ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಹರಾಜಾದ ಆಸ್ಟ್ರೇಲಿಯಾ ವೇಗಿ ! ಸೇರಿದ್ದು ಈ ತಂಡವನ್ನ
mitchel starc: ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬೆಲೆಗೆ ಮಾರಟವಾದ ಇಬ್ಬರು ಆಸ್ಟ್ರೇಲಿಯಾ ಆಟಗಾರರು. ಮಿಚೆಲ್ ಸ್ಟಾರ್ಕ್ 24.75 ಕೋಟಿಗಳಿಗೆ ಸೇರಿದ್ದು ಈ ತಂಡವನ್ನ.
2024 IPl auction: ದುಬೈನಲ್ಲಿ 17ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ಇಂದು ನಡೆದಿದೆ. ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆನ್ನಲ್ಲೇ ಈ ಭಾರಿಯ ಹರಾಜಿನಲ್ಲಿ ಆಸ್ಟ್ರೇಲಿಯಾ ಆಟಗಾರರಿಗೆ ಹೆಚ್ಚು ಬೇಡಿಕೆ ಕಂಡುಬಂದಿದೆ. ಆಸ್ಟ್ರೇಲಿಯಾದ ಇಬ್ಬರು ಆಟಗಾರರು ದೊಡ್ಡ ಮೊತ್ತಕ್ಕೆ ಸೇಲ್ ಆಗಿ ಐಪಿಎಲ್ ಇತಿಹಾಸದಲ್ಲೇ ಅತೀ ದುಬಾರಿಯ ಆಟಗಾರರಾಗಿ ಹೊರಹೊಮ್ಮಿದ್ದಾರೆ.ಎಲ್ಲಾ ತಂಡಗಳ ಖರಿದಿ ದಾಖಲೆಗಳನ್ನು ಪರಿಶೀಲಿಸಿ ಈ ಭಾರಿಯ ಐಪಿಎಲ್‌ನಲ್ಲಿ 20 ಕೋಟಿಯ ಮಾರ್ಕ್ ಇರಬಹುದು ಎಂದು ಊಹಿಸಲಾಗಿತ್ತು. ಆದರೆ ಈ ಇಬ್ಬರು ಆಸ್ಟ್ರೇಲಿಯಾ ಆಟಗಾರರು ಅದನ್ನು ದಾಟಿ ಮುಂದೆ ಹೋಗಿದ್ದಾರೆ.
ಇದನ್ನು ಓದಿ- IPL ಹರಾಜಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ತಮ್ಮ ಹೆಸರನ್ನು ಹಿಂದಕ್ಕೆ ಪಡೆದುಕೊಂಡ ಮೂವರು ಆಟಗಾರರು !
ಆಸ್ಟ್ರೇಲಿಯಾ ತಂಡದ ನಾಯಕ ಫ್ಯಾಟ್ ಕಮ್ಮಿನ್ಸ್ ಬರೊಬ್ಬರಿ 20.50 ಕೋಟಿ ರೂಗಳಿಗೆ ಹೈದರಬಾದ್ ತಂಡವನ್ನು ಸೇರಿದ್ದು, ಸೇರುವ ಮೂಲಕ ಭಾರಿ ಮೊತ್ತಕ್ಕೆ ಸೇಲಾದ ಆಟಗಾರ ಎನ್ನಲಾಗುತ್ತಿತ್ತು. ಹರಾಜು ಪ್ರಕ್ರಿಯೆ ಮುಂದು ವರೆಯುತ್ತಿದ್ದಂತೆ ಇನ್ನೊಬ್ಬ ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಸ್ಟಾರ್ಕ್ ಇತಿಹಾಸದ ಅಂತ್ಯಂತ ದುಬಾರಿ ಆಟಗಾರರಾಗಿ 24.75 ಕೋಟಿಗಳಿಗೆ ಕೆಕೆಆರ್ ತಂಡಕ್ಕೆ ಸೇಲ್ ಆಗಿದ್ಧಾರೆ. ಮಿಚೆಲ್ ಸ್ಟಾರ್ಕ್‌ರವ ಹೆಸರು ಹರಾಜಿನಲ್ಲಿ ಕೇಳಿ ಬರುತ್ತಿದ್ದಂತೆ ಭಾಗವಹಿಸಿದ್ದ 10 ತಂಡಗಳು ಅವರನ್ನು ಖರಿದಿಸಲು ಮುಗಿಬಿದ್ದವು. ಆರ್‌ಸಿಬಿ, ಮುಂಬೈ, ಸಿಎಸ್‌ಕೆ ಮತ್ತು ಕೆಕೆಆರ್ ತಂಡಗಳ ಮಧ್ಯೆ ಭಾರಿ ಪೈಪೋಟಿಯೇ ಏರಪಟ್ಟಿತ್ತು. ಕೊನೆಗು ಕೆಕೆಅರ್ ತಂಡ ಅವರನ್ನು 24.75 ಕೋಟಿಗಳಿಗೆ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು.
