IPL 2023, LSG Players Emotional Story: ಸಾಮಾನ್ಯವಾಗಿ ನೀವು ಕ್ರಿಕೆಟಿಗರ ಹೋರಾಟಕ್ಕೆ ಸಂಬಂಧಿಸಿದ ವರದಿಗಳನ್ನು ನೋಡಿರಬಹುದು. ಕೆಲವರು ಬಡತನದಿಂದ ಬಂದಿದ್ದರೆ, ಇನ್ನೂ ಕೆಲವರು ಊಹಿಸಲೂ ಸಾಧ್ಯವಾಗದ ಸಮಸ್ಯೆಗಳಿಗೆ ತುತ್ತಾಗಿ, ಬಳಿಕ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿರುತ್ತಾರೆ. ತಮ್ಮ ದೌರ್ಬಲ್ಯವನ್ನೇ ಶಕ್ತಿಯನ್ನಾಗಿ ಮಾಡಿಕೊಂಡು ಇದೀಗ ಕ್ರೀಡಾ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ ಈ ಒಬ್ಬ ಆಟಗಾರ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: CSK vs RR ಪಂದ್ಯದಲ್ಲಿ ಅಂಪೈರ್ ವಿರುದ್ಧ ಗಂಭೀರ ಆರೋಪ ಮಾಡಿದ ಅಶ್ವಿನ್! ಹುಟ್ಟಿಕೊಂಡ ಹೊಸ ವಿವಾದ ಏನು?


ಈ ಆಟಗಾರ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಪ್ರತಿನಿಧಿಸುತ್ತಾರೆ. ಹೆಸರು- ನಿಕೋಲಸ್ ಪೂರನ್. ಈ ಆಟಗಾರನ ಬಗ್ಗೆ ನಿಮಗೆ ತಿಳಿದಿರಬಹುದು. ಇತ್ತೀಚೆಗೆ ಆರ್ ಸಿ ಬಿ ವಿರುದ್ಧ ಕೊನೆಯ ಓವರ್’ನಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಈತ ತಂಡದ ಗೆಲುವಿಗೆ ಕೊಡುಗೆ ನೀಡಿದ್ದ. ಲಕ್ನೋ ಸೂಪರ್ ಜೈಂಟ್ಸ್ (ಎಲ್‌ ಎಸ್‌ ಜಿ) ಪರ ಆಡುತ್ತಿರುವ ನಿಕೋಲಸ್ ಪೂರನ್ ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಈ ಇನ್ನಿಂಗ್ಸ್‌’ನ ನೆರವಿನಿಂದ ಅವರ ತಂಡವೂ ಗೆಲುವು ಸಾಧಿಸಿತು. 27 ವರ್ಷದ ಬ್ಯಾಟ್ಸ್‌ಮನ್ ಅವರನ್ನು ಲಕ್ನೋ ಫ್ರಾಂಚೈಸಿ 16 ಕೋಟಿ ರೂ.ಗೆ ಖರೀದಿಸಿದೆ.


ದೌರ್ಬಲ್ಯವನ್ನೇ ಶಕ್ತಿಯನ್ನಾಗಿ ಮಾಡಿಕೊಂಡ!


ಲಕ್ನೋ ತಂಡದ ಪರವಾಗಿ ಆಟವಾಡುವ ಪೂರನ್, ಋತುವಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 21 ಎಸೆತಗಳಲ್ಲಿ 36 ರನ್ ಗಳಿಸಿದರು. ಎರಡನೇ ಪಂದ್ಯದಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 18 ಎಸೆತಗಳಲ್ಲಿ 32 ರನ್ ಸೇರಿಸಿದರು. ನಂತರ ಮೂರನೇ ಪಂದ್ಯದಲ್ಲಿ 6 ಎಸೆತಗಳಲ್ಲಿ 11 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ನಾಲ್ಕನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಬಿರುಗಾಳಿ ಬೀಸಿದರು. 19 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 62 ರನ್ ಗಳಿಸಿದರು. ಇನ್ನು ಇವರಿಗೆ 2015ರಲ್ಲಿ ಅಪಘಾತವಾಗಿತ್ತು, ಇದಲ್ಲಿ ಎರಡೂ ಕಾಲುಗಳು ಮುರಿದಿದ್ದರಿಂದ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ.


