RCB vs KKR highlights: ಆರಂಭಿಕ ಆಟಗಾರ ಜೇಸನ್ ರಾಯ್ ಅವರ ಅರ್ಧಶತಕ ಮತ್ತು ನಾಯಕ ನಿತೀಶ್ ರಾಣಾ ಅವರ ಅಬ್ಬರದ ಇನ್ನಿಂಗ್ಸ್‌’ನ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐದು ವಿಕೆಟ್‌ ನಷ್ಟಕ್ಕೆ 200 ರನ್ ಕಲೆ ಹಾಕಿತು. ಈ ರಣರೋಚಕ ಪಂದ್ಯ ಬುಧವಾರದಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದೆ.  


COMMERCIAL BREAK
SCROLL TO CONTINUE READING

ಜೇಸನ್ ರಾಯ್ 29 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 56 ರನ್ ಗಳಿಸಿ ತಂಡಕ್ಕೆ ಬಿರುಸಿನ ಆರಂಭ ನೀಡಿದರೆ, ರಾಣಾ 21 ಎಸೆತಗಳಲ್ಲಿ 48 ರನ್ ಕಲೆ ಹಾಕಿ ಡೆತ್ ಓವರ್‌’ನಲ್ಲಿ ತಂಡವು ಬೃಹತ್ ಮೊತ್ತ ಕಲೆ ಹಾಕುವಂತೆ ಮಾಡಿದರು. ಇದರಲ್ಲಿ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿಗಳು ಸೇರಿವೆ.


ಇದನ್ನೂ ಓದಿ: Indian Premier League 2023: ವ್ಯರ್ಥವಾದ ವಿರಾಟ್ ಅರ್ಧ ಶತಕ,ಆರ್ಸಿಬಿಗೆ 21 ರನ್ ಗಳ ಸೋಲು 


ಆರ್‌’ಸಿಬಿ ಪರ ವನಿಂದು ಹಸರಂಗ 24 ರನ್ ನೀಡಿದ 2 ವಿಕೆಟ್ ಪಡೆದರೆ, ವಿಜಯಕುಮಾರ್ ವಿಶಾಖ್ 41 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಮೊದಲು ನೈಟ್ ರೈಡರ್ಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ನಂತರ ಜೇಸನ್ ರಾಯ್ ಮತ್ತು ಜಗದೀಶನ್ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು.


ಮೊಹಮ್ಮದ್ ಸಿರಾಜ್ (33 ರನ್‌ಗಳಿಗೆ ಒಂದು ವಿಕೆಟ್) ಅವರ ಮೊದಲ ಓವರ್‌’ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ರಾಯ್, ನಂತರದ ಓವರ್‌ನಲ್ಲಿಯೂ ಒಂದು ಬೌಂಡರಿ ಬಾರಿಸಿದರು. ಜಗದೀಶನ್ ಅವರು ಡೇವಿಡ್ ವಿಲ್ಲಿ ಬೌಲಿಂಗ್’ನಲ್ಲಿ ಬೌಂಡರಿ ಬಾರಿಸುವ ಮೂಲಕ ಖಾತೆಯನ್ನು ತೆರೆದರು. ಅದೇ ರೀತಿ ಮುಂದಿನ ಓವರ್‌ ನಲ್ಲಿ ಎರಡು ಬಾರಿ ಬೌಂಡರಿಗಳನ್ನು ಸಿಡಿಸಿದರು.


ಶಹಬಾಜ್ ಅಹ್ಮದ್ ಬೌಲಿಂಗ್’ಗೆ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದ್ದರು ರಾಯ್. ಇದರಿಂದಾಗಿ ನೈಟ್ ರೈಡರ್ಸ್ ಪವರ್ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿತು. ಇನ್ನು ವಿಶಾಖ್ ಅವರ ಎಸೆತದಲ್ಲಿ ಒಂದು ರನ್ ಗಳಿಸಿದರು. ಈ ಸಂದರ್ಭದಲ್ಲಿ ಕೇವಲ 22 ಎಸೆತಗಳಲ್ಲಿ ಸತತ ಎರಡನೇ ಅರ್ಧಶತಕ ಪೂರೈಸಿದರು ರಾಯ್.


ಆದರೆ ವಿಶಾಖ್ ಅವರ ಮುಂದಿನ ಓವರ್‌’ನಲ್ಲಿ ದೊಡ್ಡ ಸ್ಕೋರ್ ಕಲೆಹಾಕುವ ಪ್ರಯತ್ನದಲ್ಲಿ ಬೌಂಡರಿ ಬಳಿ ನಿಂತಿದ್ದ ವಿಲ್ಲಿಗೆ ಜಗದೀಶ್‌ ಅವರು ಕ್ಯಾಚ್ ನೀಡಿದರು. 29 ಎಸೆತಗಳಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದ್ದರು ಜಗದೀಶ್‌. ಇದಾದ ಬಳಿಕ ವಿಶಾಖ್ ಅವರು ಅದೇ ಓವರ್‌’ನ ಕೊನೆಯ ಎಸೆತದಲ್ಲಿ ರಾಯ್ ಅವರನ್ನು ಬೌಲ್ಡ್ ಮಾಡಿದರು, ನೈಟ್ ರೈಡರ್ಸ್ 10 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 88 ರನ್ ಗಳಿಸಿದರು.


