Team India: ಟೀಂ ಇಂಡಿಯಾದಿಂದ ಆದ ಅವಮಾನವನ್ನು ಸಹಿಸಲಾಗದೆ ಎಲ್ಲವನ್ನೂ ತೊರೆದು ವಿದೇಶಕ್ಕೆ ತೆರಳಿದ 'ನಾಯಕ'!

Unmukt Chand: ಚಂದ್ ಅವರ ನಾಯಕತ್ವದಲ್ಲಿಯೇ ಭಾರತ ತಂಡ ಅಂಡರ್-19 ವಿಶ್ವಕಪ್ ಗೆದ್ದಿದ್ದು. ಆದರೆ, ಈ ನಡುವೆಯೂ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಅವರು ಕಳೆದ ವರ್ಷ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌’ಗೆ ಪಾದಾರ್ಪಣೆ ಮಾಡಿದರು.

Written by - Bhavishya Shetty | Last Updated : Apr 13, 2023, 06:00 PM IST
    • ಭಾರತ ಕ್ರಿಕೆಟ್ ತಂಡದ ಜೆರ್ಸಿ ಯನ್ನು ಒಂದು ಬಾರಿಯಾದರು ಧರಿಸಬೇಕು ಎಂದು ಬಯಸುತ್ತಾರೆ
    • ಭಾರತ ಕ್ರಿಕೆಟ್ ತಂಡದಲ್ಲಿ ಆಡಲು ಸಾಧ್ಯವಾಗದೆ ವಿದೇಶಕ್ಕೆ ತೆರಳಿದ ಆಟಗಾರನೊಬ್ಬನಿದ್ದಾನೆ.
    • ಈಗ ಅವರು ಅಮೆರಿಕ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ
Team India: ಟೀಂ ಇಂಡಿಯಾದಿಂದ ಆದ ಅವಮಾನವನ್ನು ಸಹಿಸಲಾಗದೆ ಎಲ್ಲವನ್ನೂ ತೊರೆದು ವಿದೇಶಕ್ಕೆ ತೆರಳಿದ 'ನಾಯಕ'! title=
Unmukth Chand

Unmukt Chand: ಪ್ರತಿಯೊಬ್ಬ ಆಟಗಾರನು ಸ್ವಲ್ಪ ಸಮಯ ಭಾರತ ತಂಡಕ್ಕಾಗಿ ಆಡಬೇಕೆಂದು ಬಯಸುತ್ತಾನೆ. ಭಾರತ ಕ್ರಿಕೆಟ್ ತಂಡದ ಜೆರ್ಸಿ ಯನ್ನು ಒಂದು ಬಾರಿಯಾದರು ಧರಿಸಬೇಕು ಎಂದು ಬಯಸುತ್ತಾರೆ. ಅನೇಕ ಆಟಗಾರರ ಈ ಕನಸು ನನಸಾಗಿದೆ. ಆದರೆ ಕೆಲವರು ದೇಶೀಯ ಕ್ರಿಕೆಟ್ ಅಥವಾ ಲೀಗ್‌’ನಲ್ಲಿ ಮಾತ್ರ ಆಡುವ ಮೂಲಕ ನಿವೃತ್ತಿ ಹೊಂದಲು ಮನಸ್ಸು ಮಾಡುತ್ತಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಆಡಲು ಸಾಧ್ಯವಾಗದೆ ವಿದೇಶಕ್ಕೆ ತೆರಳಿದ ಆಟಗಾರನೊಬ್ಬನಿದ್ದಾನೆ. ಈಗ ಅವರು ಅಮೆರಿಕ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ.