8 ವರ್ಷಗಳ ಹಿಂದೆ ನಿಕೋಲಸ್ ಪೂರನ್ ಅಪಘಾತಕ್ಕೀಡಾಗಿದ್ದರು. ಆಗ ನಡೆದಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ. 19 ನೇ ವಯಸ್ಸಿನಲ್ಲಿ, ಅವರ ಕಾರಿಗೆ ಭೀಕರ ಅಪಘಾತ ಸಂಭವಿಸಿತು. ಅವರ ಎರಡೂ ಕಾಲುಗಳು ಗಂಭೀರವಾಗಿ ಗಾಯಗೊಂಡವು. ಕಾಲು ಮುರಿತದ ಕಾರಣ, ಪ್ಲಾಸ್ಟರ್ ಹಾಕಬೇಕಾಯಿತು.


ಈ ಅಪಘಾತದ ಬಗ್ಗೆ ಮಾತನಾಡಿದ ಅವರು, “ತರಬೇತಿ ಮುಗಿಸಿ ವಾಹನ ಚಲಾಯಿಸಿಕೊಂಡು ಮನೆಗೆ ಬರುತ್ತಿದ್ದೆ. ನಾನು  ಮನೆಯ ಹತ್ತಿರ ಇದ್ದೆ. ಒಂದು ಕಾರು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆಯಿತು.  ಅಷ್ಟರಲ್ಲಿ ನನ್ನ ಕಾರು ಮರಳು ದಿಬ್ಬಕ್ಕೆ ಡಿಕ್ಕಿ ಹೊಡೆದಿದೆ. ಮತ್ತೆ =ಇನ್ನೊಂದು ವಾಹನ ನನಗೆ ಡಿಕ್ಕಿ ಹೊಡೆಯಿತು ಎಂದು ಹೇಳಿದ್ದಾರೆ.


ಇದನ್ನೂ ಓದಿ: IPLನಲ್ಲಿ ಒಂದೇ ಒಂದು ಪಂದ್ಯವನ್ನಾಡದೆ 2 ಬಾರಿ ಚಾಂಪಿಯನ್ ಆದ ಆಟಗಾರನೀತ! ಹೆಸರು ಕೇಳಿದ್ರೆ ಶಾಕ್ ಆಗ್ತೀರ


ವೈದ್ಯರು ಕ್ರಿಕೆಟ್ ತ್ಯಜಿಸುವಂತೆ ಸಲಹೆ ನೀಡಿದ್ದರು!


ಗಾಯವು ಎಷ್ಟು ಗಂಭೀರವಾಗಿದೆಯೆಂದರೆ, ವೈದ್ಯರು ನಿಕೋಲಸ್ ಪೂರನ್ ಅವರಿಗೆ ಕ್ರಿಕೆಟ್ ತ್ಯಜಿಸುವಂತೆ ಸಲಹೆ ನೀಡಿದರು. ಆದರೆ ಪೂರನ್ ಶ್ರಮಿಸಿ ಮತ್ತೆ ಮೈದಾನಕ್ಕೆ ಮರಳುವಲ್ಲಿ ಯಶಸ್ವಿಯಾದರು. ಅಪಘಾತದ ನಂತರ ಪೂರನ್ ಅವರಿಗೆ 2 ಶಸ್ತ್ರಚಿಕಿತ್ಸೆಗಳು ನಡೆದಿವೆ. ಇದರಿಂದಾಗಿ ಅವರು 18 ತಿಂಗಳ ಕಾಲ ಮೈದಾನದಿಂದ ದೂರವಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ನಿಕೋಲಸ್ ಮೈದಾನಕ್ಕೆ ಮರಳುವ ಮೂಲಕ ಸದ್ದು ಮಾಡಿದರು. ನಿಕೋಲ್ಸ್ ಈಗ ವೆಸ್ಟ್ ಇಂಡೀಸ್ ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.