ವಿಶಾಖ್ ಅವರ ಮುಂದಿನ ಓವರ್‌ ನಲ್ಲಿ ನೈಟ್ ರೈಡರ್ಸ್ ನಾಯಕ ರಾಣಾ ಅವರು ಲಾಂಗ್ ಆಫ್‌ನಲ್ಲಿ ಅತ್ಯಂತ ಸುಲಭವಾದ ಕ್ಯಾಚ್ ಅನ್ನು ಸಿರಾಜ್ ಕೈಬಿಟ್ಟಾಗ ಕೊಲ್ಕತ್ತಾಗೆ ಮತ್ತೆ ಜೀವಕಳೆ ಬಂದಂತಾಯಿತು, ಲೈಫ್‌ ಲೈನ್‌ ನ ಲಾಭವನ್ನು ಪಡೆದುಕೊಂಡ ರಾಣಾ, ವಿಶಾಖ್ ಅವರ ಬೌಲಿಂಗ್ ನಲ್ಲಿ ಲಾಂಗ್ ಶಾಟ್ ಹೊಡೆಯಲು ಪ್ರಾರಂಭಿಸಿದರು.


ಇನ್ನು ಇದಾದ ನಂತರ ಮತ್ತೊಮ್ಮೆ ರಾಣಾ, ಸಿರಾಜ್ ಅವರ ಓವರ್‌ ನಲ್ಲಿ ಲೈಫ್ ಲೈನ್ ಪಡೆದರು ಎನ್ನಬಹುದು. ಈ ಸಮಯದಲ್ಲಿ ಹರ್ಷಲ್ ಪಟೇಲ್ ಕ್ಯಾಚ್ ಅನ್ನು ಫೈನ್ ಲೆಗ್‌ ನಲ್ಲಿ ಕೈಬಿಟ್ಟಿದ್ದರು. ನೈಟ್ ರೈಡರ್ಸ್ ತಂಡದ ನಾಯಕ ಓವರ್‌ನಲ್ಲಿ ಎರಡು ಸಿಕ್ಸರ್‌ಗಳೊಂದಿಗೆ ಈ ಲೈಫ್‌ ಲೈನ್‌ ನ ಲಾಭ ಪಡೆದುಕೊಂಡರು.


ಇದನ್ನೂ ಓದಿ: CSK: ಒಂದೊಮ್ಮೆ ಧೋನಿಯ ನೆಚ್ಚಿನ ಬೌಲರ್ ಆಗಿದ್ದ ಈತ… ಇಂದು ಒಂದೊತ್ತಿನ ಊಟಕ್ಕಾಗಿ ಬಸ್ ಓಡಿಸ್ತಿದ್ದಾನೆ!


ರಾಣಾ 17ನೇ ಓವರ್‌ ನಲ್ಲಿ ವಿಶಾಖ್ ಎಸೆತದಲ್ಲಿ ಸತತ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 17 ರನ್ ಗಳಿಸಿದರು. ಆದರೆ, ಮುಂದಿನ ಓವರ್‌ ನಲ್ಲಿ ಹಸ್ರಂಗ ಬೌಲಿಂಗ್‌ ಗೆ ವಿಶಾಖ್‌ ತಲೆ ತಗ್ಗಿಸುವಂತಾಯಿತು.  


ಇನ್ನು ಅದೇ ಓವರ್‌ ನಲ್ಲಿ ಅಯ್ಯರ್ (31) ಗ್ಲೆನ್ ಮ್ಯಾಕ್ಸ್‌ವೆಲ್‌ ಗೆ ಕ್ಯಾಚ್ ನೀಡಿ ಹಸರಂಗ ವಿಕೆಟ್ ಒಂದನ್ನು ಪಡೆದರು. ರಿಂಕು ಸಿಂಗ್ (10 ಎಸೆತಗಳಲ್ಲಿ ಔಟಾಗದೆ 18) 19ನೇ ಓವರ್‌ ನಲ್ಲಿ ಸಿರಾಜ್ ಅವರ ಸತತ ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿದರೆ, ಕೊನೆಯ ಓವರ್‌ ನಲ್ಲಿ ಡೇವಿಡ್ ವೊಯ್ಸಿ (ಮೂರು ಎಸೆತಗಳಲ್ಲಿ ಔಟಾಗದೆ 12) ಹರ್ಷಲ್‌ ಎಸೆಯಕ್ಕೆ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಒಟ್ಟಾರೆ ಕೊನೆಯ 5 ಓವರ್’ನಲ್ಲಿ 70 ರನ್ ಕಲೆ ಹಾಕಿ, ತಂಡದ ಒಟ್ಟು ಮೊತ್ತವನ್ನು 200 ರನ್ ಗೆ ತಲುಪಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