IPL 2023 : ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ ಟಿ 20 ಕ್ರಿಕೆಟ್ ನ ಮಹಾ ಸಂಗ್ರಾಮ ! ಯಾರಿಗೆ ನೆರವಗಾಲಿದೆ ನರೇಂದ್ರ ಮೋದಿ ಸ್ಟೇಡಿಯಂ ಪಿಚ್
GT vs CSK 2023:ಸಿಎಸ್‌ಕೆ ಮತ್ತು ಜಿಟಿ ಈ ಹಿಂದೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿಲ್ಲ. ಐಪಿಎಲ್ 2022 ರಲ್ಲಿ ಎರಡು ತಂಡಗಳು ಎದುರು ಬದುರಾಗಿತ್ತು. ಎರಡೂ ಪಂದ್ಯಗಳಲ್ಲಿ ಜಿಟಿ ಜಯ ಗಳಿಸಿತ್ತು.
GT vs CSK 2023: ಇನ್ನು ಕೆಲವೇ ಕ್ಷಣಗಳಲ್ಲಿ ಐಪಿಎಲ್ 2023ರ ಮಹಾ ಸಂಗ್ರಾಮ ಆರಂಭವಾಗಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯ ನಡೆಯಲಿದೆ. ಹೊಸ ಸೀಸನ್ ಅನ್ನು ಗೆಲುವಿನ ಖಾತೆ ತೆರೆಯುವುದರೊಂದಿಗೆ ಪ್ರಾರಂಭಿಸುವತ್ತ ಎರಡೂ ತಂಡಗಳು ಎದುರು ನೋಡುತ್ತಿವೆ.
ಸಿಎಸ್‌ಕೆ ಮತ್ತು ಜಿಟಿ ಈ ಹಿಂದೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿಲ್ಲ. ಐಪಿಎಲ್ 2022 ರಲ್ಲಿ ಎರಡು ತಂಡಗಳು ಎದುರು ಬದುರಾಗಿತ್ತು. ಎರಡೂ ಪಂದ್ಯಗಳಲ್ಲಿ ಜಿಟಿ ಜಯ ಗಳಿಸಿತ್ತು.
ಐಪಿಎಲ್ 2023 ರ ಆರಂಭಿಕ ಪಂದ್ಯ ಕ್ಕೂ ಮೊದಲು ಕ್ರೀಡಾಂಗಣದ ಪಿಚ್ ಇತಿಹಾಸದಮೇಲೆ ಒಂದು ನೋಟ :
ಅಹಮದಾಬಾದ್‌ನ ಹೊಸ ಕ್ರೀಡಾಂಗಣದಲ್ಲಿ ಕಳೆದ ವರ್ಷ ಐಪಿಎಲ್‌ನಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಸೋಲನುಭವಿಸಿತ್ತು. ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದ್ದರೆ, ಗುಜರಾತ್ ಟೈಟಾನ್ಸ್ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಪರಾಭವಗೊಳಿಸಿತ್ತು.
ಇದನ್ನೂ ಓದಿ : Impact Player: ಈ ನಿಯಮದಿಂದ ಸಂಪೂರ್ಣ ಬದಲಾಗುವುದು IPL 2023: ಲಖನೌ ಆಟಗಾರನ ಶಾಕಿಂಗ್ ಹೇಳಿಕೆ
ಸ್ಥಳದಲ್ಲಿರುವ ಪಿಚ್ ಬ್ಯಾಟ್ಸ್ ಮ್ಯಾನ್ ಮತ್ತು ಬೌಲರ್ ಇಬ್ಬರಿಗೂ ನೆರವಾಗುವಂತಿದೆ. ಈ ವರ್ಷದ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ T20I ನಲ್ಲಿ, ಶುಭಮನ್ ಗಿಲ್ ಶತಕ ಬಾರಿಸಿದರೆ, ಹಾರ್ದಿಕ್ ಪಾಂಡ್ಯ ನಾಲ್ಕು ವಿಕೆಟ್ ಕಬಳಿಸಿದ್ದರು.
ಈ ಕ್ರೀಡಾಂಗಣದಲ್ಲಿ ಆಯೋಜಿಸಲಾದ IPL ಪಂದ್ಯಗಳು ಮತ್ತು ಪ್ರಮುಖ ಅಂಶಗಳು :
ಆಡಿದ ಐಪಿಎಲ್ ಪಂದ್ಯಗಳು : 7
ಮೊದಲು ಬ್ಯಾಟಿಂಗ್ ಮಾಡಿ ಗೆದ್ದ ಪಂದ್ಯಗಳು : 2
ಮೊದಲು ಬ್ಯಾಟಿಂಗ್ ಮಾಡಿ ಸೋತ ಪಂದ್ಯಗಳು : 5
ಟೈ : 0
ಕೈಬಿಡಲಾದ ಪಂದ್ಯಗಳು : 0
ಗರಿಷ್ಠ ವೈಯಕ್ತಿಕ ಸ್ಕೋರ್ : 106* - ಜೋಸ್ ಬಟ್ಲರ್
ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು: 3/17 - ಹಾರ್ದಿಕ್ ಪಾಂಡ್ಯ
ಅತ್ಯಧಿಕ ಸ್ಕೋರ್ : 179/5
ಕಡಿಮೆ ಸ್ಕೋರ್ : 123/9
ನರೇಂದ್ರ ಮೋದಿ ಸ್ಟೇಡಿಯಂ ಪಿಚ್ :
ಅಹಮದಾಬಾದ್‌ನ ಪಿಚ್ ಐಪಿಎಲ್ ಪಂದ್ಯಗಳಲ್ಲಿ ಬ್ಯಾಟ್ಸ್ ಮ್ಯಾನ್ ಮತ್ತು ಬೌಲರ್‌ಗಳಿಗೆ ಸಮಾನವಾಗಿ ಸಹಾಯ ಮಾಡಿತ್ತು. ಆದರೆ ಇಲ್ಲಿವರೆಗೆ ಆಡಿದ ಯಾವುದೇ ತಂಡ 200 ರನ್‌ಗಳ ಗಡಿಯನ್ನು ದಾಟಲಿಲ್ಲ. . ಬೌಲರ್‌ಗಳು ಸಹ ಈ ಮೈದಾನದಲ್ಲಿ ಯಶಸ್ಸು ಪಡೆದಿದ್ದಾರೆ.
ಇದನ್ನೂ ಓದಿ : RCB ಜೊತೆ ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್ ಪಾಲುದಾರಿಕೆ: ಜರ್ಸಿ ಅನಾವರಣ
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಿದ ಕೊನೆಯ ಐಪಿಎಲ್ ಪಂದ್ಯ :
ಈ ಮೈದಾನದಲ್ಲಿ ನಡೆದ ಕಳೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಏಳು ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿತ್ತು. ಹಾರ್ದಿಕ್ ಪಾಂಡ್ಯ ಅವರ ಆಲ್ ರೌಂಡರ್ ಪ್ರದರ್ಶನದ ಮೂಲಕ ಅ ಜಿಟಿ ಐತಿಹಾಸಿಕ ಗೆಲುವು ಸಾಧಿಸುವುದು ಸಾಧ್ಯವಾಗಿತ್ತು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.