Royal Challengers Bengaluru, IPL 2023: ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಈ ಗೆಲುವಿನ ಮುಖ್ಯ ರುವಾರಿಯಾಗಿದ್ದಾರೆ.
ಇದನ್ನೂ ಓದಿ: Virat-Faf Du Plesis: ಡು ಪ್ಲೆಸಿಸ್ “ಈ ಸಲ ಕಪ್ ನಮ್ದೆ” ಅನ್ನುತ್ತಿದ್ದಂತೆ ಬಿದ್ದು ಬಿದ್ದು ನಕ್ಕ ವಿರಾಟ್! ಯಾಕೆ ಗೊತ್ತಾ?
ಬೌಲಿಂಗ್ ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸಿದ ಆರ್ ಸಿ ಬಿ ತವರಿನಲ್ಲಿ ಅದ್ಧೂರಿ ಶುಭಾರಂಭ ಮಾಡಿದೆ. 2 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದೆ ಬೆಂಗಳೂರು.
ಆರ್ ಸಿ ಬಿ ಪರ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ (82) ಮತ್ತು ಫಾಫ್ ಡು ಪ್ಲೆಸಿಸ್ (73) ಭರ್ಜರಿ ಜೊತೆಯಾಟವಾಡಿದ್ದಾರೆ. ಇವರಿಬ್ಬರು ಸಿಕ್ಸರ್ ಮತ್ತು ಬೌಂಡರಿಗಳ ಮಹಾಮಳೆಯನ್ನೇ ಸುರಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭಿಕ ಆಘಾತವನ್ನು ಅನುಭವಿಸಿತು, ತಿಲಕ್ ಹೊರತುಪಡಿಸಿ ಮುಂಬೈ ಪರ ಯಾವ ಆಟಗಾರ ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
ಆರ್ ಸಿ ಬಿ ನಾಯಕನ ಅದ್ಭುತ ಕ್ಯಾಚ್:
ಹರ್ಷಲ್ ಪಟೇಲ್ ಅವರು ಎಸೆದ ಬಾಲ್’ನಲ್ಲಿ ಮುಂಬೈ ಇಂಡಿಯನ್’ನ ಯುವ ಆಟಗಾರ ಹೃತಿಕ್ ಶೋಕಿನ್ ಬೌಂಡರಿ ಸಿಡಿಸಲು ಮುಂದಾದರು. ಆದರೆ ಗಾಳಿಯಲ್ಲಿ ಹಾರಿದ ಬಾಲ್’ನ್ನು ಡು ಪ್ಲೆಸಿಸ್ ಸೂಪರ್ ಮ್ಯಾನ್ ಥರ ಹಾರಿ ಕ್ಯಾಚ್ ಹಿಡಿದಿದ್ದಾರೆ. ಡೈವ್ ಹೊಡೆದು ಎರಡೂ ಕೈಗಳಿಂದ ಬಾಲ್ ಹಿಡಿದಿದ್ದು, ಜಗತ್ತನ್ನೇ ಬೆಕ್ಕಸ ಬೆರಗುಗೊಳಿಸಿದೆ.
RCB vs MI ಪ್ಲೇಯಿಂಗ್ XI ಹೀಗಿದೆ:
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾ), ಇಶಾನ್ ಕಿಶನ್ (ವಿ.ಕೀ), ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್
ಇದನ್ನೂ ಓದಿ: IPL 2023: ಅಂದು ಬೇಡವೇ ಬೇಡ ಎನ್ನುತ್ತಾ ಆಯ್ಕೆದಾರರು ದೂರವಿಟ್ಟ ಈ ಆಟಗಾರ ಇಂದು ವಿರಾಟ್ ದಾಖಲೆಯನ್ನೇ ಸರಿಗಟ್ಟಿದ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಸಿ), ಗ್ಲೆನ್ ಮ್ಯಾಕ್ಸ್ವೆಲ್, ಮೈಕಲ್ ಬ್ರೇಸ್ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿ.ಕೀ), ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.