೆ. ಈ ಆಟಗಾರನ ಬದಲಿಗೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ವೇಯ್ನ್ ಪಾರ್ನೆಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಈ ಆಟಗಾರನ ಸೇರ್ಪಡೆಯೊಂದಿಗೆ, ತಂಡವು ಅನೇಕ ಸಂದರ್ಭಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.  

ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ವೇಗದ ಬೌಲರ್ ರೀಸ್ ಟೋಪ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಇದರ ನಂತರ, ಭುಜದ ಗಾಯದಿಂದ ಅವರು ಸಂಪೂರ್ಣ ಪಂದ್ಯದಿಂದ ಹೊರಗುಳಿದಿದ್ದರು. RCB ಮತ್ತು KKR ನಡುವಿನ ಪಂದ್ಯದ ನಡುವೆ ಅವರು ಸಂಪೂರ್ಣ ಐಪಿಎಲ್ ಸೀಸನ್‌ನಿಂದ ಹೊರಗುಳಿಯುವ ಅಪ್ಡೇಟ್ ಬಹಿರಂಗಪಡಿಸಲಾಯಿತು. 2 ಓವರ್ ಬೌಲ್ ಮಾಡಿದ ಟೋಪ್ಲಿ 14 ರನ್ ನೀಡಿ 1 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: RCB vs KKR: ಶಾರ್ದೂಲ್ ಸ್ಪೋಟಕ ಬ್ಯಾಟಿಂಗ್… ತವರಿನಲ್ಲಿ ಕೆಕೆಆರ್ ಶೈನಿಂಗ್: ಬೆಂಗಳೂರಿಗೆ ಹೀನಾಯ ಸೋಲು

ಪಾರ್ನೆಲ್ ದಕ್ಷಿಣ ಆಫ್ರಿಕಾ ತಂಡದಲ್ಲಿ ವೇಗದ ಬೌಲಿಂಗ್‌’ನ ಮುಂಭಾಗವನ್ನು ನಿಭಾಯಿಸುತ್ತಾರೆ. ತಂಡದ ಆಡಳಿತವು ಆರ್‌’ಸಿಬಿಯ ಮುಂಬರುವ ಪಂದ್ಯಗಳಲ್ಲಿ ಅವರಿಗೆ ಅವಕಾಶ ನೀಡಬಹುದು. ಐಪಿಎಲ್‌’ನಲ್ಲಿ ಇದುವರೆಗೆ 26 ಪಂದ್ಯಗಳನ್ನು ಆಡಿದ್ದು, 26 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌’ನಲ್ಲಿ 27 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿರುವುದು ಅವರ ಅತ್ಯುತ್ತಮ ಸಾಧನೆಯಾಗಿದೆ. ದಕ್ಷಿಣ ಆಫ್ರಿಕಾ ಪರ ಆಡುತ್ತಿರುವ ಅವರು ಟಿ20 ಕ್ರಿಕೆಟ್‌ನಲ್ಲಿ 56 ಪಂದ್ಯಗಳಲ್ಲಿ 59 ವಿಕೆಟ್‌ಗಳನ್ನು ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News