ಈ ಬಾರಿ ಐಪಿಎಲ್‌ನಲ್ಲಿ ವಿರಾಟ ದಾಖಲೆ ಬರೆಯಲಿದ್ದಾರೆ ಕೊಹ್ಲಿ ! ಆಗಲಿದ್ದಾರೆ ವಿಶ್ವದ ಮೊದಲ ಸಾಧಕ

Virat Kohli IPl Records:  ವಿರಾಟ್ ಕ್ರಿಕೆಟ್ ಇತಿಹಾಸದಲ್ಲಿ ಹಲವು ದೊಡ್ಡ ದಾಖಲೆಗಳನ್ನು ಬರೆದಿದ್ದಾರೆ.  ಇದೀಗ ವಿರಾಟ್ ಕೊಹ್ಲಿ ಮತ್ತೊಂದು ದೊಡ್ಡ ದಾಖಲೆಯ ಹೊಸ್ತಿಲಲ್ಲಿದ್ದಾರೆ.  

Written by - Ranjitha R K | Last Updated : Mar 29, 2023, 10:44 AM IST
  • ವಿರಾಟ್ ಕೊಹ್ಲಿ ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್.
  • ಐಪಿಎಲ್ ನಲ್ಲಿ ಆರ್‌ಸಿಬಿ ಪರ ಆದಿ ರನ್ ಗಳ ಮಳೆಗರೆದಿದ್ದಾರೆ
  • ಮತ್ತೊಂದು ದೊಡ್ಡ ದಾಖಲೆಯ ಹೊಸ್ತಿಲಲ್ಲಿದ್ದಾರೆ ವಿರಾಟ್ ಕೊಹ್ಲಿ.
ಈ ಬಾರಿ ಐಪಿಎಲ್‌ನಲ್ಲಿ ವಿರಾಟ ದಾಖಲೆ ಬರೆಯಲಿದ್ದಾರೆ ಕೊಹ್ಲಿ ! ಆಗಲಿದ್ದಾರೆ ವಿಶ್ವದ ಮೊದಲ ಸಾಧಕ  title=

Virat Kohli IPl Records : ವಿರಾಟ್ ಕೊಹ್ಲಿ ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್. ಐಪಿಎಲ್ ನಲ್ಲಿ ಆರ್‌ಸಿಬಿ ಪರ ಆದಿ ರನ್ ಗಳ ಮಳೆಗರೆದಿದ್ದಾರೆ.  ವಿರಾಟ್ ಕೊಹ್ಲಿ 9 ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು. ಆದರೆ ತಂಡಕ್ಕೆ ಐಪಿಎಲ್ ಟ್ರೋಫಿ ಗೆಲ್ಲಿಸಿ ಕೊಡುವಲ್ಲಿ ಮಾತ್ರ ವಿಫಲರಾದರು. ವಿರಾಟ್ ಕ್ರಿಕೆಟ್ ಇತಿಹಾಸದಲ್ಲಿ ಹಲವು ದೊಡ್ಡ ದಾಖಲೆಗಳನ್ನು ಬರೆದಿದ್ದಾರೆ.  ಇದೀಗ ವಿರಾಟ್ ಕೊಹ್ಲಿ ಮತ್ತೊಂದು ದೊಡ್ಡ ದಾಖಲೆಯ ಹೊಸ್ತಿಲಲ್ಲಿದ್ದಾರೆ. 

ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಆಗಲಿದ್ದಾರೆ ವಿರಾಟ್ :
ಐಪಿಎಲ್‌ನಲ್ಲಿ 223 ಪಂದ್ಯಗಳನ್ನು ಆಡಿರುವ ಕೊಹ್ಲಿ ಇದುವರೆಗೆ 6624 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಕೊಹ್ಲಿ ಇನ್ನು  376 ರನ್ ಗಳಿಸಿದರೆ, ಈ ಟೂರ್ನಿಯಲ್ಲಿ 7000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರ ಈಗಿನ ಫಾರ್ಮ್ ನೋಡಿದರೆ ಈ ದಾಖಲೆಯನ್ನು ಕೊಹ್ಲಿ  ಸುಲಭವಾಗಿ ತಲುಪುವಂತಿದೆ. 

ಇದನ್ನೂ ಓದಿ : IPL 2023: ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವುದು ಇದೇ ತಂಡ: ಸಾಕ್ಷಿ ಹೇಳುತ್ತಿದೆ ಈ 4 ಕಾರಣಗಳು

2016ರಲ್ಲಿ  ಬೌಲರ್ ಗಳ ಬೆವರಿಳಿಸಿದ್ದ ವಿರಾಟ್ : 
2016 ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಆಡುವಾಗ ಅನೇಕ ದೊಡ್ಡ ದಾಖಲೆಗಳನ್ನು ಮಾಡಿದ್ದರು. ಈ ಋತುವಿನಲ್ಲಿ ವಿರಾಟ್  4 ಶತಕಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲ, ಐಪಿಎಲ್ ಇತಿಹಾಸದಲ್ಲಿ ಒಂದೇ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದರು. ವಿರಾಟ್ ಈ ಋತುವಿನಲ್ಲಿ 973 ರನ್ ಗಳಿಸಿದ್ದರು. ಇದುವರೆಗೆ ಯಾರೂ ಈ ದಾಖಲೆಯನ್ನು ಮುರಿಯುವುದು ಸಾಧ್ಯವಾಗಲಿಲ್ಲ. 

ಐಪಿಎಲ್‌ನಲ್ಲಿನ ಅಂಕಿ ಅಂಶಗಳು ಹೀಗಿವೆ  :
ವಿರಾಟ್ ಕೊಹ್ಲಿ ಅವರ ಐಪಿಎಲ್ ಅಂಕಿಅಂಶಗಳನ್ನು ನೋಡುವುದಾದರೆ,  ಅವರು ಐಪಿಎಲ್‌ನಲ್ಲಿ 223 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 6,624 ರನ್ ಗಳಿಸಿದ್ದಾರೆ. ಇದರೊಂದಿಗೆ ಒಂದೇ ಪಂದ್ಯಗಳಲ್ಲಿ 5 ಶತಕ ಮತ್ತು 44 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 113 ರನ್. 

ಇದನ್ನೂ ಓದಿ : Shah Rukh Khan-Virat Kohli: ಶಾರುಖ್-ವಿರಾಟ್ ಫ್ಯಾನ್ಸ್ ನಡುವೆ ಮಹಾಯುದ್ಧ: ಆ ಒಂದು ಪ್ರಶ್ನೆ ಕೇಳಿದಕ್ಕೆ ಹೊತ್ತಿ ಉರಿಯಿತು ಇಂಟರ್ನೆಟ್!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News