ಇದನ್ನೂ ಓದಿ: ICC Men's T20I ranking: ನಂ.1 ಸ್ಥಾನವನ್ನು ಉಳಿಸಿಕೊಂಡ ಸೂರ್ಯಕುಮಾರ್ ಯಾದವ್

ಈ ಆಟಗಾರ ಬೇರಾರು ಅಲ್ಲ, ಉನ್ಮುಕ್ತ್ ಚಂದ್. ಉನ್ಮುಕ್ತ್ ಚಂದ್ ಅವರ ನಾಯಕತ್ವದಲ್ಲಿಯೇ ಭಾರತ ತಂಡ ಅಂಡರ್-19 ವಿಶ್ವಕಪ್ ಗೆದ್ದಿದ್ದು. ಆದರೆ, ಈ ನಡುವೆಯೂ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಅವರು ಕಳೆದ ವರ್ಷ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌’ಗೆ ಪಾದಾರ್ಪಣೆ ಮಾಡಿದರು.

ಉನ್ಮುಕ್ತ್ ಚಂದ್ ಬಿಬಿಎಲ್ ಪಂದ್ಯದಲ್ಲಿ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಉನ್ಮುಕ್ತ್ ಚಂದ್ ಅವರು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ T20 ಲೀಗ್‌’ನಲ್ಲಿ (BBL) ಮೆಲ್ಬೋರ್ನ್ ರೆನೆಗೇಡ್ಸ್ ಪರ ಪಾದಾರ್ಪಣೆ ಮಾಡಿದರು. ಈ ಲೀಗ್‌’ನಲ್ಲಿ ಆಡಿದ ಮೊದಲ ಭಾರತೀಯ ಕ್ರಿಕೆಟಿಗ. 30 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್‌ಮನ್ ಹೊಬಾರ್ಟ್ ಹರಿಕೇನ್ಸ್ ವಿರುದ್ಧ BBL ಚೊಚ್ಚಲ ಪಂದ್ಯವನ್ನು ಆಡಿದರು. ಉನ್ಮುಕ್ತ್ ನಾಯಕತ್ವದಲ್ಲಿ ಭಾರತ ತಂಡವು 2012 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಅನ್ನು ಗೆದ್ದುಕೊಂಡಿತು.

ಉನ್ಮುಕ್ತ್ ಅವರು 28 ನೇ ವಯಸ್ಸಿನಲ್ಲಿ ಭಾರತೀಯ ಕ್ರಿಕೆಟ್‌’ನ ಎಲ್ಲಾ ಸ್ವರೂಪಗಳಿಂದ ನಿವೃತ್ತರಾದರು. ಇದಕ್ಕೆ ಮುಖ್ಯ ಕಾರಣ ಅವರು ವಿದೇಶದಲ್ಲಿ ಲೀಗ್‌’ಗಳನ್ನು ಆಡುವ ಅರ್ಹತೆ ಪಡೆದದ್ದು. ಉನ್ಮುಕ್ತ್ ಅವರು ಭಾರತ-ಎ ತಂಡವನ್ನು ಮುನ್ನಡೆಸಿದರು. ಆದರೆ ಹಿರಿಯರ ತಂಡದ ಭಾಗವಾಗಲು ಸಾಧ್ಯವಾಗಲಿಲ್ಲ. ನಿವೃತ್ತಿಯ ನಂತರ, ಅವರು ಅಮೆರಿಕಕ್ಕೆ ತಿರುಗಿದರು.

ಇದನ್ನೂ ಓದಿ: MS Dhoni : ಓಟಿಟಿಯಲ್ಲಿ ದಾಖಲೆ ಬರೆದ ʼಧೋನಿ ಸಿಕ್ಸ್‌ʼ : ಕ್ಯಾಪ್ಟನ್‌ ಕೂಲ್‌ ಆರ್ಭಟ ವೀಕ್ಷಿಸಿದ ʼ2.2 ಕೋಟಿ ಜನʼ

ಅಲ್ಲಿಂದ ಅವರು ಲೀಗ್ ಕ್ರಿಕೆಟ್ ಆಡಲು ಪ್ರಾರಂಭಿಸಿದರು. US ನಲ್ಲಿ 2021 ರ ಮೈನರ್ ಲೀಗ್ ಕ್ರಿಕೆಟ್ (MLC) ಗಾಗಿ ಚಂದ್ ಅವರು ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ಜೊತೆ ಸಹಿ ಹಾಕಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News