Faf du Plessis: 38 ಹರೆಯದಲ್ಲೂ 23ರ ತರುಣನ ಶಕ್ತಿ: ಸೂಪರ್’ಮ್ಯಾನ್ ಥರ ಹಾರಿ ಕ್ಯಾಚ್ ಹಿಡಿದ ಫಾಫ್ ಆಟಕ್ಕೆ ಜಗತ್ತೇ ಫಿದಾ!
Faf du Plessis Superman Action: ಫಾಫ್ ಡು ಪ್ಲೆಸಿಸ್ ಸ್ಟಾರ್ ಫೀಲ್ಡರ್. ದಕ್ಷಿಣ ಆಫ್ರಿಕಾದ ಈ ಅನುಭವಿ ಕ್ಯಾಚ್ ಹಿಡಿದಾಗ ಒಂದು ಕ್ಷಣ ಪರಿಪೂರ್ಣತೆಯ ದರ್ಶನವಾಗಿತ್ತು. ಡೈವ್ ಹೊಡೆದು ಎರಡೂ ಕೈಗಳಿಂದ ಬಾಲ್ ಹಿಡಿದಿದ್ದು, ಜಗತ್ತನ್ನೇ ಬೆಕ್ಕಸಬೆರಗುಗೊಳಿಸಿದೆ.
Faf du Plessis Superman Action: ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ಫಾಫ್ ಡು ಪ್ಲೆಸಿಸ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಈ ಕ್ಷಣ ಮ್ಯಾಜಿಕ್’ನಂತೆ ಕಂಡುಬಂದಿದೆ.
ಇದನ್ನೂ ಓದಿ: RCB: ಕೊಹ್ಲಿ-ಫಾಫ್ ಭರ್ಜರಿ ಜೊತೆಯಾಟ: ತವರಿನಲ್ಲಿ ಅಬ್ಬರಿಸಿ ಅದ್ಧೂರಿ ಶುಭಾರಂಭ ಮಾಡಿದ ‘ಬೆಂಗಳೂರು’
ಡು ಪ್ಲೆಸಿಸ್ ಅವರ ನಂಬಲಾಗದ ಪ್ರಯತ್ನದಿಂದ ಮುಂಬೈ ಇಂಡಿಯನ್’ನ ಯುವ ಆಟಗಾರ ಹೃತಿಕ್ ಶೋಕಿನ್ ಔಟ್ ಆಗಿದ್ದಾರೆ.
ಈ ಘಟನೆಯು 18 ಓವರ್’ನ ಮೊದಲ ಎಸೆತದಲ್ಲಿ ಸಂಭವಿಸಿತು. ಹರ್ಷಲ್ ಪಟೇಲ್ ಅವರು ಎಸೆದ ಬಾಲ್’ನಲ್ಲಿ ಬೌಂಡರಿ ಸಿಡಿಸಲು ಮುಂದಾದರು. ಆದರೆ ಗಾಳಿಯಲ್ಲಿ ಹಾರಿದ ಬಾಲ್’ನ್ನು ಡು ಪ್ಲೆಸಿಸ್ ಸೂಪರ್ ಮ್ಯಾನ್ ಥರ ಹಾರಿ ಕ್ಯಾಚ್ ಹಿಡಿದಿದ್ದಾರೆ.
ಫಾಫ್ ಡು ಪ್ಲೆಸಿಸ್ ಸ್ಟಾರ್ ಫೀಲ್ಡರ್. ದಕ್ಷಿಣ ಆಫ್ರಿಕಾದ ಈ ಅನುಭವಿ ಕ್ಯಾಚ್ ಹಿಡಿದಾಗ ಒಂದು ಕ್ಷಣ ಪರಿಪೂರ್ಣತೆಯ ದರ್ಶನವಾಗಿತ್ತು. ಡೈವ್ ಹೊಡೆದು ಎರಡೂ ಕೈಗಳಿಂದ ಬಾಲ್ ಹಿಡಿದಿದ್ದು, ಜಗತ್ತನ್ನೇ ಬೆಕ್ಕಸಬೆರಗುಗೊಳಿಸಿದೆ.
Virat-Faf Du Plesis: ಡು ಪ್ಲೆಸಿಸ್ “ಈ ಸಲ ಕಪ್ ನಮ್ದೆ” ಅನ್ನುತ್ತಿದ್ದಂತೆ ಬಿದ್ದು ಬಿದ್ದು ನಕ್ಕ ವಿರಾಟ್! ಯಾಕೆ ಗೊತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಸಿ), ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿ.ಕೀ), ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.