CSK: ಒಂದೊಮ್ಮೆ ಧೋನಿಯ ನೆಚ್ಚಿನ ಬೌಲರ್ ಆಗಿದ್ದ ಈತ… ಇಂದು ಒಂದೊತ್ತಿನ ಊಟಕ್ಕಾಗಿ ಬಸ್ ಓಡಿಸ್ತಿದ್ದಾನೆ!

IPL Cricketer: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಈ ಕ್ರಿಕೆಟಿಗ ಒಂದು ಕಾಲದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನೆಚ್ಚಿನ ಬೌಲರ್ ಜೊತೆಗೆ ಮ್ಯಾಚ್ ವಿನ್ನರ್ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ಅವರು ಇಂದು ಜೀವನ ನಡೆಸಲು ಹೆಣಗಾಡುತ್ತಿದ್ದಾರೆ

Written by - Bhavishya Shetty | Last Updated : Apr 26, 2023, 03:32 PM IST
    • ಐಪಿಎಲ್‌’ನಲ್ಲಿ ಧೋನಿ ಜೊತೆ ಆಡಿದ ಕ್ರಿಕೆಟಿಗನೊಬ್ಬ ಸದ್ಯ ಆಸ್ಟ್ರೇಲಿಯಾದಲ್ಲಿ ಬಸ್ ಓಡಿಸುತ್ತಿದ್ದಾರೆ.
    • ಒಂದು ಕಾಲದಲ್ಲಿ ಧೋನಿ ಅವರ ನೆಚ್ಚಿನ ಬೌಲರ್ ಜೊತೆಗೆ ಮ್ಯಾಚ್ ವಿನ್ನರ್ ಎಂದು ಪರಿಗಣಿಸಲ್ಪಟ್ಟಿದ್ದರು.
    • ಸೂರಜ್ ರಣದೀವ್ ಶ್ರೀಲಂಕಾ ಪರ 12 ಟೆಸ್ಟ್ ಪಂದ್ಯಗಳಲ್ಲಿ 46 ವಿಕೆಟ್ ಪಡೆದಿದ್ದಾರೆ.
CSK: ಒಂದೊಮ್ಮೆ ಧೋನಿಯ ನೆಚ್ಚಿನ ಬೌಲರ್ ಆಗಿದ್ದ ಈತ… ಇಂದು ಒಂದೊತ್ತಿನ ಊಟಕ್ಕಾಗಿ ಬಸ್ ಓಡಿಸ್ತಿದ್ದಾನೆ!  title=
Suraj Randiv

IPL Cricketer: ಐಪಿಎಲ್ ಮೇಲೆ ಜನರಿಗೆ ಕ್ರೇಜ್ ಪ್ರತೀದಿನ ಹೆಚ್ಚಾಗುತ್ತಲೇ ಇದೆ. ಈ ಪಂದ್ಯಾವಳಿಯು ರಾತ್ರೋರಾತ್ರಿ ಒಬ್ಬ ಆಟಗಾರನನ್ನು ಕೋಟ್ಯಾಧಿಪತಿಯನ್ನಾಗಿಸುವ ಸಾಮರ್ಥ್ಯ ಹೊಂದಿದೆ. ಆದರೆ ಒಂದು ಕಾಲದಲ್ಲಿ ಐಪಿಎಲ್‌’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌’ನ ಸ್ಟಾರ್ ಬೌಲರ್ ಆಗಿದ್ದ ಒಬ್ಬ ನತದೃಷ್ಟ ಕ್ರಿಕೆಟಿಗ, ಇಂದು ಆಹಾರಕ್ಕಾಗಿ ಪರದಾಡುವಂತಾಗಿದೆ.  

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಮಾಡಿದ ಆ ಒಂದು ತಪ್ಪಿಗೆ 24 ಲಕ್ಷ ರೂ. ದಂಡ: ಐಪಿಎಲ್’ನಿಂದ ನಿಷೇಧ!

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಈ ಕ್ರಿಕೆಟಿಗ ಒಂದು ಕಾಲದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನೆಚ್ಚಿನ ಬೌಲರ್ ಜೊತೆಗೆ ಮ್ಯಾಚ್ ವಿನ್ನರ್ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ಅವರು ಇಂದು ಜೀವನ ನಡೆಸಲು ಹೆಣಗಾಡುತ್ತಿದ್ದಾರೆ.

ಐಪಿಎಲ್‌’ನಲ್ಲಿ ಧೋನಿ ಜೊತೆ ಆಡಿದ ಕ್ರಿಕೆಟಿಗನೊಬ್ಬ ಸದ್ಯ ಆಸ್ಟ್ರೇಲಿಯಾದಲ್ಲಿ ಬಸ್ ಓಡಿಸುತ್ತಿದ್ದಾರೆ. ಶ್ರೀಲಂಕಾದ ಈ ಕ್ರಿಕೆಟಿಗನ ಹೆಸರು ಸೂರಜ್ ರಾಂದಿವ್. ಭಾರತದಲ್ಲಿ ನಡೆದ 2011 ಕ್ರಿಕೆಟ್ ವಿಶ್ವಕಪ್‌’ನಲ್ಲಿ ಸೂರಜ್ ರಣದೀವ್ ಶ್ರೀಲಂಕಾ ತಂಡದ ಭಾಗವಾಗಿದ್ದರು. ಸೂರಜ್ ರಣದೀವ್ ಅವರು ಧೋನಿ ನಾಯಕತ್ವದ ಸಿಎಸ್‌ಕೆ ಪರ ಆಡಿದ್ದಾರೆ. 2012ರಲ್ಲಿ ಸಿಎಸ್‌ಕೆ ಪರ ಆಡುವಾಗ ರಣದೀವ್ 8 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದರು.

