Faf du Plessis pronounces RCB slogan: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಅವರು ಕಾರ್ಯಕ್ರಮವೊಂದರಲ್ಲಿ ಬಿದ್ದು ಬಿದ್ದು ನಕ್ಕಿದ್ದಾರೆ. ಇದಕ್ಕೆ ಕಾರಣ ಡು ಪ್ಲೆಸಿಸ್ ತಪ್ಪಾಗಿ “ಈ ಸಲ ಕಪ್ ನಮ್ದೆ“ ಎಂಬ ಸ್ಲೋಗನ್ ಹೇಳಿದ್ದಾರೆ.
ಇದನ್ನೂ ಓದಿ: Video Viral: ಮಗು ಕೈಯಿಂದ ಲಾಲಿಪಾಪ್ ಕದ್ದ ಸ್ಟಾರ್ ಕ್ರಿಕೆಟಿಗ! ಸಿಕ್ಕಿಬಿದ್ದಾಗ ಆತ ಮಾಡಿದ್ದೇನು ಗೊತ್ತಾ?
ಈವೆಂಟ್ ಒಂದರ ಸಂವಾದದ ಸಮಯದಲ್ಲಿ, ಡು ಪ್ಲೆಸಿಸ್ ಅವರು 'ಈ ಸಲ ಕಪ್ ನಮ್ದೆ' ಬದಲಿಗೆ 'ಈ ಸಲ ಕಪ್ ನಹಿ' ಎಂದು ಹೇಳಿದ್ದಾರೆ. ಮೂಲ ಘೋಷಣೆ 'ಈ ಸಲ ಕಪ್ ನಮ್ದೆ' ಎಂದಾಗಿದೆ. ಡು ಪ್ಲೆಸಿಸ್ ತಪ್ಪಾಗಿ ಹೇಳಿದ್ದೇ ತಡ, ನಾಯಕನ ಪಕ್ಕದಲ್ಲಿ ಕುಳಿತಿದ್ದ ಕೊಹ್ಲಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
Faf du Plessis: "Ee Sala Cup Nahi"#PlayBold #IPL2023 pic.twitter.com/5YqeldqHpB
— Virat Kohli Worldwide (@ViratianTweets) April 1, 2023
ಸದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ ಅಭಿಯಾನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾರಂಭಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್ ಸಿ ಬಿ ಸಖತ್ ಆಗಿ ಬೌಲಿಂಗ್ ಮಾಡುತ್ತಿದೆ.
RCB vs MI ಪ್ಲೇಯಿಂಗ್ XI ಹೀಗಿದೆ:
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾ), ಇಶಾನ್ ಕಿಶನ್ (ವಿ.ಕೀ), ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್
ಇದನ್ನೂ ಓದಿ: IPL 2023: ಇಂದು RCB V/s MI ಹಣಾಹಣಿ; ‘ಈ ಸಲ ಕಪ್ ನಮ್ದೆ’ ಅಂತಿದ್ದಾರೆ ಫ್ಯಾನ್ಸ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಸಿ), ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿ.ಕೀ), ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.