ಇನ್ನೂ ಭಾರತದ ವೇಗಿ ಹರ್ಷಲ್ ಪಟೇಲ್ ಅವರನ್ನು ಪಂಜಾಬ್ ಕಿಂಗ್ಸ್ ₹11.75 ಕೋಟಿಗೆ ಪಡೆದುಕೊಂಡಿದೆ. ಈ ಮೂಲಕ ಭಾರತದ ಆಟಗಾರರಲ್ಲಿ ಅತ್ಯಧಿಕ ಬೆಲೆಗೆ ಮಾರಾಟ ವಾದ ಆಟಗಾರರಾದರು. ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 92 ಪಂದ್ಯಗಳನ್ನು ಆಡಿದ್ದಾರೆ ಮತ್ತು 111 ವಿಕೆಟ್ಗಳನ್ನು ಪಡೆದಿದ್ದಾರೆ ಹಾಗು ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದರು . ಮುಂಬೈ ಇಂಡಿಯನ್ಸ್ ತಂಡವು ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೊಟ್ಜಿ ಅವರನ್ನು 5 ಕೋಟಿ ನೀಡಿ ತೆಗೆದುಕೊಂಡಿತು.
ಇದನ್ನು ಓದಿ-ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ರಚಿನ್ ರವೀಂದ್ರ : ದಕ್ಕಿದ್ದು ಮಾತ್ರ ನಿರೀಕ್ಷೆಗಿಂತ ಕಡಿಮೆ ಹಣ !
ನ್ಯೂಜಿಲೆಂಡ್ ತಂಡದ ಮಾರಕ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಅವರನ್ನು 14 ಕೋಟಿ ರೂಗಳಿಗೆ ಚನೈ ಸೂಪರ್ ಕಿಂಗ್ ತಂಡವು ತಮ್ಮ ಬತ್ತಳಿಕೆಕೆ ಗೆ ತೆಗೆದು ಕೊಂಡರು.16ನೇ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದಲ್ಲಿಆಡಿದ್ದ ಡ್ಯಾರಿಲ್ ಮಿಚೆಲ್ ಈ ಭಾರಿಯ ವಿಶ್ವ ಕಪ್‌ನಲ್ಲಿ ಅತ್ಯಧ್ಬುತ ಪ್ರದವರ್ಶನ ತೋರಿಸಿದ್ದರು. ಸಿಎಸ್‌ಕೆ ಪರ ಆಡಿದ 2 ಪಂದ್ಯಗಳಲ್ಲಿ 33ಗಳನ್ನು ಗಳಿಸಿದಿದ್ದರು. ಸದ್ಯಕ್ಕೆ ಈ ಭಾರಿಯ ಹಾರಜಿನಲ್ಲಿ ಮಿಚೆಲ್ ಸ್ಟಾರ್ಕ್ ಅವರು ಅತ್ಯಧಿಕ ಬೆಲೆಗೆ ಹರಾಜಾದ ಆಟಗಾರರಾಗಿದ್ದಾರೆ.
ತಂಡಗಳ ಪರ್ಸ್‌ನಲ್ಲಿ ಉಳಿದಿರುವ ಹಣ ?
ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹6.75 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್: ₹6.55 ಕೋಟಿ
ಪಂಜಾಬ್ ಕಿಂಗ್ಸ್: ₹13.15 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್: ₹3.20 ಕೋಟಿ
ದೆಹಲಿ ರಾಜಧಾನಿಗಳು: ₹16.85 ಕೋಟಿ
ರಾಜಸ್ಥಾನ್ ರಾಯಲ್ಸ್: ₹0.90 ಕೋಟಿ
ಮುಂಬೈ ಭಾರತೀಯರು: ₹7.95 ಕೋಟಿ
ಸನ್‌ರೈಸರ್ಸ್ ಹೈದರಾಬಾದ್: ₹3.40 ಕೋಟಿ
ಲಕ್ನೋ ಸೂಪರ್ ಜೈಂಟ್ಸ್: ₹4.15 ಕೋಟಿ
ಗುಜರಾತ್ ಟೈಟಾನ್ಸ್: ₹21.45 ಕೋಟಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.