ಶ್ರೀಲಂಕಾ ಪರ ಕ್ರಿಕೆಟ್ ಆಡಿದ್ದ ಸೂರಜ್ ರಣದೀವ್ ಇದೀಗ ಬಸ್ ಚಾಲಕನಾಗಿದ್ದಾರೆ. ಶ್ರೀಲಂಕಾದ ಮಾಜಿ ಸ್ಪಿನ್ನರ್ ಸೂರಜ್ ರಾಂದಿವ್ 2019ರಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದರು. ಬಳಿಕ ಅಲ್ಲಿ ಬಸ್ ಓಡಿಸುವುದರ ಜೊತೆಗೆ ಸ್ಥಳೀಯ ಕ್ಲಬ್‌’ಗಾಗಿ ಕ್ರಿಕೆಟ್ ಆಡಿದರು. ಸೂರಜ್ ರಣದೀವ್ ಶ್ರೀಲಂಕಾ ಪರ 12 ಟೆಸ್ಟ್ ಪಂದ್ಯಗಳಲ್ಲಿ 46 ವಿಕೆಟ್ ಪಡೆದಿದ್ದಾರೆ. 31 ಏಕದಿನ ಪಂದ್ಯಗಳಲ್ಲಿ 36 ವಿಕೆಟ್ ಹಾಗೂ 7 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ.

ನೋಬಾಲ್ ವಿವಾದ!

2010ರ ಆಗಸ್ಟ್ 16 ರಂದು ಭಾರತ-ಶ್ರೀಲಂಕಾ ನಡುವೆ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರರಾಗಿದ್ದ ಸೆಹ್ವಾಗ್ ಲಂಕಾದ ಕುತಂತ್ರದಿಂದ ಶತಕ ತಪ್ಪಿಸಿಕೊಂಡಿದ್ದರು. ಪಂದ್ಯದ 35ನೇ ಓವರ್‍ನಲ್ಲಿ ಭಾರತದ ಗೆಲುವಿಗೆ 5 ರನ್ ಬೇಕಿತ್ತು. ಈ ವೇಳೆ ಸೆಹ್ವಾಗ್ ಶತಕ ಗಳಿಸಲು ಕೇವಲ 1 ರನ್ ಅವಶ್ಯವಿತ್ತು. ಆದರೆ ಲಂಕಾ ಬೌಲರ್ ಸೂರಜ್ ರಣದೀವ್ ಎಸೆದ ಮೊದಲ ಎಸೆತ ಬೈ ಆಗಿದ್ದರಿಂದ ಭಾರತದ ಖಾತೆಗೆ 4 ರನ್ ಸಿಕ್ಕಿತ್ತು. ಮುಂದಿನ 2 ಎಸೆತಗಳಲ್ಲಿ ಸೆಹ್ವಾಗ್ ರನ್ ಗಳಿಸಲು ವಿಫಲರಾದರು. ಆದರೆ 5ನೇ ಎಸೆತದಲ್ಲಿ ಸೆಹ್ವಾಗ್ ಅವರು ಸಿಕ್ಸರ್ ಸಿಡಿಸಿ, ಶತಕದ ಜೊತೆಗೆ ಟೀಂ ಇಂಡಿಯಾದ ಗೆಲುವನ್ನು ಸಂಭ್ರಮಿಸುವ ಯೋಚನೆಯಲ್ಲಿದ್ದರು. ಆದರೆ ಆ ಮಹತ್ವದ ಎಸೆತವನ್ನು ರಣದೀವ್ ಬೇಕೆಂದೇ ನೋ ಬಾಲ್ ಎಸೆದುಬಿಟ್ಟಿದ್ದರು. ಇದರಿಂದ ಸೆಹ್ವಾಗ್ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು. ಈ ಕುತಂತ್ರದಿಂದ ಶ್ರೀಲಂಕಾ ತಂಡವು ವ್ಯಾಪಕ ಟೀಕೆಯನ್ನು ಎದುರಿಸಿತ್ತು

ಇದನ್ನೂ ಓದಿ: Team Indiaಗೆ ಸಿಕ್ಕಾಯ್ತು ಬುಮ್ರಾ ತರಹದ ಬೌಲರ್! IPLನಲ್ಲಿ ಅಬ್ಬರಿಸುತ್ತಿರುವ ಈತ ಆಟೋ ಡ್ರೈವರ್’ನ ಮಗ

ವೀರೇಂದ್ರ ಸೆಹ್ವಾಗ್ ಜೊತೆಗಿನ ಆ ಮೋಸದಿಂದಾಗಿ ಸೂರಜ್ ರಣದೀವ್ ಪ್ರಪಂಚದಾದ್ಯಂತ ಕುಖ್ಯಾತರಾದರು. ಇದಾದ ನಂತರ 2011ರ ವಿಶ್ವಕಪ್‌’ನ ಫೈನಲ್‌’ನಲ್ಲಿ ಏಕಾಏಕಿ ತಂಡಕ್ಕೆ ಸೇರ್ಪಡೆಗೊಂಡರೂ ಕ್ರಿಕೆಟಿಗನಾಗಿ ಯಶಸ್ಸು ಕಾಣದ ಅವರು ಇಂದು ಆಸ್ಟ್ರೇಲಿಯಾದಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News