MI vs KKR: ಇಂಡಿಯನ್ ಪ್ರೀಮಿಯರ್ ಲೀಗ್‌’ನ 16 ನೇ ಸೀಸನ್ ದೇಶದ ವಿವಿಧ ನಗರಗಳಲ್ಲಿ ನಡೆಯುತ್ತಿದೆ. ಈ ಋತುವಿನ 22ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ. ಮುಂಬೈ ಐಪಿಎಲ್‌’ನಲ್ಲಿ 5 ಬಾರಿ ಟ್ರೋಫಿ ಗೆದ್ದಿರುವ ದಾಖಲೆಯನ್ನು ಹೊಂದಿದೆ. ಇನ್ನು ಕೋಲ್ಕತ್ತಾ ಎರಡು ಬಾರಿ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಎಲ್ಲದರ ಮಧ್ಯೆ, ಕೆಕೆಆರ್ ನಾಯಕ ನಿತೀಶ್ ರಾಣಾ ಓರ್ವ ಆಟಗಾರನಿಗೆ ಅವಕಾಶ ನೀಡದೆ ಮೋಸ ಮಾಡುತ್ತಿದ್ದಾರೆಯೇ? ಎಂಬ ಅನುಮಾನ ಮೂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 70 ಸಾವಿರದ iPhone 13 ಜಸ್ಟ್ 30 ಸಾವಿರಕ್ಕೆ! ನಿಮ್ಮ ಫೇವರೇಟ್ ಫೋನ್ ಖರೀದಿಸಲು ಇದುವೇ ಸರಿಯಾದ ಟೈಂ!


ಐಪಿಎಲ್-2023ರ 22ನೇ ಪಂದ್ಯ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇನ್ನು ಸೂರ್ಯಕುಮಾರ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು.


ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಹರ್ಷಿತ್ ರಾಣಾ ಅವರಿಗೆ ಅವಕಾಶಗಳೇ ಬರುತ್ತಿಲ್ಲ. ಹರ್ಷಿತ್’ಗೆ ಕೇವಲ 21 ವರ್ಷ. ಇವರು ಪ್ರಸಕ್ತ ಐಪಿಎಲ್ ಋತುವಿನಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ. ದೆಹಲಿ ಮೂಲದ ಮಧ್ಯಮ ವೇಗಿಯಾಗಿರುವ ಇವರು, ಕಳೆದ ಐಪಿಎಲ್‌’ನಲ್ಲಿ ಎರಡು ಪಂದ್ಯಗಳಲ್ಲಿ 1 ವಿಕೆಟ್ ಪಡೆದಿದ್ದರು. ಸದ್ಯ ಅವರು ದೇಶೀಯ ಕ್ರಿಕೆಟ್‌’ನಲ್ಲಿ ದೆಹಲಿ ಪರ ಆಡುತ್ತಿದ್ದಾರೆ.


ಹರ್ಷಿತ್ ಇದುವರೆಗೆ ಕೇವಲ 5 ಪ್ರಥಮ ದರ್ಜೆ ಮತ್ತು ಒಂದು ಲಿಸ್ಟ್-ಎ ಪಂದ್ಯವನ್ನಾಡಿದ್ದಾರೆ. ಪ್ರಥಮ ದರ್ಜೆಯಲ್ಲಿ 21 ವಿಕೆಟ್‌’ಗಳನ್ನು ಪಡೆದಿದ್ದರೆ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಖಾತೆಯನ್ನು ತೆರೆಯಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಬ್ಯಾಟ್ ಮಾಡಿದ್ದ ಅವರು ಅದ್ಭುತ ಪ್ರದರ್ಶನ ನೀಡಿ ಅರ್ಧಶತಕ ಬಾರಿಸಿದ್ದರು.


ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯಕ್ಕೂ ಮುನ್ನ ಮನೆಯಿಂದ ಈ ವಸ್ತುಗಳನ್ನು ಹೊರಹಾಕಿದರೆ ಇಷ್ಟಾರ್ಥ ಸಿದ್ಧಿಸುವಳು ವಿಷ್ಣುಪ್ರಿಯೆ


ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಯಿಂಗ್-11: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಎನ್ ಜಗದೀಶನ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫರ್ಗುಸನ್ ಮತ್ತು ವರುಣ್ ಚಕ್ರವರ್ತಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.